ಬೆಂಗಳೂರು: 2019ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ವಾರದೊಳಗೆ ಪ್ರಕಟವಾಗಲಿದೆ. ಇದೇ ಮೊದಲ ಬಾರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಿಇಟಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸುತ್ತಿರುವುದರಿಂದ ಏ.17ರಂದು ಪ್ರಕಟವಾಗುವುದು ಖಚಿತವಾಗಿದೆ.
ಸಿಇಟಿ ಏ.29ರಿಂದ ಮೇ 1ರವರೆಗೆ ನಡೆಯಲಿದೆ. ಪಿಯುನಲ್ಲಿ ವಿಜ್ಞಾನ ವಿಷಯ ವ್ಯಾಸಂಗ ಮಾಡಿರುವ ಬಹುತೇಕ ವಿದ್ಯಾರ್ಥಿಗಳು ಸಿಇಟಿ ಬರೆಯುವುದರಿಂದ ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಿ ನಿರಾಳವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಪಿಯು ಫಲಿತಾಂಶವನ್ನು ಶೀಘ್ರ ಪ್ರಕಟಿಸಲು ತೀರ್ವನಿಸಲಾಗಿದೆ. ಪಿಯು ಇಲಾಖೆ ನಿರ್ದೇಶಕರಾಗಿದ್ದ ಪಿ.ಸಿ. ಜಾಫರ್ ದ್ವಿತೀಯ ಪಿಯು ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದರು.
ಇದರ ಪರಿಣಾಮ ಪಿಯು ಮೌಲ್ಯಮಾಪನ ಶೇ.90 ಮುಗಿದಿದೆ. ಫಲಿತಾಂಶ ಬಿಡುಗಡೆ ಮಾಡುವ ಪ್ರಕ್ರಿಯೆಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಪಿಯು ಇಲಾಖೆಗೆ ಕೆಲ ದಿನಗಳ ಅವಶ್ಯಕತೆ ಇರುವುದರಿಂದ ಒಂದು ವಾರದೊಳಗೆ ಫಲಿತಾಂಶ ಪ್ರಕಟಿಸಲಿದೆ. ಈ ವರ್ಷ ಮೌಲ್ಯಮಾಪಕರು ಅಂಕಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿರುವುದರಿಂದ ಫಲಿತಾಂಶದ ಸಿದ್ಧತೆ ಕೆಲಸ ಪಿಯು ಇಲಾಖೆಗೆ ಸರಳವಾಗಿದೆ. ಬುಧವಾರ ಪಿಯು ನಿರ್ದೇಶಕರಾಗಿ ಸಿ.ಶಿಖಾ ಅಧಿಕಾರವಹಿಸಿಕೊಂಡಿದ್ದು, ಫಲಿತಾಂಶ ಪ್ರಕಟಣೆಗೆ ಸಿದ್ಧತೆ ಆರಂಭಿಸಿದ್ದಾರೆ. 2019ನೇ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಅನುಕೂಲ: ಸಿಇಟಿ ಮೊದಲಿಗೆ ಪಿಯು ಫಲಿತಾಂಶ ಪ್ರಕಟವಾಗುವುದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಪಿಯುನಲ್ಲಿ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಅನುಕೂಲವಾಗಲಿದೆ. ಸಿಇಟಿ ಫಲಿತಾಂಶದ ವೇಳೆ ಶೇ.50 ಪಿಯು ಮತ್ತು ಶೇ.50 ಸಿಇಟಿ ಅಂಕಗಳನ್ನು ಪರಿಗಣಿಸಲಾಗುತ್ತದೆ. ಈ ವರ್ಷ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್…
15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ : ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…
ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…
ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…
ಉಡುಪಿ:ಮಾದಕ ದ್ರವ್ಯ ಪ್ರಕರಣ : ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…
ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…