ಭಟ್ಕಳ : ಇರಾನ್‌ಗೆ ಉದ್ಯೋಗಕ್ಕೆ ತೆರಳಿ ಅಲ್ಲಿನ ನೌಕೆಯೊಂದರಲ್ಲಿ ಕಳೆದ 20 ತಿಂಗಳುಗಳಿಂದ ಸಿಲುಕಿಕೊಂಡಿದ್ದ ಭಟ್ಕಳ ಅಝಾದ್ ನಗರದ ಯುವಕ ಯಾಸೀನ್ ಶಾಹ ಮಕಾನ್ದಾರ್(31) ಬುಧವಾರ ಬೆಂಗಳೂರು ತಲುಪಿದ್ದು, ಗುರುವಾರ ಭಟ್ಕಳ ತಲುಪಲಿದ್ದಾರೆ.
ಬೆಂಗಳೂರು ತಲುಪಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಯಾಸೀನ್ ಶಾಹ ಮಕಾನ್ದಾರ್, ನನ್ನನ್ನು ಕಷ್ಟದಿಂದ ಪಾರುಮಾಡಿದ ಏಮ್ ಇಂಡಿಯಾ ಫೋರಂನ ಶಿರಾಲಿ ಮುಝಫ್ಫರ್ ಶೇಕ್ ಹಾಗೂ ಭಟ್ಕಳದ ಯೂಸೂಫ್ ಬರ್ಮಾವರ್, ಸರಫ್ರಾಝ್ ಶೇಕ್, ಅಫ್ಝಲ್ ಎಸ್.ಎಂ. ಹಾಗೂ ನ್ಯಾಯವಾದಿ ಯಾಸಿರ್ ಅರಫಾತ್ ಮಕಾನ್ದಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ವಿಸಾ ಏಜೆಂಟರ ಮೂಲಕ ಇರಾನ್ ನೌಕೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ, ಕಳೆದ 20 ತಿಂಗಳುಗಳಿಂದ ಹಡಗಿನಲ್ಲಿ ಸಿಲುಕಿಕೊಂಡಿದ್ದು ವೇತನವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಈ ಸಂದರ್ಭ ಭಾರತಕ್ಕೆ ಮರಳುವ ಕುರಿತು ಯೋಚಿಸಿದ್ದೆ. ಆದರೆ, ಯಾರ ಸಂಪರ್ಕವೂ ಇಲ್ಲದಿದ್ದ ಕಾರಣ ಏನೂ ಮಾಡಲಾದ ಸ್ಥಿತಿಯಲ್ಲಿದ್ದೆ ಎಂದರು.
ಬಳಿಕ ಏಮ್ಸ್ ಇಂಡಿಯಾ ಫೋರಂನ ಶಿರಾಲಿ ಮುಝಪ್ಪರ್ ಶೇಕ್ ಮತ್ತು ಅವರ ತಂಡ ನನ್ನನ್ನು ಸಂಪರ್ಕಿಸಿ ಪ್ರತಿ ಹೆಜ್ಜೆಗೂ ಮಾರ್ಗದರ್ಶನ ನೀಡಿತು. ಅವರ ಮಾರ್ಗದರ್ಶನದಂತೆ ಇದೀಗ ನನ್ನ ತಾಯ್ನೆಡಿಗೆ ತಲುಪಿದ್ದೇನೆ. ಅಲ್ಲದೆ, ತಂಡದ ಪ್ರಯತ್ನದ ಫಲವಾಗಿ ನನಗೆ ಬರಬೇಕಾಗಿದ್ದ 3,800 ಡಾಲರ್ ವೇತನದಲ್ಲಿ 2,000 ಡಾಲರ್ ವೇತನ ದೊರೆತಿದೆ. ಇದಕ್ಕಾಗಿ ಅವರಿಗೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.
ಇರಾನ್‌ನಿಂದ ಬೆಂಗಳೂರಿಗೆ ಬಂದ ನನಗೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ಜೊತೆಗೆ ಭಟ್ಕಳಕ್ಕೆ ತೆರಳಲು ಬಸ್ ಟಿಕೆಟ್, ಊಟ, ತಿಂಡಿಯ ವ್ಯವಸ್ಥೆಯನ್ನೂ ಏಮ್ ಇಂಡಿಯಾ ಫೋರಂ ಮಾಡಿದೆ ಎಂದು ಭಾವುಕರಾದ ಯಾಸೀನ್ ಶಾಹ, ಏಮ್ ಇಂಡಿಯಾ ಫೋರಂಗೆ ಕೃತಜ್ಞತೆ ಸಲ್ಲಿಸಿದರು.
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…
ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ .. ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ…
ಟೋಲ್ ಪ್ಲಾಜಾಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ನವದೆಹಲಿ: ಉತ್ತರ ಪ್ರದೇಶದ ಕೌಶಂಬಿ…
ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಂಪತಿ ಭೇಟಿ ಕೊಪ್ಪಳ: ಖ್ಯಾತ ಕ್ರಿಕೆಟ್ ಆಟಗಾರ, ಟೀಂ…
ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…
ಬೆಂಗಳೂರು: ಡೇ ಕೇರ್ ಸೆಂಟರ್ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ ಬೆಂಗಳೂರು: ಇಲ್ಲಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇಕೇರ್ ಸೆಂಟರ್…