ಕೊಲಂಬೊ : ಶ್ರೀಲಂಕಾದಲ್ಲಿ ಕಳೆದ ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ 200 ಇಸ್ಲಾಮಿಕ್ ಧರ್ಮ ಬೋಧಕರು ಸೇರಿ 600 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಿದೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಲಂಕಾ ಗೃಹ ಸಚಿವ ವಜ್ರ ಅಭ್ಯವರ್ಧನೆ, ಈ ಎಲ್ಲ ವಿದೇಶಿಗರು ಕಾನೂನಾತ್ಮಕವಾಗಿಯೇ ದೇಶಕ್ಕೆ ಬಂದಿದ್ದಾರೆ. ಆದರೆ ಭದ್ರತೆ ಹಾಗೂ ಅವರ ವೀಸಾ ಅವಧಿ ಮುಗಿದಿರುವ ಕಾರಣದಿಂದಾಗಿ ದಂಡ ವಿಧಿಸಿ ಅವರನ್ನು ದೇಶದಿಂದ ಹೊರಹಾಕಲಾಗಿದೆ. ವೀಸಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸಿದ್ದು ಧಾರ್ಮಿಕ ಶಿಕ್ಷಕರಿಗೆ ವೀಸಾ ನಿರ್ಬಂಧಿಸಲಾಗಿದೆ.
ಹಾಗೂ ಹೊರಹಾಕಲ್ಪಟ್ಟ ಮೌಲ್ವಿಗಳು ಬಾಂಗ್ಲಾ, ಭಾರತ, ಮಾಲ್ಡೀವ್ಸ್ ಮತ್ತು ಪಾಕಿಸ್ತಾನ ದೇಶಕ್ಕೆ ಸೇರಿದವರಾಗಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಇನ್ನು ಈಸ್ಟರ್ ಭಾನುವಾರ ದಾಳಿ ನಡೆದ ನಂತರ ಶ್ರೀಲಂಕಾದಲ್ಲಿ ಭದ್ರತಾ ಪಡೆ ನಡೆಸಿದ ಎಲ್ಲಾ ಕಾರ್ಯಾಚರಣೆ ಬಳಿಕ ಸೋಮವಾರದಿಂದ ಶಾಲಾ-ಕಾಲೇಜುಗಳು ಪುನಾರಾಂಭವಾಗಲಿವೆ ಎಂದು ಪೊಲೀಸ್ ಇಲಾಖೆಯ ವಕ್ತಾರ ರನ್ ವಾಲ್ ಗುಣಶೇಖರ್ ಹೇಳಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…