Featured

200 ಯೂನಿಟ್ ವಿದ್ಯುತ್  ಫ್ರೀ ಕೊಡಿ ಎನ್ನುವವರಿಗೆ ವಿವೇಕ ಇದೆಯಾ..? : ಸಿಎಂ ಸಿದ್ದರಾಮಯ್ಯ – Vishwanews24

200 ಯೂನಿಟ್ ವಿದ್ಯುತ್  ಫ್ರೀ ಕೊಡಿ ಎನ್ನುವವರಿಗೆ ವಿವೇಕ ಇದೆಯಾ..? : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಗೃಹಜ್ಯೋತಿಯಡಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಿ ಎಂಬ ಬಿಜೆಪಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು ನೀವು ವಿವೇಕ ಇಟ್ಟುಕೊಂಡು ಮಾತನಾಡಬೇಕು, 200 ಯೂನಿಟ್ ಹೇಳಿದ್ದೀರಿ, ಅಷ್ಟೇ ಕೊಡಿ ಎಂದು ಹೇಳುತ್ತಿದ್ದಾರೆ.

ಎಷ್ಟು ವಿದ್ಯುತ್ ಬಳಸುತ್ತಿದ್ದಾರೋ ಅಷ್ಟನ್ನೇ ಬಳಸಬೇಕು. ಹೆಚ್ಚು ಬಳಸಿದರೆ ದುಂದು ವೆಚ್ಚ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಜನರಿಗೆ ನೀಡಿರುವ ಉಚಿತ ವಿದ್ಯುತ್ ವಿಚಾರವಾಗಿ ವಿಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ವರ್ಷದಲ್ಲಿ ಜನರು ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದಾರೋ ವಾರ್ಷಿಕ ಸರಾಸರಿ ಮೇಲೆ ಹೆಚ್ಚುವರಿ 10% ನೀಡಲು ಅವಕಾಶ ಕೊಟ್ಟಿದ್ದೇವೆ. ಅದರ ಮೇಲೆ ಹೆಚ್ಚು ವಿದ್ಯುತ್ ಬಳಸಿದ್ರೆ ಕಟ್ಟಬೇಕು. ಆದರೆ ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.ಜನರಿಗೆ ನಿಯಮಿತವಾಗಿ ವಿದ್ಯುತ್ ಬಳಸಿ ಅಂತಾ ಹೇಳೋದು ತಪ್ಪಾ? ನಾನೊಬ್ಬನೇ ಬದಕಿದ್ರೆ ಸಾಲದು, ನನ್ನ ಸುತ್ತ ಇರುವವರೆಲ್ಲಾ ಬದಕಬೇಕು. ವಿಪಕ್ಷದವರು ವಿರೋಧ ಮಾಡುತ್ತಲೇ ಇರಲಿ ಎಂದು ಹೇಳಿದ್ದಾರೆ.

Vishwa News 24

Recent Posts

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

53 minutes ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

58 minutes ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

1 hour ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

2 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

2 hours ago

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

2 days ago