ಮೇಷ : ಇಂದು ನಿಮ್ಮ ಕೌಟುಂಬಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಸಂಗಾತಿಯ ಮೇಲೆ ಬೇಸರ ಮೂಡುವಂತಹ ಘಟನೆಯೊಂದು ನಡೆಯಲಿದೆ.
ವೃಷಭ : ನಿಮ್ಮ ಬಹಳ ವರ್ಷಗಳ ಕಾಯುವಿಕೆಗೆ ಇಂದು ಉತ್ತರ ಸಿಗಲಿದೆ.ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಲ್ಲಿ ತೇಲಲಿದ್ದೀರಿ.
ಮಿಥುನ : ಚಿಕ್ಕ ಚಿಕ್ಕದಕ್ಕೂ ಕೋಪ ಮಾಡಿಕೊಳ್ಳುವುದನ್ನು ನಿಯಂತ್ರಿಸಿ. ಇಲ್ಲವಾದಲ್ಲಿ ಸಾರ್ವಜನಿಕ ಜೀವನದಲ್ಲಿ ನೀವು ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. .
ಕಟಕ : ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಸ್ನೇಹಿತರು ನೆರವಾಗಲಿದ್ದಾರೆ. ಇದರಿಂದ ನಿಮ್ಮ ತಲೆಯ ಮೇಲಿರುವ ಬಹುದೊಡ್ಡ ಭಾರವು ಇಳಿಯಲಿದೆ.
ಸಿಂಹ : ಸಂಗಾತಿಯು ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಬಿಡುತ್ತಿಲ್ಲವೆಂದು ಕೊರಗಲಿದ್ದೀರಿ. ಇದೇ ನಿಮ್ಮ ದಾಂಪತ್ಯ ಜೀವನದಲ್ಲಿ ಅಂತರ ಉಂಟು ಮಾಡಬಹುದು.
ಕನ್ಯಾ : ನಂಬಿಕೆ ಇದೆ ಎಂದ ಮಾತ್ರಕ್ಕೆ ಪ್ರಶ್ನಿಸಲೇಬಾರದು ಎಂದೇನಿಲ್ಲ. ನಿಮಗೆ ತಪ್ಪು ಎನಿಸಿದ್ದನ್ನು ಪ್ರಶ್ನೆ ಮಾಡುವ ಗುಣವನ್ನು ರೂಢಿಸಿಕೊಳ್ಳಿ. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳಲಿದ್ದೀರಿ.
ತುಲಾ : ಕೊಟ್ಟ ಮಾತಿಗೆ ಕಟ್ಟು ಬಿದ್ದು ನಿಮ್ಮಿಷ್ಟಗಳನ್ನು ಬಲಿಕೊಡುವ ಪ್ರಸಂಗ ಎದುರಾದೀತು. ಇಂದು ಹಲ್ಲು ನೋವಿನ ಸಮಸ್ಯೆ ನಿಮ್ಮನ್ನು ಅತಿಯಾಗಿ ಭಾದಿಸಲಿದೆ.
ವೃಶ್ಚಿಕ : ಕಚೇರಿ ಕೆಲಸದ ನಿಮಿತ್ತ ನಿಮಗೆ ವಿದೇಶ ಪ್ರಯಾಣದ ಅವಕಾಶ ಎದುರಾಗಲಿದೆ. ಪೋಷಕರು ತೀರ್ಥಯಾತ್ರೆಗೆ ತೆರಳುವ ಬಗ್ಗೆ ಇಂದು ನಿಮ್ಮೊಡನೆ ಚರ್ಚಿಸಲಿದ್ದಾರೆ.
ಧನು : ಕೆಲವೊಂದು ಪ್ರಯಾಣ ನಿಮಗೆ ಉಪಯುಕ್ತ ಎಂದು ಸಾಬೀತಾಗಲಿದೆ. ಆರ್ಥಿಕ ಸಂಕಷ್ಟಗಳನ್ನು ನಿವಾರಿಸಲು ಹೊಸ ಮಾರ್ಗಗಳನ್ನು ಹುಡುಕಲಿದ್ದೀರಿ.
ಮಕರ : ಲೌಕಿಕ ಜೀವನಕ್ಕಿಂತ ಆಧ್ಯಾತ್ಮ ಜೀವನದ ಕಡೆ ನಿಮ್ಮ ಮನಸ್ಸು ವಾಲಲಿದೆ. ಆಸೆ ಈಡೇರಿಸದ ಹಿನ್ನೆಲೆಯಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು.
ಕುಂಭ : ಇಂದು ನೀವು ಕಚೇರಿಯನ್ನು ಬದಲಾಯಿಸುತ್ತಿದ್ದೀರಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಒಳಿತೇ ಆಗಲಿದೆ.
ಮೀನ : ಸಂಬಳ ಪಡೆಯುವ ಜನರು ಇಂದು ಒಳ್ಳೆಯ ಸುದ್ದಿಯನ್ನು ಕೇಳಲಿದ್ದೀರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
ಉಡುಪಿ : ಅಕ್ಕ ಕೆಫೆ ನಿರ್ವಹಣೆ ; ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…
ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…
ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…
ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…