ಮೈಸೂರು: ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ. ಆದರೆ ಇದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದ ಅವರು, ಅರಗ ಜ್ಞಾನೇಂದ್ರ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ನಿಜಕ್ಕೂ ದುರಂತ ವಿಚಾರವಾಗಿದೆ. ಪೊಲೀಸ್ ಆಗಲು ಪ್ರತಿಭೆ ಪ್ರಾಮಾಣಿಕತೆ ದಕ್ಷತೆ ಬೇಕು. ಹಣದಿಂದ ಬಂದವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗಿತ್ತಾ, ಇದರಿಂದ ಜನ ಸಾಮಾನ್ಯರಿಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಪ್ರಶ್ನಿಸಿದ ಅವರು, ನಾನು ಪೊಲೀಸ್ ಪರೀಕ್ಷೆ ಬರೆದಾಗ ಈ ರೀತಿ ಇರಲಿಲ್ಲ. ಯಾರು ಶಾಮೀಲಾಗಿದ್ದಾರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಧರ್ಮ ದಂಗಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಶಾಂತಿ ಕೆಟ್ಟಿಲ್ಲ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹುಬ್ಬಳ್ಳಿ ಪ್ರಕರಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಎಫ್ಐಆರ್ ಮಾಡಲಾಗಿತ್ತು. ಆದರೂ ಸಾವಿರಾರು ಜನರು ಗುಂಡಾವರ್ತನೆ ತೋರಿದ್ದಾರೆ. ಆರೋಪಿಗಳು ಯುವಕನ ಶಿರಚ್ಛೇದ ಮಾಡುತ್ತೇವೆ ಎನ್ನುತ್ತಾರೆ. ಯುವಕನನ್ನು ವಶಕ್ಕೆ ಕೊಡಿ ತಲೆ ಕಲಿಯುತ್ತೇವೆ ಎನ್ನುತ್ತಾರೆ. ಇದು ಭಾರತನಾ ತಾಲಿಬಾನಾ ಎಂದು ಪ್ರಶ್ನಿಸಿದರು.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…