ಮೇಷ ರಾಶಿ
ಮಕ್ಕಳಿಗಾಗಿ ಇಂದು ನೀವು ಮಾಡುವ ಕೆಲಸಗಳು ನಿಧಾನಗತಿಯಲ್ಲಿ ಯಶಸ್ಸಾಗುವವು, ಇಂದು ನೀವು ಹಮ್ಮಿಕೊಳ್ಳುವ ಶುಭ ಕಾರ್ಯಗಳಿಗೆ ವಿರೋಧಿಗಳು ಅಡ್ಡಗಾಲು ಹಾಕುವ ಸಾಧ್ಯತೆ ಇರುವುದು.
ವೃಷಭ ರಾಶಿ
ಪರೋಪಕಾರಿಗಳಾದ ನೀವು ವಿಶ್ರಾಂತಿಯ ಅಗತ್ಯವಿಲ್ಲದಂತೆ ದುಡಿಯುತ್ತಿರುವಿರಿ. ಆದರೆ ಕೆಲ ಸಮಯವಾದರೂ ವಿಶ್ರಾಂತಿ ಪಡೆದಲ್ಲಿ ಮುಂದಿನ ಕೆಲಸವನ್ನು ಅತ್ಯುತ್ಸಾಹದಿಂದ ಮಾಡಲು ಅನುಕೂಲವಾಗುವುದು.
ಮಿಥುನ ರಾಶಿ
ಮಾತೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿಗಳಿಗೆ ಸುದಿನ. ಭೂ ವ್ಯವಹಾರದವರಿಗೆ ಉತ್ತಮ ಲಾಭ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಕಟಕ ರಾಶಿ
ದೂರದ ಗೆಳೆಯರನ್ನು ಅನಿರೀಕ್ಷಿತವಾಗಿ ಸಂಧಿಸುವಿರಿ. ಇದರಿಂದ ನಿಮ್ಮ ಬಾಳಿಗೆ ಹೊಸ ತಿರುವೊಂದು ದೊರೆಯಲಿದೆ. ಕಾಣದ ಹಾದಿಗಾಗಿ ಕಾತರಿಸುತ್ತಿರುವಿರಿ. ಆದರೆ ಗುರುಸದೃಶವಾದ ವ್ಯಕ್ತಿಯೊಬ್ಬರಿಂದ ಬದುಕಿನ ಶಾಂತಿಗೆ ಉತ್ತಮ ಸಿದ್ಧಿ ದೊರೆಯುವುದು.
ಸಿಂಹ ರಾಶಿ
ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.
ಕನ್ಯಾ ರಾಶಿ
ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ಅಂತಿಮ ಎನ್ನುವ ಧೋರಣೆ ಬಿಡಿ. ಇತರರ ಮಾತಿಗೂ ಬೆಲೆ ಕೊಡಿ, ಸಿಟ್ಟಿನಿಂದ ಕೂಗಾಡಲು ಮುಂದಾಗದಿರಿ. ಇದರಿಂದ ನಿಮ್ಮ ಪಾಲಿಗೆ ನೀವೇ ದೊಡ್ಡ ತಡೆಗೋಡೆ ಆಗುವಿರಿ. ಈ ಬಗ್ಗೆ ಎಚ್ಚರಿಕೆ ಇರಲಿ.
ತುಲಾ ರಾಶಿ
ಓದು ಬರಹದಿಂದ ಜ್ಞಾನ ಸಂವರ್ಧನೆಗೆ ದಾರಿ ಇದೆ. ಜ್ಞಾನ ನಿಮ್ಮ ಬದುಕಿನ ಪಾಲಿಗೆ ಕೈದೀಪವಾಗಲಿದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎಂಬ ವಚನದಂತೆ ಬುದ್ಧಿಯ ಅಜ್ಞಾನ ಕಳೆದು ಸುಜ್ಞಾನ ಮೂಡುವುದು.
ವೃಶ್ಚಿಕ ರಾಶಿ
ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು. ಚರರಾಶಿಯಲ್ಲಿ ಜನ್ಮಿಸಿರುವ ನೀವು ಒಂದೇ ಕಡೆ ಕುಳಿತು ಕೆಲಸ ಮಾಡುವವರಾಗಿದ್ದೀರಿ.
ಧನಸ್ಸು ರಾಶಿ
ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳು ಮಾಡಿಕೊಳ್ಳದಿರಿ.
ಮಕರ ರಾಶಿ
ಸಾಧು ಪ್ರಾಣಿಗಳನ್ನೇ ಬಲಿಕೊಡುವರೇ ಹೊರತು ಹುಲಿ ಸಿಂಹಗಳನ್ನು ಬಲಿ ಕೊಡುವುದಿಲ್ಲ. ನೀವು ಬಯಸಿದ ಮಾರ್ಗದಲ್ಲಿಯೇ ಸಾಗಬೇಕೆಂಬ ಹಠ ಬಿಟ್ಟುಬಿಡಿ. ಹಠದಿಂದ ಒಳಿತಿಗೆ ತಡೆ ಉಂಟಾಗಲಿದೆ. .
ಕುಂಭ ರಾಶಿ
ಹೊಸ ರಾಜಕೀಯ ಪಕ್ಷ ಕ್ಕೆ ಸೇರಿಕೊಳ್ಳಬೇಕೆಂಬ ನಿಮ್ಮ ಒಳಗಿನ ಆಸೆಗೆ ಹೊರಗಿನ ಜನರು ತಣ್ಣೀರು ಎರಚುತ್ತಿರುವರು. ಗ್ರಹಗಳು ನೀವು ಪಕ್ಷ ಕ್ಕೆ ಸೇರಬೇಕೆನ್ನುವವು. ಆಸ್ತಿ ಖರೀದಿಯ ಬಗ್ಗೆ ನಿಧಾನ ಪ್ರಗತಿಯುಂಟಾಗುವುದು. ಸ್ನೇಹಿತರು ಸಹಾಯ ಮಾಡುವರು.
ಮೀನ ರಾಶಿ
ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ ಇದೆ. ಎಷ್ಟೇ ಪ್ರಾಮಾಣಿಕವಾಗಿ ದುಡಿದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದೆ. ಕೆಲ ಗ್ರಹಸ್ಥಿತಿಗಳು ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಮಾಡುವುದು.
ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…
ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…
ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…