Featured

27 ವರ್ಷಗಳ ನಂತರ ದೀಪಾವಳಿಯಂದು ಸಂಭವಿಸಲಿದೆ ಸೂರ್ಯಗ್ರಹಣ… ಪರಿಣಾಮವೇನು? Vishwanews24

27 ವರ್ಷಗಳ ನಂತರ ದೀಪಾವಳಿಯಂದು ಸೂರ್ಯಗ್ರಹಣ… ಪರಿಣಾಮವೇನು?

ಈ ವರ್ಷದ ಕೊನೆಯ ಸೂರ್ಯಗ್ರಹಣವು ಅಕ್ಟೋಬರ್ 25, 2022 ರಂದು ಸಂಭವಿಸಲಿದೆ. 27 ವರ್ಷಗಳ ನಂತರ, ದೀಪಾವಳಿಯಂದು ಸೂರ್ಯ ಗ್ರಹಣ ಸಂಭವಿಸುತ್ತಿರುವುದು ವಿಶೇಷ. ದೀಪಾವಳಿಯನ್ನು ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತೆ, ಈ ಬಾರಿ ಕಾರ್ತಿಕ ಅಮಾವಾಸ್ಯೆಯ ದಿನಾಂಕ ಅಂದರೆ ದೀಪಾವಳಿ ಅಕ್ಟೋಬರ್ 24 ಮತ್ತು 25 ರಂದು ಎರಡು ದಿನಗಳಲ್ಲಿದೆ. ಈ ದಿನದಂದು ಯಾವ ರಾಶಿಯವರ ಮೇಲೆ ಏನೆಲ್ಲಾ ಸಮಸ್ಯೆ ಉಂಟಾಗಲಿದೆ ಅನ್ನೋದನ್ನು ತಿಳಿಯೋಣ.

ಕಾರ್ತಿಕ ಅಮಾವಾಸ್ಯೆ ತಿಥಿ ಅಕ್ಟೋಬರ್ 24 ರಂದು ಸಂಜೆ 05:27 ಕ್ಕೆ ಪ್ರಾರಂಭವಾಗಲಿದ್ದು, ಅಕ್ಟೋಬರ್ 25 ರಂದು ಸಂಜೆ 04:18 ರವರೆಗೆ ಇರಲಿದೆ. ಸೂರ್ಯಗ್ರಹಣದ(Solar eclipse) ಸೂತಕದ ಅವಧಿಯು ಅಕ್ಟೋಬರ್ 24 ರ ಮಧ್ಯರಾತ್ರಿ 12 ಗಂಟೆಯ ಮುಂಚಿತವಾಗಿ ಪ್ರಾರಂಭವಾಗುತ್ತೆ. ಗ್ರಹಣ ದೋಷದ ಬಗ್ಗೆ, ಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ.

ಸೂರ್ಯ ಗ್ರಹಣ 2022 ಸೂತಕದ ಅವಧಿ
ಈ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ ಮತ್ತು ಇದು ಈ ವರ್ಷದ ಎರಡನೇ ಸೂರ್ಯಗ್ರಹಣ. ಇದರ ಸೂತಕದ ಅವಧಿ ಅಕ್ಟೋಬರ್ 24 ರಂದು ಅಂದರೆ ದೀಪಾವಳಿ ರಾತ್ರಿ 02:30ಕ್ಕೆ ಶುರು ಆಗಿ ಮರುದಿನ ಅಕ್ಟೋಬರ್ 25 ರಂದು ಸಂಜೆ 04:22 ರವರೆಗೆ ಇರಲಿದೆ.

27 ವರ್ಷಗಳ ನಂತರ ಇಂತಹ ವಿಶೇಷ ಘಟನೆ ನಡೆಯಲಿದೆ.
ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಗೋಚರಿಸುತ್ತೆ. ಇದು ಅಕ್ಟೋಬರ್ 25 ರಂದು ಮಧ್ಯಾಹ್ನ 02:29 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 06:32 ಕ್ಕೆ ಕೊನೆಗೊಳ್ಳಲಿದೆ. ಈ ಸೂರ್ಯಗ್ರಹಣವು 4 ಗಂಟೆ 3 ನಿಮಿಷಗಳ ಕಾಲ ಇರಲಿದೆ. 27 ವರ್ಷಗಳ ಹಿಂದೆ 1995ರಲ್ಲಿ ದೀಪಾವಳಿ ಸಂದರ್ಭದಲ್ಲಿ ಸೂರ್ಯಗ್ರಹಣ ಸಂಭವಿಸಿದಾಗ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.

PM-KISAN ನಿಧಿಯ 12ನೇ ಕಂತಿನ ಹಣ ಬಿಡುಗಡೆ .. online ನಲ್ಲಿ ಹೀಗೆ ಪರಿಶೀಲಿಸಿ – Vishwanews24

ಈ ಜನರು ಸೂರ್ಯಗ್ರಹಣವನ್ನು ನೋಡಬಾರದು 
ಈ ಸೂರ್ಯಗ್ರಹಣವು ತುಲಾ ಮತ್ತು ಸ್ವಾತಿ ನಕ್ಷತ್ರದಲ್ಲಿ ಸಂಭವಿಸುತ್ತಿದೆ. ಈ ಕಾರಣದಿಂದಾಗಿ, ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಜನರು ಈ ಸೂರ್ಯಗ್ರಹಣವನ್ನು ನೋಡಬಾರದು. ಅಮಾವಾಸ್ಯೆ(Amavasye) ತಿಥಿಯಂದು ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತೆ, ಇದನ್ನು ಕಂಕಣ ಸೂರ್ಯಗ್ರಹಣ ಎಂದೂ ಕರೆಯಲಾಗುತ್ತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಂತಹ ಗ್ರಹಣದಲ್ಲಿ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು ಹೆಚ್ಚಾಗಿರುತ್ತೆ, ಸೂರ್ಯನ ಬೆಳಕು ಭೂಮಿಯನ್ನು ತಲುಪುವ ಮೊದಲು, ಚಂದ್ರನು ಮಧ್ಯದಲ್ಲಿ ಬರುತ್ತಾನೆ, ಇದರಿಂದಾಗಿ ಸೂರ್ಯನ ಕೆಲವು ಭಾಗವು ಮಾತ್ರ ಗೋಚರಿಸುತ್ತೆ.

 

ಸೂತಕದ ಅವಧಿಯಲ್ಲಿ ಏನು ಮಾಡಬಾರದು
1. ಸೂತಕ ಕಾಲದಲ್ಲಿ ಯಾವುದೇ ಶುಭಕಾರ್ಯ ಮಾಡಬೇಡಿ.
2. ಸೂತಕ ಕಾಲದಲ್ಲಿ ಆಹಾರ ಸೇವಿಸೋದನ್ನು ನಿಷೇಧಿಸಲಾಗಿದೆ.
3. ಈ ಸಮಯದಲ್ಲಿ, ಹಲ್ಲುಗಳನ್ನು ಸ್ವಚ್ಛಗೊಳಿಸೋದು ಮತ್ತು ಕೂದಲನ್ನು ಬಾಚುವುದನ್ನು ನಿಷೇಧಿಸಲಾಗಿದೆ.
4. ಸೂತಕದ ಅವಧಿಯಲ್ಲಿ ಗರ್ಭಿಣಿಯರು(Pregnant) ಮನೆಯಿಂದ ಹೊರಗೆ ಹೋಗೋದನ್ನು ತಪ್ಪಿಸಬೇಕು.

ಮಳವಳ್ಳಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ಬಿಇಒ ಸಲ್ಲಿಸಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

2 days ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

2 days ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

2 days ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

2 days ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

2 days ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

2 days ago