ಬೇ ಓವಲ್: ನ್ಯೂಝಿಲೆಂಡ್ ವಿರುದ್ಧ ಮೂರನೇ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಗಳಿಸಿದ್ದು, ಐದು ಪಂದ್ಯಗಳ ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆ 3-0 ಅಂತರದಿಂದ ವಶಪಡಿಸಿಕೊಂಡಿದೆ.
ಗೆಲುವಿಗೆ 244 ರನ್ ಗಳ ಸವಾಲನ್ನು ಪಡೆದ ಭಾರತ 43 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 245 ರನ್ ಗಳಿಸಿತು.
ನಾಯಕ ವಿರಾಟ್ ಕೊಹ್ಲಿ 60ರನ್, ಉಪ ನಾಯಕ ರೋಹಿತ್ ಶರ್ಮಾ 62 ರನ್, ಶಿಖರ್ ಧವನ್ 28ರನ್, ಅಂಬಟಿ ರಾಯುಡು ಔಟಾಗದೆ 40 ರನ್ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಔಟಾಗದೆ 38 ರನ್ ಗಳಿಸಿದರು.
ಶಿಖರ್ ಧವನ್ ವಿಕೆಟ್ ಉರುಳುತ್ತಿದ್ದಂತೆ ಮೈದಾನಕ್ಕಿಳಿದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ ಜೊತೆಗೂಡಿ ಕಿವೀಸ್ ಬೌಲರ್‍ಗಳನ್ನು ದಂಡಿಸುವ ಮೂಲಕ ಬೌಂಡರಿಗಳ ಸುರಿಮಳೆಗೆರೆದರು.
ಈ ಜೋಡಿಯನ್ನು ಬೇರ್ಪಡಿಸಲು ಕಿವೀಸ್ ನಾಯಕ ಕೇನ್ ವಿಲಿಯಮ್ಸ್ ಮಾಡಿದ ತಂತ್ರಗಳೆಲ್ಲ ತಲೆಕೆಳಗಾಯಿತು. ಈ ನಡುವೆ ರೋಹಿತ್ ಶರ್ಮ 3 ಬೌಂಡರಿ ಹಾಗೂ 2 ಸಿಕ್ಸರ್‍ಗಳಿಂದ 63 ರನ್‍ಗಳನ್ನು ಸಿಡಿಸಿ ಸೆನೆಟರ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರೆ ನಾಯಕ ವಿರಾಟ್ ಕೊಹ್ಲಿ ಕೂಡ 60 ರನ್ ಸಿಡಿಸಿ ಬೋಲ್ಟ್ ಬೌಲಿಂಗ್‍ನಲ್ಲಿ ಔಟಾದರೂ ಕೂಡ ಭಾರತದಿಂದ ಗೆಲುವನ್ನು ಕಸಿದುಕೊಳ್ಳದಂತೆ ಅಂಬಾಟಿ ರಾಯ್ಡು ಹಾಗೂ ದಿನೇಶ್ ಕಾರ್ತಿಕ್ ಜವಾಬ್ದಾರಿಯನ್ನು ಹೊತ್ತುಕೊಂಡರು.
ಈ ಜೋಡಿಯು ಕೂಡ ನ್ಯೂಜಿಲೆಂಡ್‍ನ ಬೌಲರ್‍ಗಳೆದುರು ಬೌಂಡರಿಗಳ ಸುರಿಮಳೆಗೈಯ್ಯುವ ಮೂಲಕ 43 ಓವರ್‍ಗಳಲ್ಲೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ದಿನೇಶ್ ಕಾರ್ತಿಕ್ 38 ರನ್ ಗಳಿಸಿದರೆ ರಾಯ್ಡು 40 ರನ್ ಗಳಿಸಿ ಅಜೇಯರಾಗಿ ಉಳಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…