ಕಾಪು: ಬೆಳಪು ಗ್ರಾಮ ಇಂದು ಅಭಿವೃದ್ಧಿಯಲ್ಲಿ ರಾಜ್ಯ ರಾಷ್ಟ್ರಕ್ಕೆ ಮಾದರಿಯಾಗಿದೆ. ಕುಗ್ರಾಮವಾಗಿದ್ದ ಬೆಳಪುವಿಗೆ ಆಧುನಿಕ ಸ್ಪರ್ಶ ನೀಡಿ ವಿಶ್ವದ ಭೂಪಟದಲ್ಲಿ ಗುರುತಿಸಲ್ಪಡುವ ಮಟ್ಟಕ್ಕೆ ಒಂದು ಗ್ರಾಮ ಬೆಳೆದು ನಿಲ್ಲಲು ಗ್ರಾಮಸ್ಥರ ಸ್ಫೂರ್ತಿಯೇ ಕಾರಣವೆಂದು ಬೆಳಪು ಗ್ರಾ.ಪಂ. ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಅವರು ಬೆಳಪು ಪಂಚಾಯತ್ ಸಭಾಗಂಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ ಬೆಳಪು ಗ್ರಾಮದಲ್ಲಿ ಕಳೆದ 30 ವರ್ಷಗಳ ದೀರ್ಘ ಸೇವೆ ಸಲ್ಲಿಸಿ 8ನೇ ಅವಧಿಗೆ ಅಧ್ಯಕ್ಷರಾಗಿ ಜನಾನುರಾಗಿಯಾಗಿದ್ದು, ಗ್ರಾಮದ ಜನರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಕರ್ತವ್ಯವೆಂದು ತಿಳಿದು ಗ್ರಾಮದ ಸುತ್ತ ಕಾಡು ಮಾತ್ರ ಕಾಣಸಿಗುತ್ತಿದ್ದ, ಆದಾಯದಲ್ಲಿ ಜಿಲ್ಲೆಯಲ್ಲಿ ಅತೀ ಕಡಿಮೆ ಆದಾಯವಿರುವ “ಬೆಳಪು ಕಾಡು” ಎಂದು ಕರೆಯಲ್ಪಡುತ್ತಿದ್ದ ಗ್ರಾಮವನ್ನು ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮಾದರಿಯನ್ನಾಗಿಸಿದ ಹೆಗ್ಗಳಿಕೆ ನಮ್ಮದಾಗಿದೆ. ಸುಮಾರು 480 ಕೋಟಿಗೂ ಮಿಕ್ಕಿ ಯೋಜನೆಗಳನ್ನು ಜ್ಯಾರಿಗೆ ತಂದ ಗ್ರಾಮವಾಗಿದ್ದು, ಸರಕಾರ ಶಾಲೆಯ ಪಠ್ಯಪುಸ್ತಕದಲ್ಲಿ ಬೆಳಪು ಗ್ರಾಮಾಭಿವೃದ್ಧಿ ಅಧ್ಯಾಯ ಪ್ರಕಟಿಸುವ ಮೂಲಕ ಬೆಳಪು ರಾಜ್ಯದ ಜನರ ಮನಮಾತಾಗಿದೆ ಎಂದು ಶೆಟ್ಟಿ ತಿಳಿಸಿದರು.
480 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ :
ಗ್ರಾಮದಲ್ಲಿ ದೂರದೃಷ್ಟಿಯೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಮಾಡಬೇಕೆಂಬ ಸಂಕಲ್ಪದೊಂದಿಗೆ ಕನಸು ಕಂಡ ನಾನು ಸತತ ಪರಿಶ್ರಮದಿಂದ ಅದನ್ನು ನನಸಾಗಿಸಿರುವ ತೃಪ್ತಿ ನನ್ನದಾಗಿದೆ. ಒಂದೇ ಗ್ರಾಮದಲ್ಲಿ ಶೈಕ್ಷಣಿಕ-ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಒತ್ತು ಕೊಡುವ ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಗ್ರಾಮಸ್ಥರಿಗೆ ಮನೆಗೊಂದು ಉದ್ಯೋಗ ಒದಗಿಸುವ ಯೋಜನೆ ನಮ್ಮದಾಗಿದೆ. ಕೆ.ಜಿ ಯಿಂದ ಪಿ.ಜಿವರೆಗಿನ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆ, ಸರಕಾರಿ ತಾಂತ್ರಿಕ ಪಾಲಿಟೆಕ್ನಿಕ್ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಾರ್ಯಾರಂಭಗೊಳ್ಳಲಿದೆ. ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು ನಮ್ಮ ಗ್ರಾಮಕ್ಕೆ ಆಗಮಿಸುವ ಮೂಲಕ ಗ್ರಾಮದಲ್ಲಿ ಶೈಕ್ಷಣಿಕ ಕ್ರಾಂತಿಯಾಗಲಿದೆ. 68 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆಯಾಗಿದ್ದು, ಸುಮಾರು 38 ಸಣ್ಣ ಕೈಗಾರಿಕೆಗಳು 400 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಪ್ರಾರಂಭಗೊಳ್ಳಲಿದ್ದು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಸುಂದರವಾದ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, 1 ಕೋಟಿ ರೂ. ವೆಚ್ಚ ಮಾಡಿ ಜಾರಂದಾಯ ಕೆರೆ ಅಭಿವೃದ್ಧಿಯೊಂದಿಗೆ ಪ್ರವಾಸಿಗರಿಗಾಗಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 800 ಬಡ ನಿವೇಶನ ರಹಿತರಿಗೆ ನಿವೇಶನ ಒದಗಿಸಲಾಗಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಗ್ರಾಮದ ಜನರೊಂದಿಗೆ ನಿತ್ಯ ಸಂಪರ್ಕದೊಂದಿಗೆ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ಕಾರ್ಯ ಮಾಡಿದ್ದೇನೆಂದು ಶೆಟ್ಟಿ ತಿಳಿಸಿದ್ದಾರೆ.
ಗ್ರಾಮದ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 480 ಕೋಟಿಗೂ ಮಿಕ್ಕಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ದೀರ್ಘಾವಧಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಭೃಷ್ಟಾಚಾರಕ್ಕೆ ಅವಕಾಶ ನೀಡದೆ ಗ್ರಾಮಸ್ಥರಿಗೆ ಹತ್ತಿರವಾಗಿ ಸರಳವಾಗಿ ಕಾರ್ಯನಿರ್ವಹಿಸುವ ಯೋಜನೆಗೆ ಚಾಲನೆ ನೀಡಿದ್ದೇವೆ. ರಾಜಕೀಯ ರಹಿತವಾಗಿ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸ್ವಚ್ಛ ಮತ್ತು ಪಾರದರ್ಶಕ ವ್ಯವಸ್ಥೆಯೊಂದಿಗೆ ಆಡಳಿತ ನಡೆಸಿದ್ದೇವೆ. ಬಡಜನರ ಅನುಕೂಲಕ್ಕಾಗಿ ಕಾನೂನುಗಳನ್ನು ಮೀರಿ ಸಹಕರಿಸಿದ್ದೇವೆ. ಗ್ರಾಮಸ್ಥರ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ಪರಿಸರ ಸಂರಕ್ಷಣೆಗಾಗಿ ಗ್ರಾಮದಲ್ಲಿ ಲಕ್ಷ ಗಿಡ ನೆಟ್ಟು ಬೆಳೆಸಲಾಗುತ್ತದೆ. ‘ಮನೆಗೊಂದು ಮಗು-ಮಗುವಿಗೊಂದು ಗಿಡ’ ಯೋಜನೆ ರೂಪಿಸಿದ್ದೇವೆ. ಗ್ರಾಮದಲ್ಲಿ ಪ್ರಥಮವಾಗಿ ಮನೆ ಮನೆಗೆ ಕುಡಿಯುವ ನೀರಿನ ಯೋಜನೆ, ಹೆಚ್ಚಿನ ರಸ್ತೆಗಳಿಗೆ ಕಾಂಕ್ರಿಟೀಕರಣ, ಸಂಪರ್ಕ ರಸ್ತೆಗಳ ನಿರ್ಮಾಣ, ಕ್ರೀಡಾಂಗಣ ನಿರ್ಮಾಣ, ಗ್ರಾಮಸೌಧ ನಿರ್ಮಾಣ, ವಾಣಿಜ್ಯ ಕಟ್ಟಡಗಳ ನಿರ್ಮಾಣ, ಸಂತೆ ಮಾರುಕಟ್ಟೆ ನಿರ್ಮಾಣ, ರಿಕ್ಷಾ ತಂಗುದಾಣಗಳ ನಿರ್ಮಾಣ, ಅಂಬೇಡ್ಕರ್ ಭವನ ನಿರ್ಮಾಣ, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಇಂತಹ ಅನೇಕ ಪ್ರಮುಖ ಯೋಜನೆಗಳ ಅನುಷ್ಠಾನಕ್ಕಾಗಿ ಗಂಧದ ಕೊರಡು ರೀತಿಯಲ್ಲಿ ಜನಸೇವೆ ಮಾಡಿದ್ದೇನೆ. ನುಡಿದಂತೆ ನಡೆದಿದ್ದೇನೆ. ನನ್ನ ಎಲ್ಲಾ ಪಂಚಾಯತ್ ಸದಸ್ಯರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ.
ಅನೇಕ ಕಷ್ಟಗಳನ್ನು, ಸವಾಲುಗಳನ್ನು ಎದುರಿಸಿ ಹತ್ತಾರು ಯೋಜನೆಗಳನ್ನು ಗ್ರಾಮಕ್ಕೆ ತಂದಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಭೃಷ್ಟಾಚಾರ ನಡೆಸಿಲ್ಲ. ಗ್ರಾಮಸ್ಥರನ್ನು ಪೀಡಿಸಿಲ್ಲ, ದ್ವೇಷ ರಾಜಕಾರಣ ಮಾಡಿಲ್ಲ. ಯಾರಿಗಾದರು ಸಂದೇಹವಿದ್ದರೆ ಮುಂದೆ ಆಡಳಿತಾಧಿಕಾರಿಯ ಮೂಲಕ ವ್ಯಾಪಕ ತನಿಖೆ ನಡೆಸಬಹುದು. ಯಾವುದೇ ಆರೋಪ ನನ್ನ ಮೇಲೆ ಸಾಬೀತಾದರೆÉ ರಾಜಕೀಯದಿಂದಲೇ ನಿರ್ಗಮಿಸಲು ಸಿದ್ಧವೆಂದು ಶೆಟ್ಟಿ ಸವಾಲು ಹಾಕಿದ್ದಾರೆ.
ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯದ ಕನಸು ನನಸಾಗಿದೆ :
ಬೆಳಪು ಗ್ರಾಮವನ್ನು ನಗರಕ್ಕೆ ಹೋಲುವ ರೀತಿ ಅಭಿವೃದ್ಧಿಗೊಳಿಸಬೇಕೆಂಬ ಚಿಂತನೆಯೊಂದಿಗೆ ಗಾಂಧೀಜಿಯವರ ಮಾತಿನಂತೆ ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯವನ್ನು ಮಾಡುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇನೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರ ಸಂದೇಶದಂತೆ ಬೆಳಪುವಿಗೆ ಬೆಳಕು ಚೆಲ್ಲಬೇಕು, ನನ್ನ ಗ್ರಾಮ ವಿಶ್ವದಲ್ಲಿ ಗುರುತಿಸಬೇಕೆಂಬ ಕನಸು ಕಂಡಿದ್ದೆ, ಅದೂ ಈಗ ನನಸಾಗಿದೆ. ಒಂದು ಗ್ರಾಮ ಪಂಚಾಯತ್‍ನಲ್ಲಿ ಆಡಳಿತ ವ್ಯವಸ್ಥೆಗೆ ಇಚ್ಛಾಶಕ್ತಿ ಇದ್ದರೆ ಏನನ್ನೂ ಸಾಧಿಸಬಹುದೆಂದು ಸಾಬೀತುಪಡಿಸಿದ್ದೇವೆ. ಅಭಿವೃದ್ಧಿಯಲ್ಲಿ ಎಂದು ಹತಾಶನಾಗಿಲ್ಲ. ಯಾವುದೇ ಟೀಕೆಗಳಿಗೆ ನಮ್ಮ ಕಾರ್ಯಗಳಿಂದಲೇ ಉತ್ತರ ಕೊಟ್ಟಿದ್ದೇವೆ.
ಜನಪ್ರತಿನಿಧಿಗಳ ಸಹಕಾರ :
ಬೆಳಪು ಗ್ರಾಮದ ಅಭಿವೃದ್ಧಿಯಲ್ಲಿ ಮಾಜಿ ಪ್ರಧಾನಿಗಳಾದ ಹೆಚ್. ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿಯವರು, ಮಾಜಿ ಸಚಿವರಾದ ವಿನಯಕುಮಾರ ಸೊರಕೆಯವರು, ಮಾಜಿ ಸಚಿವರಾದ ದಿ| ಡಿ.ಟಿ ಜಯಕುಮಾರವರು, ಮಾಜಿ ಸಚಿವರಾದ ಸಿ.ಟಿ.ರವಿಯವರು, ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್‍ರವರ ಸಹಕಾರವನ್ನು ಸ್ಮರಿಸುತ್ತೇನೆ. ಗ್ರಾಮೀಣಾಭಿವೃದ್ಧಿಯಲ್ಲಿ ರಾಜಕೀಯ ಮರೆತರೆ ಮಾತ್ರ ಯಶಸ್ಸು ಸಾಧ್ಯವೆಂದು ಶೆಟ್ಟಿ ತಿಳಿಸಿದ್ದಾರೆ.
1. ಸಂಯುಕ್ತ ರಾಷ್ಟ್ರಗಳಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಪ್ರಪ್ರಥಮ ಬಾರಿಗೆ ಗೌರವ ಡಾಕ್ಟರೇಟ್ ಪ್ರದಾನ.
2.ಅಮೇರಿಕದ ಡೆಲಾವೇರ್ ರಾಜ್ಯದ ಯುರೋಪಿಯನ್ ಕಾಂಟಿನೆಂಟಲ್ ಯೂನಿವರ್ಸಿಟಿಯಿಂದ ಗ್ರಾಮೀಣಾಭಿವೃದ್ಧಿಗಾಗಿ ಪ್ರತಿಷ್ಠಿತ “ಗೋಲ್ಡನ್ ಎಕ್ಸಲೆನ್ಸ್ ಅಂತಾರಾಷ್ಟ್ರೀಯ ಪ್ರಶಸ್ತಿ”.
3. ನೇಪಾಳದ ಪ್ರಧಾನಿಯವರಿಂದ ಗ್ರಾಮೀಣಾಭಿವೃದ್ಧಿಯ ವಿಶೇಷ ಸಾಧನೆಗಾಗಿ “ಪ್ರೈಡ್ ಆಫ್ ಏಷ್ಯಾ” ಅಂತರಾಷ್ಟ್ರೀಯ ಪ್ರಶಸ್ತಿ ಮತ್ತು ಇಂಡೋ-ನೇಪಾಳ ಫ್ರೆಂಡ್‍ಶಿಪ್ ಅವಳಿ ಪ್ರಶಸ್ತಿ.
4. ಜರ್ಮನಿಯಲ್ಲಿ ನಡೆದÀ ಭಾರತೀಯ ಗ್ರಾಮೀಣ ಸಂಸ್ಕೃತಿಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ವಿಶೇಷ ಪ್ರತಿನಿಧಿಯಾಗಿ ಭಾಗವಹಿಸುವಿಕೆ.
5. ಭಾರತ ಸರಕಾರದಿಂದ ಎರಡು ಬಾರಿ “ರಾಷ್ಟ್ರೀಯ ಪ್ರಶಸ್ತಿ” ರೂ.5.00 ಲಕ್ಷ ನಗದು ಪುರಸ್ಕಾರ.(ಗೌರವಾನ್ವಿತ ರಾಷ್ಟ್ರಪತಿಗಳಾದ ಮಾನ್ಯ ಅಬ್ದುಲ್ ಕಲಾಂ ರವರಿಂದ ಪ್ರಶಸ್ತಿ-2007 ಸ್ವೀಕಾರ)
6. ಭಾರತ ಸರಕಾರದಿಂದ ರಾಜಾರಾಮ್ ಮೋಹನ್ ರಾಯ್ ರಾಷ್ಟ್ರೀಯ ಪುರಸ್ಕಾರ-2008.
7. ಕರ್ನಾಟಕ ಸರಕಾರದಿಂದ “ರಜತ ನೈರ್ಮಲ್ಯ” ಅವಳಿ ಪುರಸ್ಕಾರ (ರೂ.3 ಲಕ್ಷ ನಗದು)
8. ಗ್ರಾಮೀಣ ಅಭಿವೃದ್ಧಿಗಾಗಿ “ರೈತರತ್ನ ಹೆಚ್.ಡಿ.ದೇವೆಗೌಡ್ರು” ರಾಷ್ಟ್ರೀಯ ಪ್ರಶಸ್ತಿ.
9. ಖ್ಯಾತ ಸಮಾಜ ಸೇವಕ ಅಣ್ಣಾಹಜಾರೆಯವರಿಂದ ‘ಆದರ್ಶ ಗ್ರಾಮೀಣಾಭಿವೃದಿ’್ಧಗಾಗಿ ಪುರಸ್ಕಾರ.
10. ಲಯನ್ಸ್ 324ಆ ಯಿಂದ 2003-04 ರ ಅತ್ಯುತ್ತಮ “ಸಮಾಜ ಸೇವಕ” ಪ್ರಶಸ್ತಿ.
11. ಮಾತೃ ಬಂಟರ ಸಂಘ ಮಂಗಳೂರು ಇವರಿಂದ ಉತ್ತಮ ‘ಸಮಾಜ ಸೇವಕ’ ಪ್ರಶಸ್ತಿ.
12. ಆದರ್ಶ ಗ್ರಾಮೀಣಾಭಿವೃದ್ಧಿಗಾಗಿ ಪ್ರತಿಷ್ಠಿತ “ರಾಷ್ಟ್ರೀಯ ಬಸವರತ್ನ-2012-13” ಪ್ರಶಸ್ತಿ.
13. ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರಿಂದ ರಾಜರ್ಷಿ ಡಾ. ವೀರೇಂದ್ರ ಹೆಗ್ಡೆಯವರ ದಿವ್ಯ ಉಪಸ್ಥಿತಿಯಲ್ಲಿ ಕೊಡಮಾಡಿದ ಬೆಳಪು ಗ್ರಾಮದ ಆದರ್ಶ ಗ್ರಾಮೀಣಾಭಿವೃದ್ಧಿಗಾಗಿ ಪ್ರತಿಷ್ಠಿತ “ನರಸಿಂಹ ಪ್ರಶಸ್ತಿ-2012”.
14. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ “ಗ್ರಾಮರತ್ನ” ಪುರಸ್ಕಾರ.
15. ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಕಾಣಿಯೂರು ಶ್ರೀಪಾದರಿಂದ “ಕೃಷ್ಣಾನುಗ್ರಹ” ಗೌರವ ಪುರಸ್ಕಾರ.
16. ಮುಂಬೈಯ ಮುಲುಂಡ್ ಫ್ರೆಂಡ್ಸ್(ರಿ) ಇವರಿಂದ “ಮಹಾರಾಷ್ಟ್ರ ಭೂಷಣ್” ಪ್ರಶಸ್ತಿ.
17. ಕೇರಳದ ಕಾಸರಗೋಡಿನ ಕನ್ನಡ ಸಾಹಿತ್ಯ ಅಕಾಡೆಮಿಯಿಂದ “ಗಡಿನಾಡ ಸಾಧಕರತ್ನ” ಪ್ರಶಸ್ತಿ.
18. ಕರ್ನಾಟಕ ರಾಜ್ಯದ ಮನೆ ಮಾತಾಗಿರುವ ಪ್ರತಿಷ್ಠಿತ ಸುದ್ದಿ ವಾಹಿನಿ ಪಬ್ಲಿಕ್ ಟೀವಿಯ ಮುಖಾಂತರ
“ಪಬ್ಲಿಕ್ ಹೀರೋ” ಆಗಿ ಆಯ್ಕೆ (2018).
ಪತ್ರಿಕಾಗೋಷ್ಠಿಯಲ್ಲಿ ಬೆಳಪು ಪಂಚಾಯತ್ ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿದ್ದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…