Featured

400 ವರ್ಷಗಳ ನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆಆಗಮಿಸುತ್ತಿದೆ ನೂತನ ಬ್ರಹ್ಮರಥ -Vishwanews24

ಮಂಗಳೂರು,  : ಅ.1ರಂದು (ಇಂದು) ಬೆಳಗ್ಗೆ  ನಗರದ ಕದ್ರಿ ಪಾರ್ಕ್ ಮುಂಭಾಗದಿಂದ ಬ್ರಹ್ಮರಥವನ್ನು ಕೊಂಡೊಯ್ಯುವ ಟ್ರಕ್ ಸುಬ್ರಹ್ಮಣ್ಯಕ್ಕೆ ಪಯಣಿಸಲಿದೆ. ಈ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಜಿತ್ ಶೆಟ್ಟಿ ಕಡಬ ತಿಳಿಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಂಗಳೂರಿನ ಉದ್ಯಮಿಗಳಾದ ಎನ್.ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಇವರು ಅರ್ಪಣೆ ಮಾಡಲಿರುವ ನೂತನ ಬ್ರಹ್ಮರಥ ಸೆ.30ರಂದು ಬೆಳಗ್ಗೆ 8ಕ್ಕೆ ಕೋಟೇಶ್ವರದಿಂದ ಬೃಹತ್ ಟ್ರಕ್ ಮೂಲಕ ಹೊರಟಿದ್ದು, ಕೋಟೇಶ್ವರ ಉಡುಪಿ ಮೂಲ್ಕಿ ಮಾರ್ಗವಾಗಿ ಆಗಮಿಸಿ ರಾತ್ರಿ ಮಂಗಳೂರು ತಲುಪಿದೆ.

ಚಂಪ ಷ್ಠಷ್ಠಿ ಸಮಯದಲ್ಲಿ ಶ್ರದ್ಧಾ ಭಕ್ತಿಂಯಿದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವಾಸ್ಥೆಗೆ ತಲುಪಿತ್ತು. ಹಾಗಾಗಿ ದೇವಳದ ವತಿಯಿಂದ ಪ್ರಶ್ನೆ ಚಿಂತನೆ ಮಾಡಿದ ಸಂದರ್ಭ ಈ ವಿಚಾರ ತಿಳಿದ ಬಳಿಕ ನೂತನ ರಥಕ್ಕೆ ಮೂಹರ್ತ ಮಾಡಲಾಗಿತ್ತು. ಬೆಂಗಳೂರು ಬಿಡದಿ ರಿಯಾಲಿಟಿ ವೆಂಚರ್ ಪೋರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಮುತ್ತಪ್ಪ ರೈ ಹಾಗೂ ಪಾಲುದಾರ ಅಜಿತ್ ಶೆಟ್ಟಿ ಇವರ ಸಹಕಾರದೊಂದಿಗೆ ಅಂದಾಜು ಎರಡುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನೂತನ ಬ್ರಹ್ಮರಥವನ್ನು ದೇವಳಕ್ಕೆ ದಾನ ರೂಪದಲ್ಲಿ ನೀಡಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 400 ವರ್ಷಗಳ ಇತಿಹಾಸ ಹೊಂದಿದ ಹಳೆ ಬ್ರಹ್ಮರಥದ ಮಾದರಿಯನ್ನಾಗಿಟ್ಟುಕೊಂಡು ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕೋಟೇಶ್ವರ ಸಮೀಪದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಗುರು ಲಕ್ಷ್ಮೀನಾರಾಯಣ ಆಚಾರ್ಯ ಇವರ ನೇತೃತ್ವದಲ್ಲಿ ನಿರ್ಮಾಣಗೊಂಡಿದೆ.

ಶಿಲ್ಪಶಾಸ್ತ್ರದ ಪ್ರಕಾರ ಸ್ಕಂದ್ಯ ರಥದ ಮಾದರಿಯಲ್ಲೇ ರಥವನ್ನು ತಯಾರಿಸಲಾಗಿದೆ. ಹಳೆಯ ರಥದ ಆಯ ಮತು ಅಳತೆಗೆ ಸಮವಾಗಿ ಪ್ರಾಚೀನ ಶಿಲ್ಪ ಕಲೆಗೆ ದಕ್ಕೆ ಬರದಂತೆ ನೆಲದಿಂದ ಜಿಡೆಯವರೆಗೆ 17 ಅಡಿ ಎತ್ತರ ಮತ್ತು 17 ಅಡಿ ಅಗಲವಾಗಿ ಒಟ್ಟು ರಥ ಕಲಶದ ತುದಿಯವರೆಗೆ 63 ಅಡಿ ಎತ್ತರ ಹೊಂದಿದೆ.

ಈ ರಥದಲ್ಲಿ ಒಟ್ಟು 6 ಚಕ್ರಗಳಿದ್ದು 8.5 ಅಡಿ ಎತ್ತರವಾಗಿದೆ. ಇದರಲ್ಲಿ ಅಜ್ಜಿನ ಮರ, ನೆಗಳನ ಅಡ್ಡೆ, ಮತ್ತು ಚಕ್ರಗಳು ಕಿರಾಲು ಬೋಗಿ ಮರದಿಂದ ತಯಾರಿಸಿದ್ದು ಇನ್ನುಳಿದ ಭಾಗಕ್ಕೆ ಸಂಪೂರ್ಣ ಸಾಗುವಾನಿ ಮರವನ್ನು ಬಳಸಲಾಗಿದೆ. ಈ ರಥವು 16 ಅಂತಸ್ತುಗಳ ಚೌಕದಲ್ಲಿ ಆನೆ ಜಂತಿ, ಬಳ್ಳಿಸಾಲು, ಪದ್ಮನ ಸಾಲು, 4 ಅಂತಸ್ತು ಚಿತ್ರದ ವಿಗ್ರಹಗಳು, ವಿಷ್ಣುವಿನ ಚರ್ತುವಂಶಿ ಚಿತ್ರಗಳು, ಶೀವನ ಲೀಲೆಗಳು, ದಕ್ಷಯಜ್ಞ, ಪಾರ್ವತಿ ಕಲ್ಯಾಣ, ಸುಬ್ರಹ್ಮಣ್ಯ ಜನನ, ಕಾರ್ತಿಕೇಯ, ರಾಮಯಾಣ ಭಾಗವಾದ ಪುತ್ರ ಕಾಮ್ಟೇಯಾಗ, ದಶಾವತಾರ, ದಿಕ್ಕುಪಾಲಕರು, ದೇವರು ಕುಳಿತುಕೊಳ್ಳುವ ಪೀಠ, ಆನೆ ಮೇಲೆ ಕುಳಿತ ಸಿಂಹ, ಚತುರ್ವಿಂಶತಿ ಮೂರ್ತಿಗಳು, 4 ಮೂಲೆಯಲ್ಲಿ 5 ಅಡಿ ಎತ್ತರದ ದ್ವಾರಪಾಲಕರೂ ಸೇರಿದಂತೆ ಸಾವಿರಾರೂ ಚಿತ್ರಗಳು ಕಾಷ್ಠ ಶಿಲ್ಪ ಕೆತ್ತನೆಯ ಶಿಲ್ಪಿಗಳಿಂದ ವೈಭವವಾಗಿ ಮೂಡಿಬಂದಿದೆ. ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ 42ಕ್ಕೂ ಅಧಿಕ ಮಂದಿ ಶಿಲ್ಪಿಗಳ ಮೂಲಕ ಹಳೆಯ ಶೈಲಿಯಲ್ಲಿಯೇ ನೂತನವಾಗಿ ಈ ಬ್ರಹ್ಮರಥ ನಿರ್ಮಾಣಗೊಂಡಿದೆ.

 

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

10 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

14 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

15 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

15 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago