Featured

ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ಕೌನ್ಸಿಲ್ ಮುತುವರ್ಜಿಯಲ್ಲಿ ಕೊರೋನಾ ಲಸಿಕಾ ಕ್ಯಾಂಪ್.vishwanews24

ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ಕೌನ್ಸಿಲ್ ಮುತುವರ್ಜಿಯಲ್ಲಿ ಕೊರೋನಾ ಲಸಿಕಾ ಕ್ಯಾಂಪ್.

ಕಾಪು : ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ಕೌನ್ಸಿಲ್ ಸದಸ್ಯರು,ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಯೋಜನೆಯಲ್ಲಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಗೃಹದಲ್ಲಿ ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ವನ್ನು ಉದ್ಘಾಟಿಸಿ ಕಾಪು ಪುರಸಭಾ ಅಧ್ಯಕ್ಷರಾದ ಅನಿಲ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಕಮಿಟಿ ಸಾರ್ವಜನಿಕರ ಸೇವೆಗಾಗಿ ದೇಗುಲ ಸಭಾಗೃಹವನ್ನು ಉಚಿತವಾಗಿ ನೀಡಿರುವ ಬಗ್ಗೆ ಕೃತಜ್ಞತೆ ಇದೆ ಮತ್ತು ಹಂತ ಹಂತವಾಗಿ ಪುರಸಭಾ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯಕ್ರಮ ವಾರ್ಡ್ ಮಟ್ಟದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಹಿಂದೆ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ನೀಡುತ್ತಿದ್ದು, ಜನಸಂದಣಿ ಜಾಸ್ತಿಯಾಗುತ್ತಿರುವ ಮತ್ತು ಸಾಮಾಜಿಕ ಅಂತರಕ್ಕೆ ಸಮಸ್ಯೆಯಾಗುವ ಕಾರಣ ಲಸಿಕಾ ಕೇಂದ್ರವನ್ನು ಶ್ರೀ ಹಳೇ ಮಾರಿಯಮ್ಮ ಸಭಾಗೃಹಕ್ಕೆ ಸ್ಥಳಾಂತರಿಸಲಾಗಿದೆ.

ಮೊದಲ ದಿನ 200ರಷ್ಟು ಡೋಸ್ ಗಳು ಲಭ್ಯವಿದ್ದು ಮಾಹಿತಿ ಪಡೆದ ಸಾರ್ವಜನಿಕರು ಮುಂಜಾನೆಯಿಂದಲೇ ಧಾವಿಸಿ ಸುಮಾರು 500ರಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಬಂದವರಲ್ಲಿ ಮೊದಲ 200 ಜನರ ನೋಂದಣಿ ಮಾಡಿ ಉಳಿದ ಸಾರ್ವಜನಿಕರನ್ನು ಲಸಿಕೆ ಬಂದ ಮೇಲೆ ಮಾಹಿತಿ ನೀಡುವುದಾಗಿ ಮನವರಿಕೆ ಮಾಡಲಾಯಿತು.


ಈ ಸಂಧರ್ಭದಲ್ಲಿ ಹಳೇ ಮಾರಿಯಮ್ಮ ದೇಗುಲ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಕಾಪುವಿನ ಪುರಸಭಾ    ಸದಸ್ಯರಾದ ಅಶ್ವಿಣಿ,ಅರುಣ್ ಶೆಟ್ಟಿ ಪಾದೂರು,ಉಸ್ಮಾನ್,ಹಮೀದ್, ಕಾಪು ಠಾಣ ಆರಕ್ಷಕರು ಹಾಗೂ ಸಿಬ್ಬಂದಿ ವರ್ಗ,ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯವರು ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.

ಜನಸಂದಣಿ ಹತೋಟಿ ತಂದ ಕಾಪು ಪಿಎಸೈ ರಾಘವೇಂದ್ರ.

ಲಸಿಕೆ ನೀಡುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಬೆಳಗ್ಗಿನ ಜಾವ 7 ಗಂಟೆಯ ಸುಮಾರಿಗೆ ಜನ ಸಭಾಗೃಹ ಸುತ್ತಾ ಸೇರಿಕೊಂಡು ಕೆಲವೊಂದು ಸಮಯ ಗೊಂದಲದ ವಾತಾವರಣ ಉಂಟಾಗಿತ್ತು ಕೂಡಲೇ ಸಾರ್ವಜನಿಕರ ಫೋಯ ಕರೆಗೆ ಸ್ಪಂದಿಸಿ ಸ್ಥಳಕಾಗಮಿಸಿದ ಕಾಪು ಪಿಎಸೈ ರಾಘವೇಂದ್ರ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವರಿಕೆ ಮಾಡಿ ಜನ ಸಂದಣಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು.

ಮಾಹಿತಿ ಕೊರತೆ ಮುಗಿ ಬಿದ್ದ ಜನ
ವ್ಯಾಕ್ಸಿನೇಷನ್‌ ವಿಚಾರವಾಗಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಮೇಸೆಜುಗಳಲ್ಲಿ ಸ್ಪಷ್ಟವಾಗಿ ಲಸಿಕೆ ಎಷ್ಟಿದೆ ಮತ್ತು ಬಂದ ಜನರಿಗೆ ಟೋಕನ್ ನೀಡುವಲ್ಲಿ ವಿಫಲವಾದ ಪರಿಣಾಮ ಜನ ಸಮಯ ಸಾಗುತ್ತಿದ್ದಂತೆ ಮುಗಿಬಿದ್ದಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್ -ವಿಶ್ವನ್ಯೂಸ್24

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago