ಉಡುಪಿ: ಜಿಲ್ಲಾ ರಾಹುಲ್ ಗಾಂಧಿ ಬ್ರಿಗೇಡ್ ವತಿಯಿಂದ ರಾಹುಲ್ ಗಾಂಧಿ 51ನೇ ಹುಟ್ಟುಹಬ್ಬ ಮಮತೆಯ ತೊಟ್ಟಿಲು ಆಶ್ರಮದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಜಮೀರ್ ಅವರ ನೇತೃತ್ವದಲ್ಲಿ ಆಶ್ರಮದ ಮಕ್ಕಳಿಗೆ 25 ಕುರ್ಚಿ, ಅಕ್ಕಿ, ಹಾಗೂ ಸಿಹಿ ತಿಂಡಿ ಹಂಚಿ ವಿಶೇಷ ರೀತಿಯಲ್ಲಿ ಮಕ್ಕಳ ಜೊತೆ ಹುಟ್ಟುಹಬ್ಬದ ಪ್ರಯುಕ್ತ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಮಮತೆಯ ತೊಟ್ಟಿಲು ಆಶ್ರಮದ ಕೆಲಸ ಕಾರ್ಯಗಳು ಶ್ಲಾಘನೀಯ ಈ ಆಶ್ರಮಕ್ಕೆ ಇನ್ನು ಮುಂದೆ ಪ್ರತಿ ತಿಂಗಳಿಗೆ 50 ಕೆಜಿ ಅಕ್ಕಿಯನ್ನು ಒಂದು ವರ್ಷ ನಿರಂತರವಾಗಿ ಡಿಕೆಶಿ ಅಭಿಮಾನಿ ಬಳಗ, ಯೂತ್ ಕಾಂಗ್ರೆಸ್, ವಿದ್ಯಾರ್ಥಿ ಸಂಘಟನೆ, ರಾಹುಲ್ ಗಾಂಧಿ ಬ್ರಿಗೇಡ್ ವತಿಯಿಂದ ನೀಡುವುದಾಗಿ ಆಶ್ರಮದ ಆಡಳಿತ ಮಂಡಳಿಗೆ ತಿಳಿಸಿದ್ದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್, ನಗರ ಸಭೆ ಸದಸ್ಯೆ ಅಮೃತ ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷ ಸೌರಬ್ ಬಲ್ಲಳ್ , ಕೆಪಿಸಿಸಿ ಸೋಷಿಯಲ್ ಮೀಡಿಯಾ ಉಡುಪಿ ಜಿಲ್ಲೆ ಮಾಜಿ ಕೋ ಆರ್ಡಿನೇಟರ್ ಪ್ರಭಾಕರ ಆಚಾರ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಗುರು ಪ್ರಸಾದ್ ಶೆಟ್ಟಿ, ಡಿಕೆಶಿ ಅಭಿಮಾನಿ ಬಳಗದ ಉಪಾಧ್ಯಕ್ಷ ಮಹೇಶ್ ಸುವರ್ಣ ಮಲ್ಪೆ, ಪ್ರಧಾನ ಕಾರ್ಯದರ್ಶಿ ಗಣೇಶ್, ವಿಧ್ಯಾರ್ಥಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಸೋದ್, ಹಾಗೂ ಆಕ್ರಮ್, ಪ್ರಥಮ್ ಪೂಜಾರಿ, ಫಯಲ್, ಮುನ್ನ, ನದಿಮಾ, ನಿಯಾಜ್, ಕ್ರಿಷ್ಟನ್, ಮೂಫಿದ್,ಗಣೇಶ್ ಶೇರಿಗರ್, ಓಂಕರ್ ಸುನಿಲ್, ಮುಂತಾದವರು ಉಪಸ್ಥಿತರಿದರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…