Featured

ಕೋಳಿ ಫಾರಂ -ನೊಣಗಳ ಹಾವಳಿ:ಹೇರೂರು ಗ್ರಾಮಸ್ಥರ ನರಕಯಾತನೆ- ದೂರು ಸಲ್ಲಿಸಿದ ಗ್ರಾಮಸ್ಥರು

ನೊಣಗಳ ಹಾವಳಿ:ಹೇರೂರು ಗ್ರಾಮಸ್ಥರ ನರಕಯಾತನೆ- ದೂರು ಸಲ್ಲಿಸಿದ ಗ್ರಾಮಸ್ಥರು

ಕಾಪು: ಮಜೂರು ಗ್ರಾಮ‌ಪಂಚಾಯತ್ ವ್ಯಾಪ್ತಿಯ ಹೇರೂರು ವಾರ್ಡಿನಲ್ಲಿ ನೊಣಗಳ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಮದ ಜನತೆ ಹಾಗೂ 92ನೇ ಹೇರೂರು ಹಾಲು ಉತ್ಪಾದಕರ ಮಹಿಳಾ ಸಂಘದದ ವತಿಯಿಂದ ಸ್ಥಳೀಯವಾಗಿರುವ ಕೋಳಿ ಫಾರಂನ್ನು ಸರಿಯಾಗಿ ನಿರ್ವಹಿಸಲು ಮಾಲಕರಿಗೆ ಸೂಚನೆ ನೀಡುವಂತೆ ಒತ್ತಾಯಿಸಿ ದೂರು ನೀಡಿರುವ ಘಟನೆ ಸೋಮವಾರ ಬೆಳಿಗ್ಗೆ ನಡೆಯಿತು.

ಮಜೂರು ಗ್ರಾಮಕ್ಕೆ ಹೊಂದಿಕೊಂಡಂತೆ ಹೇರೂರು ವಾರ್ಡಿನಲ್ಲಿ ಇರುವ  ಕೋಳಿ ಫಾರಂನಲ್ಲಿ ನೊಣಗಳು ದೊಡ್ಡ ಮಟ್ಟದಲ್ಲಿ ಉತ್ಪತ್ತಿಯಾಗುತ್ತಿರುವುದು ಸಾರ್ವಜನಿಕರ  ಹಾಗೂ ಹಾಲು ಉತ್ಪಾದಕರ ಅಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಕೆಲವು ಸಮಯಗಳಿಂದ ಕೋಳಿ ಫಾರಂನ್ನು ವಹಿಸಿಕೊಂಡು ಮೊಟ್ಟೆ ಕೋಳಿಗಳನ್ನು ಸಾಕಲು ಪ್ರಾರಂಭಿಸಿದ ದಿನದಿಂದ ನೊಣಗಳ ಸಮಸ್ಯೆ ಶುರುವಾಗಿದೆ ಎಂದು ದೂರಲಾಗಿದೆ.

ನೊಣಗಳ ಸಮಸ್ಯೆಯೆಂದರೆ ಒಬ್ಬಿಬ್ಬರ ಸಮಸ್ಯೆಯಲ್ಲ,  ಕುಳಿತರೆ ನೊಣ, ಊಟ ಮಾಡಲು ಹೋದರೆ ನೊಣ, ಮನೆಯಲ್ಲಿನ ಪಾತ್ರೆಗಳ ಮೇಲೆ ನೊಣಗಳು ಕುಳಿತು ಅಂಟು ಅಂಟಾಗಿವೆ, ಕಿಟಕಿ ಗಾಜುಗಳು, ಗೋಡೆಗಳು ನೊಣಗಳ ಅಂಟಿನಿಂದ ಗಲೀಜಾಗಿ ಕೈಯಿಂದ ಮುಟ್ಟಲಾಗದಂತೆ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಈ ಬಗ್ಗೆ ಮಜೂರು ಪಂಚಾಯತ್ ಪಿಡಿಓ ಪ್ರತಾಪ್ಚಂದ್ರ ಶೆಟ್ಟಿ ಮಾತನಾಡಿ ” ಈ ನೊಣಗಳ ವಿಚಾರವಾಗಿ ಕಳೆದ ವರ್ಷವೂ ದೂರು ಬಂದಿದ್ದು ಫಾರಂ‌ ಮಾಲಿಕರಿಗೆ ನೋಟಿಸ್ ನೀಡಿ ಸರಿಯಾಗಿ ಸ್ವಚ್ಛತೆ ಕಾಪಾಡಿಕೊಂಡು ನಿರ್ವಹಿಸುವಂತೆ‌ ಹೇಳಿದ್ದೇವು ಈ ಸಲ ಮತ್ತೆ ಸಮಸ್ಯೆಯಾಗಿದೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

20 ವರ್ಷಗಳಿಂದ ಕೋಳಿ ಫಾರಂ ನಡೆಯುತ್ತಿತ್ತು, ಆಗ ಏನು ಸಮಸ್ಯೆ ಇರಲಿಲ್ಲ. ಪ್ರಸ್ತುತ ಲೀಸ್ ಆಧಾರದಲ್ಲಿ   ವಹಿಸಿ ಕೊಂಡ ಮೇಲೆ ನೊಣಗಳ ಸಮಸ್ಯೆ ಜಾಸ್ತಿಯಾಗಿರಬಹುದು ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದೆಂದು ಫಾರಂ‌ಮಾಲಕರು ತಿಳಿಸಿದರು

ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಂಪೂರ್ಣವಾಗಿ ನೊಣಗಳನ್ನು ನಿಯಂತ್ರಿಸಿ ನಡೆಸಬೇಕು,ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾದರೇ ಕ್ರಮಕ್ಕಾಗಿ  ಒತ್ತಾಯಿಸಲಾಗುವುದು ಅನ್ನುತ್ತಾರೆ ವಾರ್ಡ್ ಸದಸ್ಯ ವಿಜಯ್ ಧೀರಜ್.

ಒಟ್ಟಾರೆಯಾಗಿ ಯಾವುದೇ ರೀತಿಯಿಂದಾದರೂ ಗ್ರಾಮದ ಜನರಿಗೆ ನೊಣಗಳ ಸಮಸ್ಯೆಯಿಂದ ಮುಕ್ತಿ ಸಿಗಲಿ‌ ಎಂಬುದು ಆಶಯ.
ಬ್ಯೂರೋ ರಿಪೋರ್ಟ್
ವಿಶ್ವನ್ಯೂಸ್24- ಕಾಪು

Vishwa News 24

Recent Posts

ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಉಬರ್’ ಸೇವೆ ಆರಂಭ -vishwanews24

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…

2 hours ago

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ -vishwanews24

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…

5 hours ago

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

6 hours ago

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ -vishwanews24

ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…

6 hours ago

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ -vishwanews24

246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…

6 hours ago

ಅಯೋಧ್ಯೆಯ ಹಣ ದುರುಪಯೋಗ ಆರೋಪ ;  ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ – vishwanews24

ಅಯೋಧ್ಯೆಯ ಹಣ ದುರುಪಯೋಗ ಆರೋಪ ;  ಧರ್ಮದ ಹೆಸರಿನಲ್ಲಿ ಲೂಟಿ ನಡೆದಿದೆ : ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಬೆಂಗಳೂರು :…

7 hours ago