Featured

55 ವರ್ಷದಿಂದ ಕೃಷಿ ಬದುಕು ಜತೆಗೆ ಉದ್ಯಮ ಹಾಗೂ ಸಾಮಾಜಿಕ ಜೀವನ ನಡೆಸುವ ಕಾಪು ಶೇಖರ ಸಾಲಿಯಾನ್.

55 ವರ್ಷದಿಂದ ಕೃಷಿ ಬದುಕು ಜತೆಗೆ ಉದ್ಯಮ ಹಾಗೂ ಸಾಮಾಜಿಕ ಜೀವನ ನಡೆಸುವ ಕಾಪು ಶೇಖರ ಸಾಲಿಯಾನ್.

ಕಾಪು :ಕೃಷಿಕ ದೇಶದ ಬೆನ್ನೆಲುಬು ಅಂತಾ ಕರಿತಾರೆ ಆದ್ರೇ ಕೃಷಿ ಕಡೆ ತಲೆ ಹಾಕಿ ಮಲಗುವುದೇ ಕಡಿಮೆ ಆಗಿದೆ .ಅಂತಹ ಈ ಸಮಯದಲ್ಲೂ ಕೃಷಿಯನ್ನೆ ಅವಲಂಭಿಸಿಕೊಂಡು ಅದರ ಜತೆಗೆ ಸಾಮಾಜಿಕ ಧಾರ್ಮಿಕ ಚಟುವಟಿಕೆಯಲ್ಲೂ ಕೂಡ ಸೈ ಅನಿಸಿಕೊಂಡಿರುವ ವ್ಯಕ್ತಿಯ ಈ ಸ್ಟೋರಿ.
ಹೌದು ಕಾಪು ಪುರಸಭಾ ವ್ಯಾಪ್ತಿಯ ಕಾಪು ದ್ವೀಪ ಸ್ಥಂಬದ ಬಳಿಯಲ್ಲಿ ವಾಸಿಸುತ್ತಿರುವ ಈ ವ್ಯಕ್ತಿ ಶೇಖರ್ ಸಾಲ್ಯಾನ್, ಸುಮಾರು 72 ವರ್ಷ ಪ್ರಾಯದ ಕೃಷಿನ ಕಾರ್ಯದಲ್ಲಿ ಯುವಕರಿಗೆ ಸೆಡ್ಡು ಹೊಡೆಯಬಲ್ಲ ವ್ಯಕ್ತಿ,ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಈ ವ್ಯಕ್ತಿ ಕಾಪು ಹೊಸ ಮಾರಿಯಮ್ಮ ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಸದಸ್ಯರಾಗಿ ಕಾಪು ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಅದರ ಜತೆಗೆ ಸುಮಾರು 50 ವರ್ಷದಿಂದ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿ ಭೂಮಿಯಲ್ಲಿ 365 ದಿನಾಲೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕರಾವಳಿ ಭಾಗದ ಏಕೈಕ ವ್ಯಕ್ತಿ ಕಾಪು ಶೇಖರ ಸಾಲ್ಯಾನ್.

ಬೆಳಗ್ಗಿನ ಜಾವ 5.30 ರಿಂದ ಮಧ್ಯಾಹ್ನದವರೆಗೆ ಸಂಪೂರ್ಣ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ತದನಂತರದ ಸಮಯ ತನ್ನ ಹೋಟೆಲ್ ಉದ್ಯಮ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೈ ಅನಿಸಿಕೊಂಡಿದ್ದಾರೆ.
ಪ್ರತಿ ವರ್ಷ ಭತ್ತದ ಪೈರು, ಜತೆಜತೆಗೆ ಕಲ್ಲಂಗಡಿ, 20ಕ್ಕೂ ಅಧಿಕ ಬಗೆಯ ಸಾವಯವ ತರಕಾರಿ ಸೌತೆಹಣ್ಣು,ಕುಂಬಳಕಾಯಿ, ಮೂಲಂಗಿ, ಕ್ಯಾರೆಟ್,ಬೀನ್ಸ್,ಅಲಸಂಡೆ, ಬಸಲೆ, ಟೋಮೆಟೊ, ಮೆಣಸು, ಮಾವು,ಸೇರಿದಂತೆ ಇನ್ನೂ ಹಲವು ಬಗೆಯ ಕೃಷಿಯನ್ನ ಬೆಳೆಸುತ್ತಾರೆ.
ಈ ಭಾರಿ ಸುಮಾರು 1 ಎಕರೆ ಜಾಗದಲ್ಲಿ ಕಲ್ಲಂಗಡಿ ಕೃಷಿ ಮಾಡಿದ್ದು ಒಂದೊಂದು ಕಲ್ಲಂಗಡಿ ಸುಮಾರು 10 ಕೇಜಿಗೂ ಅಧಿಕ ತೂಕದ ಇಳುವರಿ ಕಂಡಿದೆ.
ಆದರೇ ಈ ಎಲ್ಲಾ ಕೃಷಿ ಮಾಡಿದರೂ ಸಹ ಮಾರ್ಕೇಟ್ ಮಾತ್ರ ನರಸತ್ತಂತಾಗಿದೆ ಬೆಳೆಸಿದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕೆಲವೊಂದು ಸಲ ಮೂರು-ಮುಕ್ಕಾಲು ದರಕ್ಕೂ ನೀಡಿದ್ದು ಇದೆ ಅನ್ನತ್ತಾರೆ.

ಕೃಷಿ ಅಧ್ಯಯಾನದ ವಿಚಾರವಾಗಿ ವಿದೇಶವಾದ ಚೈನಾ ಹಾಗೂ ದೇಶದ ಮೂಲೆ ಮೂಲೆಗೂ ಸಂಚರಿಸಿ ಅಲ್ಲಿನ ಆಧುನಿಕ ಪ್ರಯೋಗವನ್ನ ಕರಾವಳಿ ಭಾಗಕ್ಕೆ ಹೊಂದಣಿಸಿ ಬೆಳೆ ಬೆಳೆಸಿದ್ದು ಇದೆ ಇವರು.

ಸುಮಾರು 55 ವರ್ಷದಿಂದ ಕೃಷಿ ಕಾರ್ಯ ಮಾಡುತ್ತಿದ್ದೇನೆ ,ಮಾದಲಿಗೆ ನಾನು ಕೃಷಿಕ ತದನಂತರ ಸಾಮಾಜಿಕ ಧಾರ್ಮಿಕ ಜತೆಗೆ ಉದ್ಯಮ,ಕೆಲವೊಂದು ಸಲ ಲಾಭ ನಷ್ಟ ಆಗಿದ್ದು ಇದೆ, ಹಾಗಂತ ಕಾಯಕ ನಿಲ್ಲಿಸಲಿಲ್ಲ ಮನೆಯ 365 ದಿನಕ್ಕೆ ಬೇಕಾಗುವಷ್ಟು ತರಕಾರಿ ಬೆಳೆಸಿ ಉಳಿದದನ್ನು ಸ್ಥಳಿಯ ಸಂತೆಗೆ ನೀಡುತ್ತೇವೆ ಮಾತ್ರವಲ್ಲದೆ ಲೈಟ್‍ಹೌಸ್ ನೋಡಲು ಬರುವ ಪ್ರವಾಸಿಗರೂ ಕೂಡ ಬಂದ ಸಾವಯಾವ ಎಂಬ ಕಾರಣದಿಂದ ಕೊಂಡುಕೊಳ್ಳುತ್ತಾರೆ, ಆದ್ರೇ ಮಾರ್ಕೇಟ್ ನಂಬಿಕೊಂಡು ಈಗಿನ ಕಾಲದಲ್ಲಿ ಕೃಷಿ ಮಾಡುವುದು ಭಾರಿ ಕಷ್ಟ.

 (ಕಾಪು ಶೇಖರ ಸಾಲಿಯಾನ್.)

ವರದಿ: ಪುರುಷೋತ್ತಮ ಸಾಲ್ಯಾನ್ ಮೂಳೂರು
9343846360

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago