ನವದೆಹಲಿ,: 2019 ಆರಂಭವಾದಾಗಿನಿಂದ ಈವರೆಗೆ ಅಂದರೆ 70 ದಿನಗಳಲ್ಲಿ ಭಾರತ 44 ಮೋಸ್ಟ್ ವಾಂಟೆಡ್ ಉಗ್ರರನ್ನು ಹತ್ಯೆಗೈದಿದೆ ಎಂದು ಭಾರತೀಯ ಸೇನಾಧಿಕಾರಿಗಳು ಸ್ಪಷ್ಟಪಡಿಸಿವೆ.
ದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೇನಾಧಿಕಾರಿಗಳು, 70 ದಿನಗಳಲ್ಲಿ ಭಾರತೀಯ ಸೇನಾಪಡೆ ಒಂದಲ್ಲ, ಎರಡಲ್ಲ 44 ಮಂದಿ ಉಗ್ರರನ್ನು ಹೊಡೆದುರುಳಿಸಿದೆ. ಇದು ಭಾರತೀಯ ಸೇನೆಯ ಬಲ ಎಂದು ವಿವರಿಸಿದರು. ಇನ್ನು 2019 ಆರಂಭವಾದಾಗಿನಿಂದ ಈವರೆಗೆ ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿನಿಯಂತ್ರಣ ರೇಖೆಯಲ್ಲಿ ಬರೋಬರಿ 478 ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನದ ಈ ದಾಳಿಗೆ ಭಾರತೀಯ ಸೇನೆ ದಿಟ್ಟವಾಗಿ ಎದುರಿಸಿದೆ ಎಂದರು.
ಇನ್ನು ಫೆ.14 ರಂದು ಪುಲ್ವಾಮಾದಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಕಾರಣವಾಗಿರುವ ಜೈಶ್-ಇ-ಮೊಹಮದ್ ಸಂಘಟನೆ ಉಗ್ರರನ್ನೇ ಸೇನೆ ಹೆಚ್ಚಾಗಿ ಹೊಡೆದುರುಳಿಸಿದೆ. 70 ದಿನಗಳ ಅವಧಿಯಲ್ಲಿ ಭಾರತೀಯ ಸೇನಾಪಡೆ 44 ಉಗ್ರರನ್ನು ಹೊಡೆದುರುಳಿಸಲಾಗಿದೆ. ಆದರೆ, ದುರಾದೃಷ್ಟವಶಾತ್ ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಾವು ಕಳೆದುಕೊಂಡಿದ್ದೇವೆ. ಪುಲ್ವಾಮಾ ದಾಳಿಗೆ ಹುತಾತ್ಮರಾದ ಸೈನಿಕರು ಸೇರಿ 50ಕ್ಕೂ ಹೆಚ್ಚು ಸೈನಿಕರು 70 ದಿನಗಳಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದರು. ಕಳೆದ 21 ದಿನಗಳ ಅಂತರದಲ್ಲಿ 18 ಉಗ್ರರನ್ನು ಹತ್ಯೆಗೈದಿದ್ದು, ಅದರಲ್ಲಿ 14 ಜೈಶ್-ಇ-ಮೊಹಮದ್ ಸಂಘಟನೆಯವರು ಸೇರಿದ್ದಾರೆ. ಈ 14 ಮಂದಿಯ ಪೈಕಿ 6 ಮಂದಿ ಸಂಘಟನೆಯ ಕಮಾಂಡರ್ ಗಳಾಗಿದ್ದಾರೆಂದು ಸೇನಾಧಿಕಾರಿಗಳು ವಿವರಿಸಿದರು.
ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…
ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…
ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ ಕಾಪು: ಕಾಪು ಕಡಲ ಕಿನಾರೆಯಲ್ಲಿ…
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…