Featured

8 ತಿಂಗಳಿನಿಂದ ಸ್ಥಗಿತಗೊಂಡಿದ್ದ ಕುಂದಾಪುರ- ತ್ರಾಸಿ – ಬಡಾಕೆರೆ  ಬಸ್ ಸಂಚಾರ ಮತ್ತೆ ಆರಂಭ – vishwanews24

8 ತಿಂಗಳಿನಿಂದ ಸ್ಥಗಿತಗೊಂಡಿದ್ದ ಕುಂದಾಪುರ- ತ್ರಾಸಿ – ಬಡಾಕೆರೆ  ಬಸ್ ಸಂಚಾರ ಮತ್ತೆ ಆರಂಭ

ಮುಳ್ಳಿಕಟ್ಟೆ : ಕಳೆದ 8 ತಿಂಗಳಿನಿಂದ ಸ್ಥಗಿತಗೊಂಡಿದ್ದ ಕುಂದಾಪುರ- ತ್ರಾಸಿ – ಬಡಾಕೆರೆ ಕೆಎಸ್ ಆರ್‌ಟಿಸಿ ಬಸ್ ಬುಧವಾರದಿಂದ ಮತ್ತೆ ಸಂಚಾರ ಆರಂಭಿಸಿದೆ. ಆ ಮೂಲಕ ಗ್ರಾಮೀಣ ಭಾಗದ ಜನರಿಗೆ, ಶಾಲಾ – ಕಾಲೇಜು ಮಕ್ಕಳಿಗೆ ಕುಂದಾಪುರ ಸಹಿತ ನಗರ ಭಾಗಕ್ಕೆ ಬರಲು ಅನುಕೂಲವಾಗಲಿದೆ. ಕುಂದಾಪುರದಿಂದ ತ್ರಾಸಿ, ಮೊವಾಡಿ, ನಾಡ, ಕೊಮೆ, ಬಡಾಕೆರೆಗೆ ಸಂಚರಿಸುವ ಈ ಬಸ್ ಸಂಚಾರವು ಕಳೆದ ಎ.4 ರಿಂದ ಸ್ಥಗಿತಗೊಂಡಿತ್ತು. ಈ ಬಸ್ ಸಂಚಾರಕ್ಕೆ ಇಲ್ಲಿನ ಸಂಘಟನೆಗಳು, ಊರವರು ಅನೇಕ ಸಮಯದಿಂದ ಹೋರಾಟ ಮಾಡಿದ್ದಲ್ಲದೆ, ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಈಗ ಈ ಬಸ್ ಸಂಚಾರ ಆರಂಭಗೊಂಡಿದ್ದರಿಂದ ಇಲ್ಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬಸ್ ಗೆ ಊರವರ ಸ್ವಾಗತ
ಬುಧವಾರ ಕುಂದಾಪುರದಿಂದ ನಾಡ ಕಡೆಗೆ ಬಂದ ಈ ಬಸ್ಸನ್ನು ನಾಡ ಗ್ರಾ.ಪಂ. ಸದಸ್ಯ ರಾಜೀವ ಪಡುಕೋಣೆ, ಡಿವೈಎಫ್ ಐ ಪಡುಕೋಣೆ ಘಟಕದ ಎಲ್ಲ ಸದಸ್ಯರು, ಜನವಾದಿ ಮಹಿಳಾ ಸಂಘಟನೆಯ ಸದಸ್ಯರು, ಕಟ್ಟಡ ಮತ್ತು ಇತರೆ ಕಾರ್ಮಿಕ ಸಂಘಟನೆಯ ಸದಸ್ಯರು, ಶಾಲಾ – ಕಾಲೇಜು ಮಕ್ಕಳು, ಊರವರು
ಕಳೆದ 8 ತಿಂಗಳಿಂದ ನಡೆಸುತ್ತಿದ್ದ ನಮ್ಮ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದರಿಂದ ರಾಜ್ಯ ಸರಕಾರದ ಶಕ್ತಿ ಯೋಜನೆಯ ಪ್ರಯೋಜನ ಈ ಭಾಗದ ಮಹಿಳೆಯರಿಗೂ ಸಿಗಲಿದೆ.

ಶಾಲಾ – ಕಾಲೇಜು ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ಪ್ರಯೋಜನ ಆಗಲಿದೆ. ಅಧಿಕಾರಿಗಳೆಲ್ಲರಿಗೂ ನಮ್ಮ ಕೃತಜ್ಞತೆಗಳು ಎನ್ನುವುದಾಗಿ ನಾಡ ಗ್ರಾ.ಪಂ. ಸದಸ್ಯ ರಾಜೀವ ಪಡುಕೋಣೆ ಹೇಳಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago