ಮುಳ್ಳಿಕಟ್ಟೆ : ಕಳೆದ 8 ತಿಂಗಳಿನಿಂದ ಸ್ಥಗಿತಗೊಂಡಿದ್ದ ಕುಂದಾಪುರ- ತ್ರಾಸಿ – ಬಡಾಕೆರೆ ಕೆಎಸ್ ಆರ್‌ಟಿಸಿ ಬಸ್ ಬುಧವಾರದಿಂದ ಮತ್ತೆ ಸಂಚಾರ ಆರಂಭಿಸಿದೆ. ಆ ಮೂಲಕ ಗ್ರಾಮೀಣ ಭಾಗದ ಜನರಿಗೆ, ಶಾಲಾ – ಕಾಲೇಜು ಮಕ್ಕಳಿಗೆ ಕುಂದಾಪುರ ಸಹಿತ ನಗರ ಭಾಗಕ್ಕೆ ಬರಲು ಅನುಕೂಲವಾಗಲಿದೆ. ಕುಂದಾಪುರದಿಂದ ತ್ರಾಸಿ, ಮೊವಾಡಿ, ನಾಡ, ಕೊಮೆ, ಬಡಾಕೆರೆಗೆ ಸಂಚರಿಸುವ ಈ ಬಸ್ ಸಂಚಾರವು ಕಳೆದ ಎ.4 ರಿಂದ ಸ್ಥಗಿತಗೊಂಡಿತ್ತು. ಈ ಬಸ್ ಸಂಚಾರಕ್ಕೆ ಇಲ್ಲಿನ ಸಂಘಟನೆಗಳು, ಊರವರು ಅನೇಕ ಸಮಯದಿಂದ ಹೋರಾಟ ಮಾಡಿದ್ದಲ್ಲದೆ, ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಈಗ ಈ ಬಸ್ ಸಂಚಾರ ಆರಂಭಗೊಂಡಿದ್ದರಿಂದ ಇಲ್ಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬಸ್ ಗೆ ಊರವರ ಸ್ವಾಗತ
ಬುಧವಾರ ಕುಂದಾಪುರದಿಂದ ನಾಡ ಕಡೆಗೆ ಬಂದ ಈ ಬಸ್ಸನ್ನು ನಾಡ ಗ್ರಾ.ಪಂ. ಸದಸ್ಯ ರಾಜೀವ ಪಡುಕೋಣೆ, ಡಿವೈಎಫ್ ಐ ಪಡುಕೋಣೆ ಘಟಕದ ಎಲ್ಲ ಸದಸ್ಯರು, ಜನವಾದಿ ಮಹಿಳಾ ಸಂಘಟನೆಯ ಸದಸ್ಯರು, ಕಟ್ಟಡ ಮತ್ತು ಇತರೆ ಕಾರ್ಮಿಕ ಸಂಘಟನೆಯ ಸದಸ್ಯರು, ಶಾಲಾ – ಕಾಲೇಜು ಮಕ್ಕಳು, ಊರವರು
ಕಳೆದ 8 ತಿಂಗಳಿಂದ ನಡೆಸುತ್ತಿದ್ದ ನಮ್ಮ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇದರಿಂದ ರಾಜ್ಯ ಸರಕಾರದ ಶಕ್ತಿ ಯೋಜನೆಯ ಪ್ರಯೋಜನ ಈ ಭಾಗದ ಮಹಿಳೆಯರಿಗೂ ಸಿಗಲಿದೆ.
ಶಾಲಾ – ಕಾಲೇಜು ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ಪ್ರಯೋಜನ ಆಗಲಿದೆ. ಅಧಿಕಾರಿಗಳೆಲ್ಲರಿಗೂ ನಮ್ಮ ಕೃತಜ್ಞತೆಗಳು ಎನ್ನುವುದಾಗಿ ನಾಡ ಗ್ರಾ.ಪಂ. ಸದಸ್ಯ ರಾಜೀವ ಪಡುಕೋಣೆ ಹೇಳಿದ್ದಾರೆ.
ಮಲ್ಪೆ : ಸೈಂಟ್‌ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…