Featured

8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ಕೊಲೆ ಮಾಡಿ ಕಾಲುವೆಗೆ ಎಸೆದ ಮೂವರು ಅಪ್ರಾಪ್ತ ಬಾಲಕರು – vishwanews24

8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ.. ಕೊಲೆ ಮಾಡಿ ಕಾಲುವೆಗೆ ಎಸೆದ ಮೂವರು ಅಪ್ರಾಪ್ತ ಬಾಲಕರು

ಆಂಧ್ರಪ್ರದೇಶ : ಮೂರನೇ ತರಗತಿಯ ಬಾಲಕಿಯ ಮೇಲೆ ಮೂವರು ಬಾಲಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿ ಅತ್ಯಾಚಾರ ಮಾಡಿದ ನಂತರ ಆಕೆಯನ್ನು ಕೊಲೆ ಮಾಡಿ ಕಾಲುವೆಗೆ ಎಸೆದಿರುವ ಮಾಹಿತಿ ಲಭ್ಯವಾಗಿದೆ.

ಆಂಧ್ರಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕರು ಮಾಡಿದ ಪೈಶಾಚಿಕ ಕೃತ್ಯಕ್ಕೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿಯೊಬ್ಬಳನ್ನು ಮೂವರು ಬಾಲಕರು ಸೇರಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.

ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್‌ಮರಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೂವರು ಬಾಲಕರು ಸೇರಿ ಶಾಲಾ ರಜಾದಿನವಾದ ಭಾನುವಾರ ಈ ಕೃತ್ಯವೆಸಗಿದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

ಬಾಲಕಿ 3ನೇ ತರಗತಿಯಲ್ಲಿ ಓದುತ್ತಿದ್ದರೆ ಇಬ್ಬರು 6ನೇ ತರಗತಿ, ಇನ್ನೊಬ್ಬ ಬಾಲಕ 7ನೇ ತರಗತಿಯಲ್ಲಿ ಓದುತ್ತಿದ್ದ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಅಪ್ರಾಪ್ತ ಬಾಲಕಿಯ ತಂದೆ ಭಾನುವಾರ ದೂರು ದಾಖಲಿಸಿದ್ದರು.

ಮುಚುಮರಿ ಪಾರ್ಕ್‌ನಲ್ಲಿ ಬಾಲಕಿ ಆಟವಾಡುತ್ತಿರುವುದನ್ನು ಗಮನಿಸಿದ ದುರುಳ ಬಾಲಕರು ಆಕೆಯನ್ನು  ತಮ್ಮೊಂದಿಗೆ ಆಟವಾಡಲು ಬರುವಂತೆ ಕರೆದಿದ್ದಾರೆ. ಬಳಿಕ  ನೀರಾವರಿ ಯೋಜನೆಯ ಸಮೀಪದ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಆಕೆಯ ಬಾಯನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿ ಒಬ್ಬರಾದ ಮೇಲೊಬ್ಬರಂತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದಾದ ನಂತರ ಬಾಲಕರಿಗೆ ಆಕೆ ತನ್ನ ಪೋಷಕರಿಗೆ ತಮ್ಮ ಬಗ್ಗೆ ಹೇಳಿದರೆ ಎಂಬ ಭಯ ಶುರುವಾಗಿದೆ. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ ಪಾಪಿಗಳು ಬಳಿಕ ಆಕೆಯ ದೇಹವನ್ನು ನೀರಿಗೆ ಎಸೆದು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.

ಮುಚ್ಚುಮರ್ರಿ ಪಾರ್ಕ್​ನಲ್ಲಿ ಪೊಲೀಸರು , ಪೋಷಕರೆಲ್ಲರೂ ಹುಡುಕಾಟ ನಡೆಸಿದ್ದರು, ಆದರೂ ಬಾಲಕಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಸ್ನಿಫರ್​ ಡಾಗ್​ನ್ನು ಕರೆದುಕೊಂಡು ಬರಲಾಯಿತು. ನಾಯಿಯ ಸುಳಿವು ಪೊಲೀಸರನ್ನು ಮೂವರು ಅಪ್ರಾಪ್ತ ಬಾಲಕರ ನಿವಾಸಗಳಿಗೆ ಕರೆದೊಯ್ಯಿತು.

 

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

17 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

18 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

18 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

18 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

18 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

19 hours ago