ನ್ಯೂಯಾರ್ಕ್: ಭಾರತೀಯ ಮೂಲದ ಸಾಫ್ಟ್ವೇರ್ ಉದ್ಯೋಗಿ ದಂಪತಿಗಳಿಬ್ಬರು ಪ್ರವಾಸಿ ಸ್ಥಳದಲ್ಲಿ ಪ್ರಪಾತಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಯೋಸೆಮೈಟ್ ನ್ಯಾಷನಲ್ ಪಾರ್ಕ್‌ನಲ್ಲಿ ಆಕ್ಟೋಬರ್ 25 ರಂದು ವಿಷ್ಣು ವಿಶ್ವನಾಥ್ (29) ಮತ್ತು ಪತ್ನಿ ಮೀನಾಕ್ಷಿ ಮೂರ್ತಿ (30) ಅವರು 800 ಅಡಿ ಆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಸೋಮವಾರ ಮೇಲಕ್ಕೆತ್ತಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.
ವಿಷ್ಣು ಅವರಿಗೆ ಇತ್ತೀಚೆಗೆ ಸಿಸ್ಕೋ ಕಂಪೆನಿಯಲ್ಲಿ ಸಿಸ್ಟಂ ಇಂಜಿನಿಯರ್ ಆಗಿ ಕೆಲಸ ಸಿಕ್ಕಿದ ಹಿನ್ನಲೆಯಲ್ಲಿ ದಂಪತಿಗಳು ಅಮೆರಿಕಕ್ಕೆ ತೆರಳಿ ಅಲ್ಲಿ ನೆಲೆಸಿದ್ದರು.
ಇಬ್ಬರು ಚಾರಣ ಪ್ರಿಯರಾಗಿದ್ದು ಸಾಹಸ ಪ್ರವೃತ್ತಿಯವರಾಗಿದ್ದರು. ಹಾಲಿಡೇಸ್ ಎಂಡ್ ಹ್ಯಾಪಿಲಿ ಎವರ್ ಆಫ್ಟರ್ ಎನ್ನುವ ಬ್ಲಾಗ್‌ನಲ್ಲಿ ತಮ್ಮ ಪ್ರವಾಸದ ಅನುಭವಗಳನ್ನು ಪೋಸ್ಟ್ ಮಾಡುತ್ತಿದ್ದರು.
ದಂಪತಿ 2014 ರಲ್ಲಿ ವಿವಾಹವಾಗಿದ್ದರು. ಚೆಂಗನೂರಿನಲ್ಲಿ ಇಬ್ಬರು ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.
ಸೆಲ್ಫಿ ತಂದ ಸಾವು
ದಂಪತಿ ಸಾಯುವುದಕ್ಕೂ ಮುಂಚೆ ಸೆಲ್ಫಿ ತೆಗೆದುಕೊಂಡಿದ್ದಾರೆ. ವಿಶ್ವದ ಜನಪ್ರಿಯ ನ್ಯಾಷನಲ್ ಪಾರ್ಕ್ನ ತುದಿಯಲ್ಲಿ ಒಂದು ವೇಳೆ ಪ್ರವಾಸಿಗರು ಆಯತಪ್ಪಿ ಬಿದ್ದರೂ ರಕ್ಷಣೆಗಾಗಿ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಮೃತ ವಿಶ್ವನಾಥ್ ಸೋದರ ಜಿಷ್ಣು ವಿಶ್ವನಾಥ್ ಅಂತಾರಾಷ್ಟ್ರೀಯ ಸುದ್ದಿವಾಹಿನಿ ಗೆ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಿಂದ ಪಾರ್ಕ್ನ ಅಧಿಕಾರಿಗಳು ಟ್ರೈಪಾಡ್ ವಶ ಪಡಿಸಿಕೊಂಡಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೃತ ಮೀನಾಕ್ಷಿ ಟ್ರೈಪಾಡ್ ಸೆಟ್ ಮಾಡಿದ್ದರು ಎಂಬುದು ತಿಳಿದುಬಂದಿದೆ. ಇದರ ಆಧಾರದ ಮೇಲೆ ದಂಪತಿ ಪ್ರಪಾತಕ್ಕೆ ಬಿದ್ದಿರುವುದು ಖಚಿತಗೊಂಡು ಕಳೆದ ವಾರ ಬೈನಾಕ್ಯುಲರ್ ಮತ್ತು ಹೆಲಿಕಾಪ್ಟರ್ಗಳನ್ನು ಬಳಸಿ ಮೃತದೇಹಗಳನ್ನು ಮೇಲೆತ್ತಿದ್ದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…