Featured

800 ಅಡಿ ಪ್ರಪಾತಕ್ಕೆ ಬಿದ್ದ ಭಾರತೀಯ ದಂಪತಿಗಳ ದಾರುಣ ಅಂತ್ಯ

ನ್ಯೂಯಾರ್ಕ್‌: ಭಾರತೀಯ ಮೂಲದ ಸಾಫ್ಟ್ವೇರ್‌ ಉದ್ಯೋಗಿ ದಂಪತಿಗಳಿಬ್ಬರು ಪ್ರವಾಸಿ ಸ್ಥಳದಲ್ಲಿ  ಪ್ರಪಾತಕ್ಕೆ ಬಿದ್ದು  ದಾರುಣವಾಗಿ ಸಾವನ್ನಪ್ಪಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಕ್ಯಾಲಿಫೋರ್ನಿಯಾದ ಯೋಸೆಮೈಟ್‌ ನ್ಯಾಷನಲ್‌ ಪಾರ್ಕ್‌ನಲ್ಲಿ  ಆಕ್ಟೋಬರ್‌ 25 ರಂದು ವಿಷ್ಣು ವಿಶ್ವನಾಥ್‌ (29) ಮತ್ತು ಪತ್ನಿ ಮೀನಾಕ್ಷಿ ಮೂರ್ತಿ (30) ಅವರು 800 ಅಡಿ ಆಳಕ್ಕೆ ಬಿದ್ದು  ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಸೋಮವಾರ ಮೇಲಕ್ಕೆತ್ತಿ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.

ವಿಷ್ಣು ಅವರಿಗೆ ಇತ್ತೀಚೆಗೆ ಸಿಸ್ಕೋ ಕಂಪೆನಿಯಲ್ಲಿ ಸಿಸ್ಟಂ ಇಂಜಿನಿಯರ್‌ ಆಗಿ ಕೆಲಸ ಸಿಕ್ಕಿದ ಹಿನ್ನಲೆಯಲ್ಲಿ ದಂಪತಿಗಳು ಅಮೆರಿಕಕ್ಕೆ ತೆರಳಿ ಅಲ್ಲಿ ನೆಲೆಸಿದ್ದರು.

ಇಬ್ಬರು ಚಾರಣ ಪ್ರಿಯರಾಗಿದ್ದು ಸಾಹಸ ಪ್ರವೃತ್ತಿಯವರಾಗಿದ್ದರು. ಹಾಲಿಡೇಸ್‌ ಎಂಡ್‌ ಹ್ಯಾಪಿಲಿ ಎವರ್‌ ಆಫ್ಟರ್‌ ಎನ್ನುವ ಬ್ಲಾಗ್‌ನಲ್ಲಿ ತಮ್ಮ ಪ್ರವಾಸದ ಅನುಭವಗಳನ್ನು ಪೋಸ್ಟ್‌ ಮಾಡುತ್ತಿದ್ದರು.

ದಂಪತಿ 2014 ರಲ್ಲಿ ವಿವಾಹವಾಗಿದ್ದರು. ಚೆಂಗನೂರಿನಲ್ಲಿ ಇಬ್ಬರು ಇಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು.

ಸೆಲ್ಫಿ ತಂದ ಸಾವು
ದಂಪತಿ ಸಾಯುವುದಕ್ಕೂ ಮುಂಚೆ ಸೆಲ್ಫಿ ತೆಗೆದುಕೊಂಡಿದ್ದಾರೆ. ವಿಶ್ವದ ಜನಪ್ರಿಯ ನ್ಯಾಷನಲ್​ ಪಾರ್ಕ್​ನ ತುದಿಯಲ್ಲಿ ಒಂದು ವೇಳೆ ಪ್ರವಾಸಿಗರು ಆಯತಪ್ಪಿ ಬಿದ್ದರೂ ರಕ್ಷಣೆಗಾಗಿ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಮೃತ ವಿಶ್ವನಾಥ್​ ಸೋದರ ಜಿಷ್ಣು ವಿಶ್ವನಾಥ್ ಅಂತಾರಾಷ್ಟ್ರೀಯ ಸುದ್ದಿವಾಹಿನಿ​ ​​ಗೆ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಿಂದ ಪಾರ್ಕ್​ನ ಅಧಿಕಾರಿಗಳು ಟ್ರೈಪಾಡ್​ ವಶ ಪಡಿಸಿಕೊಂಡಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೃತ ಮೀನಾಕ್ಷಿ ಟ್ರೈಪಾಡ್ ಸೆಟ್​ ಮಾಡಿದ್ದರು ಎಂಬುದು ತಿಳಿದುಬಂದಿದೆ. ಇದರ ಆಧಾರದ ಮೇಲೆ ದಂಪತಿ ಪ್ರಪಾತಕ್ಕೆ ಬಿದ್ದಿರುವುದು ಖಚಿತಗೊಂಡು ಕಳೆದ ವಾರ ಬೈನಾಕ್ಯುಲರ್ ಮತ್ತು ಹೆಲಿಕಾಪ್ಟರ್​ಗಳನ್ನು ಬಳಸಿ ಮೃತದೇಹಗಳನ್ನು ಮೇಲೆತ್ತಿದ್ದರು.

 

 

Vishwa News 24

Recent Posts

ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24

ನಾಗುರಿ ದುರಂತ - ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಮಂಗಳೂರು: ನಾಗುರಿಯಲ್ಲಿ ಮನೆ…

8 minutes ago

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ – vishwanews24

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ ಬೆಂಗಳೂರು: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ…

15 minutes ago

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ…

2 hours ago

ಆಟೋ ಎಲ್‌ಪಿಜಿ ದರ 10 ರೂ. ಇಳಿಕೆ – vishwanews24

ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ 10 ರೂ. ಇಳಿಕೆ ಬೆಂಗಳೂರು: ನಿರಂತರ ಎಲ್‌ಪಿಜಿ  ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ…

2 hours ago

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ – ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ – vishwanews24

ರಾಮ ಮಂದಿರದ ದೇಣಿಗೆ ಹಣ ದುರುಪಯೋಗ ಆರೋಪ - ಸಿಎಂ ಯೋಗಿ ಯಾರ ತಪ್ಪನ್ನೂ ಸಹಿಸಲ್ಲ : ಸಿ.ಟಿ.ರವಿ ಬೆಂಗಳೂರು:…

2 hours ago

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ –  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ – vishwanews24

ಮಂಗಳೂರು: ಬೈಕಂಪಾಡಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ -  ವಾಹನವನ್ನು ಬಿಟ್ಟು ಪರಾರಿಯಾದ ಆರೋಪಿಗಳು ; ಕಾರು ಪತ್ತೆ ಮಂಗಳೂರು: ಬೈಕಂಪಾಡಿ…

3 hours ago