ನವದೆಹಲಿ: ಭೂಮಿಯಿಂದ ಸೂರ್ಯನತ್ತ ಹೊರಟು ನಾಲ್ಕು ತಿಂಗಳ ಪೂರೈಸಿ, 15 ಲಕ್ಷ ಕಿ.ಮೀ ಕ್ರಮಿಸಿರುವ ಆದಿತ್ಯ ಎಲ್1 ನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಗೆ ಸೇರಿಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ.
ಕಳೆದ ವರ್ಷ ಸೆ.2ರಂದು ಆದಿತ್ಯ ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಇದೀಗ 15 ಲಕ್ಷ ಕಿ.ಮೀ ಸಂಚರಿಸಿ ನಿಗದಿತ ಕಕ್ಷೆಯ ಬಳಿ ಸಮೀಪಿಸಿರುವ ಅದನ್ನು ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶಕ್ಕೆ ಸೇರಿಸಲಾಗುತ್ತದೆ. ಉಪಗ್ರಹವನ್ನು ಸುಮಾರು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ 1 (L1) ಗೆ ಸೇರಿಸುವ ನಿರೀಕ್ಷೆಯಿದೆ. ಅಕಸ್ಮಾತ್ ಅದನ್ನು ಆ ಪ್ರದೇಶಕ್ಕೆ ಸೇರಿಸದೇ ಇದ್ದರೆ ಅದು ಸೂರ್ಯನೆಡೆಗೆ ಸಂಚರಿಸಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂದು (ಶನಿವಾರ) ಇಸ್ರೋಗೆ ಮಹತ್ವದ ದಿನವಾಗಿದೆ.
ಎಲ್1 ಪಾಯಿಂಟ್ ಎಂಬುದು ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರ ಭಾಗವಾಗಿದೆ. ಇಲ್ಲಿಂದ, ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಆದಿತ್ಯ ಎಲ್1 ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಆದಿತ್ಯ ಎಲ್1 ಅಧ್ಯಯನ ನಡೆಸಲಿದೆ. ಆದಿತ್ಯ ಎಲ್1 ನಾಲ್ಕು ಪೆಲೋಡ್‍ಗಳನ್ನು ಹೊಂದಿದ್ದು, ಅಲ್ಲಿಂದ ನೇರವಾಗಿ ಇಸ್ರೋಗೆ ಮಾಹಿತಿ ರವಾನಿಸಲಿದೆ.
ಚಂದ್ರಯಾನ 3 ಯಶಸ್ವಿಯಾದ ಬಳಿಕ ಇದು ಇಸ್ರೋದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇದರ ಬೆನ್ನಲ್ಲೇ ಹೊಸವರ್ಷದ ಮೊದಲ ದಿನವೇ ಕಪ್ಪು ಕುಳಿಗಳ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್ ಉಪಗ್ರಹದ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ಮಾಡಿತ್ತು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…