Featured

ಇಸ್ರೋ ಮಹತ್ವದ ಕಾರ್ಯಾಚರಣೆ : ಇಂದು ಅಂತಿಮ ಕಕ್ಷೆ ತಲುಪಲಿದೆ ಆದಿತ್ಯ-ಎಲ್ 1 – vishwanews24

ಇಸ್ರೋ ಮಹತ್ವದ ಕಾರ್ಯಾಚರಣೆ : ಇಂದು ಅಂತಿಮ ಕಕ್ಷೆ ತಲುಪಲಿದೆ ಆದಿತ್ಯ-ಎಲ್ 1

ನವದೆಹಲಿ: ಭೂಮಿಯಿಂದ ಸೂರ್ಯನತ್ತ  ಹೊರಟು ನಾಲ್ಕು ತಿಂಗಳ ಪೂರೈಸಿ, 15 ಲಕ್ಷ ಕಿ.ಮೀ ಕ್ರಮಿಸಿರುವ ಆದಿತ್ಯ ಎಲ್1  ನೌಕೆಯನ್ನು ಇಂದು ಅದರ ನಿಗದಿತ ಕಕ್ಷೆಗೆ ಸೇರಿಸಲು ಇಸ್ರೋ  ವಿಜ್ಞಾನಿಗಳು ಸಜ್ಜಾಗಿದ್ದಾರೆ.

ಕಳೆದ ವರ್ಷ ಸೆ.2ರಂದು ಆದಿತ್ಯ ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಇದೀಗ 15 ಲಕ್ಷ ಕಿ.ಮೀ ಸಂಚರಿಸಿ ನಿಗದಿತ ಕಕ್ಷೆಯ ಬಳಿ ಸಮೀಪಿಸಿರುವ ಅದನ್ನು ಎಲ್1 ಪಾಯಿಂಟ್ ಎಂಬ ನಿರ್ವಾತ ಪ್ರದೇಶಕ್ಕೆ ಸೇರಿಸಲಾಗುತ್ತದೆ. ಉಪಗ್ರಹವನ್ನು ಸುಮಾರು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ 1 (L1) ಗೆ ಸೇರಿಸುವ ನಿರೀಕ್ಷೆಯಿದೆ. ಅಕಸ್ಮಾತ್ ಅದನ್ನು ಆ ಪ್ರದೇಶಕ್ಕೆ ಸೇರಿಸದೇ ಇದ್ದರೆ ಅದು ಸೂರ್ಯನೆಡೆಗೆ ಸಂಚರಿಸಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಂದು (ಶನಿವಾರ) ಇಸ್ರೋಗೆ  ಮಹತ್ವದ ದಿನವಾಗಿದೆ.

ಎಲ್1 ಪಾಯಿಂಟ್ ಎಂಬುದು ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರ ಭಾಗವಾಗಿದೆ. ಇಲ್ಲಿಂದ, ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಆದಿತ್ಯ ಎಲ್1 ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಆದಿತ್ಯ ಎಲ್1 ಅಧ್ಯಯನ ನಡೆಸಲಿದೆ. ಆದಿತ್ಯ ಎಲ್1 ನಾಲ್ಕು ಪೆಲೋಡ್‍ಗಳನ್ನು ಹೊಂದಿದ್ದು, ಅಲ್ಲಿಂದ ನೇರವಾಗಿ ಇಸ್ರೋಗೆ ಮಾಹಿತಿ ರವಾನಿಸಲಿದೆ.

ಚಂದ್ರಯಾನ 3 ಯಶಸ್ವಿಯಾದ ಬಳಿಕ ಇದು ಇಸ್ರೋದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇದರ ಬೆನ್ನಲ್ಲೇ ಹೊಸವರ್ಷದ ಮೊದಲ ದಿನವೇ ಕಪ್ಪು ಕುಳಿಗಳ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್ ಉಪಗ್ರಹದ ಉಡಾವಣೆಯನ್ನು ಇಸ್ರೋ ಯಶಸ್ವಿಯಾಗಿ ಮಾಡಿತ್ತು.

Vishwa News 24

Recent Posts

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

51 minutes ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

1 hour ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 hours ago

ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! vishwanews24

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…

2 hours ago

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ – vishwanews24

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ ಕೊಪ್ಪಳ: ಗೂಡ್ಸ್‌ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…

3 hours ago