Featured

ಕಾಪು :ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್ಡಿಪಿಐ ಪ್ರತಿಭಟನೆ – vishwanews24

ಕಾಪು :ವಖ್ಫ್ ಆಸ್ತಿಗೆ ಕೈ ಹಾಕದಿರಿ,ಬೆಂಕಿಯಲ್ಲಿ ಕೈ ಸುಟ್ಟು ಕೊಳ್ಳುವಿರಿ”  ಘೋಷಣೆ ಕೂಗುವ ಮೂಲಕ ಆಕ್ರೋಶ ..

ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ವರ್ಗದ ಜನರನ್ನು ಹತ್ತಿಕ್ಕಲು ಮುಂದಾಗಿದೆ : SDPI ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿ

ವಕ್ಫ್ ಇದು ಅಲ್ಲಾಹನ ಆಸ್ತಿ ಅಲ್ಲಾಹನ ಆಸ್ತಿಯಾಗಿ ಉಳಿಯಲಿದೆ : SDPI ಉಪಾಧ್ಯಕ್ಷ ಹನೀಫ್ ಮೂಳೂರು

ವಕ್ಫ್ ಆಸ್ತಿಯ ಉಳಿವಿಗಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧ :ದಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್

ಕಾಪು: ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಎಸ್ಡಿಪಿಐ ಕಾಪು ಕ್ಷೇತ್ರ ಸಮಿತಿಯ ವತಿಯಿಂದ ಕಾಪು ಪೇಟೆಯಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಸಭೆಯಲ್ಲಿ ಎಸ್.ಡಿ.ಪಿ.ಐ. ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿ ಪ್ರಸ್ತಾವಿಕ ಮಾತಾನಾಡಿ ಮುಸ್ಲಿಂ ಸಮುದಾಯವನ್ನು ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಕಡೆಗಣಿಸಿರುವ ಕೇಂದ್ರ ಸರ್ಕಾರ ಹಂತ ಹಂತವಾಗಿ ಇಂತಹ ಕಾನೂನು ಕಟ್ಟಳೆಗಳ ಮೂಲಕ ಕೆಳವರ್ಗದ ಮತ್ತು ಅಲ್ಪಸಂಖ್ಯಾತ ವರ್ಗದ ಜನರನ್ನು ಹತ್ತಿಕ್ಕಲು ಮುಂದಾಗಿದೆ” ಎಂದು ಆರೋಪಿಸಿದರು.

ಪ್ರತಿಭಟನಾಕರನ್ನು ಉದ್ದೇಶಿ ಮಾತಾನಾಡಿದ ಎಸ್.ಡಿ.ಪಿ.ಐ. ಕಾಪು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹನೀಫ್ ಮೂಳೂರು ವಕ್ಫ್ ಇದು ಅಲ್ಲಾಹನ ಆಸ್ತಿ ಅಲ್ಲಾಹನ ಆಸ್ತಿಯಾಗಿ ಉಳಿಯಲಿದೆ. ವಕ್ಫ್ ಆಸ್ತಿ ಕಬಳಿಸುವ ನಡೆ ಮುಸ್ಲಿಂ ದ್ವೇಷದ ಮುಂದುವರಿದ ಭಾಗವಾಗಿದೆ. ನಾವು ಭಾರತೀಯರು ನಿಮ್ಮ ದ್ವೇಷದ ರಾಜಕೀಯಕ್ಕೆ ಮೂರ್ಖರಾಗದೆ, ನಿಮ್ಮನ್ನು ಬುಡ ಸಮೇತ ಕಿತ್ತು ಹಾಕುವುದೇ ನಮ್ಮ ಧ್ಯೇಯ ಎಂದು ಹೇಳಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿ ಮಾತಾನಾಡಿದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರೈತರು, ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಪ್ರಯತ್ನ ಸಾಗಿಸುತ್ತಲೇ ಇದೆ. ಇದೀಗ ಮುಸ್ಲಿಮರನ್ನು ಅಭಿವೃದ್ಧಿಪಡಿಸುವ ನೆಪವೊಡ್ಡಿ ವಕ್ಫ್ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ಇದು ಸಂಘಪರಿವಾರದ ಹಿಡೆನ್ ಅಜೆಂಡಾ ಆಗಿದೆ. ಮುಸ್ಲಿಮರ ಸಬಲೀಕರಣಕ್ಕೆ ಮೀಸಲಿಟ್ಟಿರುವ ವಕ್ಫ್ ಸೊತ್ತನ್ನು ಕಬಳಿಸಲು ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ. ವಕ್ಫ್ ಆಸ್ತಿಯ ಉಳಿವಿಗಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ, “ವಖ್ಫ್ ಆಸ್ತಿಗೆ ಕೈ ಹಾಕದಿರಿ,ಬೆಂಕಿಯಲ್ಲಿ ಕೈ ಸುಟ್ಟು ಕೊಳ್ಳುವಿರಿ” ಎನ್ನುವ ಘೋಷಣೆಗಳನ್ನು ಕೂಗುವ ಮೂಲಕ ವಕ್ಫ್ ಬೋರ್ಡ್ ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನವಾಝ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ. ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಾಧಿಕ್ ಕೆ.ಪಿ, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಕಂಚಿನಡ್ಕ್, ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಂ ಆರ್ಶ್, ರಝಾಕ್ ವೈ.ಎಸ್. ಮತ್ತಿತರರು ಉಪಸ್ಥಿತರಿದ್ದರು.

 

Vishwa News 24

Recent Posts

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

7 minutes ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

37 minutes ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

47 minutes ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

1 hour ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

1 hour ago

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ- vishwanews24

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶಬರಿಮಲೆ  ಯಾತ್ರೆ ಕೈಗೊಂಡಿದ್ದಾರೆ.…

2 hours ago