ಮಂಗಳೂರು: ಕಲ್ಜಿಗ ಸಿನೆಮಾದಲ್ಲಿ ದೈವಕ್ಕೆ ಅಪಚಾರ ಮಾಡಲಾಗಿದೆ ಎಂಬ ಅಪಪ್ರಚಾರದ ಬಗ್ಗೆ ಸಿನೆಮಾ ತಂಡ ಸ್ಪಷ್ಟನೆ ನೀಡಿದೆ. ಸಿನೆಮಾ ನೋಡದ ಜನರು ಹಾಗೂ ಒಂದು ವರ್ಗದ ಜನರು ಈ ರೀತಿಯಾಗಿ ಅಪಪ್ರಚಾರ ಮಾಡ್ತಾ ಇದ್ದಾರೆ. ಆದ್ರೆ ಸಿನೆಮಾ ವೀಕ್ಷಿಸಿದ ಪ್ರೇಕ್ಷಕರು ಸಿನೆಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ ಎಂದು ವಿವರಿಸಿದೆ. ಕಲ್ಜಿಗ ಸಿನೆಮಾದಲ್ಲಿ ದೈವಕ್ಕೆ ಅಪಚಾರ ಆಗಿದೆ ಎಂದು ಆರೋಪ ಮಾಡುವವರು ಮೊದಲು ಸಿನೆಮಾ ನೋಡಿ ಆಮೇಲೆ ಮಾತನಾಡಿ ಎಂದು ಹೇಳಿದ್ದಾರೆ.
ಕಲ್ಜಿಗ ಸಿನೆಮಾ ನಿರ್ದೇಶಕ ಸುಮನ್ ಸುವರ್ಣ ಅವರು ಮಾತನಾಡಿ ಸಿನೆಮಾದಿಂದ ದೈವದ ಮೇಲಿನ ಭಯ ಭಕ್ತಿ ಹೆಚ್ಚಾಗಿದೆ ಅಂತ ಸಿನೆಮಾ ವೀಕ್ಷಿಸಿದವರು ಹೇಳಿದ್ದಾರೆ. ನಮಗೆ ಪ್ರೇಕ್ಷಕರ ಅಭಿಪ್ರಾಯ ಮುಖ್ಯವಾಗಿದ್ದು, ಉತ್ತಮ ಸಿನೆಮಾ ಮಾಡಬೇಕು ಅನ್ನೋ ಹಂಬಲ ನೆರವೇರಿದೆ ಎಂದು ಹೇಳಿದ್ದಾರೆ.
ಚಿತ್ರದ ನಿರ್ಮಾಪಕ ಶರತ್ ಕುಮಾರ್ ಎ.ಕೆ. ಮಾತನಾಡಿ, ಸಿನೆಮಾದಲ್ಲಿ ಕೊರಗಜ್ಜನ ದೃಶ್ಯ ತೆಗೆಯುವಂತೆ ದೈವಾರಾಧನಾ ರಕ್ಷಣಾ ಸಮಿತಿ ಮನವಿ ಮಾಡಿದೆ. ಸಿನೆಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಅದೊಂದು ದೃಶ್ಯ ಬೇಡ ಎಂದಷ್ಟೇ ಹೇಳಿದ್ದಾರೆ. ಆದ್ರೆ ಮೂರು ದಿನದಲ್ಲಿ 15 ಸಾವಿರ ಜನ ಸಿನೆಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೆಲ್ಲರೂ ಸಿನೆಮಾ ಮೆಚ್ಚಿಕೊಂಡಿದ್ದು, ವಿರೋಧಿಸುವವರು ಕೇವಲ ಒಂದು ಸೀನ್ ಮಾತ್ರ ವಿರೋಧಿಸ್ತಾ ಇದ್ದಾರೆ. ಸಿನೆಮಾ ನೋಡದೆ ವಿರೋಧ ಮಾಡುವವರಿಗೆ ಒಂದು ಶೋ ವ್ಯವಸ್ಥೆ ಮಾಡುತ್ತೇವೆ ಬಳಿಕ ಅವರು ಅಭಿಪ್ರಾಯ ತಿಳಿಸಲಿ ಎಂದು ಹೇಳಿದ್ದಾರೆ.
ನಾಯಕ ನಟ ಅರ್ಜುನ್ ಕಾಪಿಕಾಡ್ ಸೇರಿದಂತೆ ಸಿನೆಮಾ ತಂಡದ ಎಲ್ಲರೂ ಸಿನೆಮಾದಲ್ಲಿ ದೈವದ ದೃಶ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಎಲ್ಲೂ ದೈವಕ್ಕೆ ಅಪಚಾರ ಸಿನೆಮಾದಲ್ಲಿ ಆಗಿಲ್ಲದೇ ಇದ್ರೂ ವಿನಾ ಕಾರಣ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…