ಉಡುಪಿ

BIG BREAKING NEWS : ಪಾದೂರು ಗ್ರಾಮದ ISPRL 2ನೇ ಹಂತದ ಯೋಜನೆಯ KIADB ರವರ JMC ಸರ್ವೇಗೆ ಸ್ಥಳೀಯರಿಂದ ತಡೆ:-VISHWANEWS24

ಪಾದೂರು ಗ್ರಾಮದ ISPRL 2ನೇ ಹಂತದ ಯೋಜನೆಯ KIADB ರವರ JMC ಸರ್ವೇಗೆ ಸ್ಥಳೀಯರಿಂದ ತಡೆ:vishwanews24

ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದ ISPRL ಯೋಜನೆಯ 2 ನೇ ಹಂತದ
ಯೋಜನೆಯ 210 ಎಕ್ರೆ ಭೂಸ್ವಾಧೀನ ಪ್ರಕ್ರಿಯೆ ಹಲವು ತಿಂಗಳ ಹಿಂದೆ ಆರಂಭಗೊಂಡಿದ್ದು, ಈ ಬಗ್ಗೆ ಭೂಸಂತ್ರಸ್ತರು
ಪಾದೂರು ಗ್ರಾಮದ ಭೂಮಿಯ ಮೌಲ್ಯ ಕಡಿಮೆ ಇರುವುದರಿಂದ ಪಕ್ಕದ ಗ್ರಾಮದ ಭೂಮಿಯ ಮೌಲ್ಯವನ್ನು
ಪರಿಗಣಿಸಿ JMC ಸರ್ವೇಗಿಂತ ಮೊದಲು ಜಾಗದ ಮೌಲ್ಯವನ್ನು ನಿಗದಿಪಡಿಸಿದ ನಂತರ JMC ಸರ್ವೇ
ನಡೆಸಬೇಕೆಂದು ಆಗ್ರಹಿಸುತ್ತಿದ್ದು, ಈ ಬಗ್ಗೆ ಈಗಾಗಲೇ ಶಾಸಕರಾದ ಮಾನ್ಯ ಲಾಲಾಜಿ ಆರ್ ಮೆಂಡನ್, ಕೇಂದ್ರ
ಸಚಿವರಾದ ಮಾನ್ಯ ಶೋಭಾ ಕರಂದ್ಲಾಜೆ , ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ರೀಮತಿ ಶ್ಯಾಮಲ
ಕುಂದರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಿಲ್ಪಾ ಜಿ ಸುವರ್ಣ, ತಾಲೂಕು ಪಂಚಾಯತ್ ಮಾಜಿ
ಅಧ್ಯಕ್ಷರಾದ ಶಶಿಪ್ರಭಾ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಜನಜಾಗೃತಿ ಮತ್ತು ಜನಹಿತ ಸಮಿತಿ
ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ಮತ್ತು ಮನವಿಗಳನ್ನು ನೀಡಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ
ವಿಶೇಷ ಸಭೆ ನಡೆಸುವ ಬಗ್ಗೆ ಭರವಸೆ ನೀಡಿರುತ್ತಾರೆ. ಆದರೆ ಇವತ್ತು KIADB ಅಧಿಕಾರಿಗಳು ಏಕಾಏಕಿ ಗ್ರಾಮ
ಪಂಚಾಯತ್ ಗೂ ಹಾಗೂ ಪೋಲಿಸ್ ಠಾಣೆಗೂ ಯಾವುದೇ ಮಾಹಿತಿಯನ್ನು ನೀಡದೆ ಸರ್ವೇ ಕಾರ್ಯ ಆರಂಭಿಸಿದ್ದನ್ನು
ಕಂಡ ಸಿಟ್ಟಾದ ಗ್ರಾಮಸ್ಥರು ಸರ್ವೆ ಕಾರ್ಯಕ್ಕೆ ತಡೆಯೊಡ್ಡಿ KIADB ಅಧಿಕಾರಿಗಳನ್ನು ವಾಪಾಸು ಕಳಿಸಿರುವ ಘಟನೆ
ನಡೆದಿದೆ. ಈ ಸಂದರ್ಭದಲ್ಲಿ ಮಜೂರು ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀ ಮಧುಸೂಧನ್ ಸಾಲ್ಯಾನ್ , ಮಜೂರು
ಗ್ರಾ.ಪಂ ಸದಸ್ಯರಾದ ಶ್ರೀ ಸಂದೀಪ್ ರಾವ್ , ಶ್ರೀ ಪ್ರಸಾದ್ ಶೆಟ್ಟಿ ವಳದೂರು, ಜನಹಿತ
ಸಮಿತಿ ಅಧ್ಯಕ್ಷರಾದ ಶ್ರೀ ಸುರೇಂದ್ರ ಜೈನ್ , ಸದಸ್ಯರಾದ ಮೇವಿಸ್ ಕೋರ್ಡ , ಮೇಬುಲ್ ಕೋರ್ಡ, ಪ್ರಶಾಂತ್
ರಾವ್, ರಾಘವೇಂದ್ರ ಆಚಾರ್ಯ , ರಿಚ್ಚರ್ಡ್ ಕೋರ್ಡ ಮುಂತಾದ ಸ್ಥಳೀಯರು ಹಾಗೂ ಭೂ ಸಂತ್ರಸ್ತರು
ಉಪಸ್ಥಿತರಿದ್ದರು.

 

Vishwa News 24

Recent Posts

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ -vishwanews24

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…

11 hours ago

ಕಾಪು : ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ -vishwanews24

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…

11 hours ago

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  -vishwanews24

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…

12 hours ago

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ -vishwanews24

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…

14 hours ago

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ -vishwanews24

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…

14 hours ago

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ -vishwanews24

ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್‌ ಶೆಟ್ಟಿ ಆಗ್ರಹ ಮಂಗಳೂರು: ಸ್ಫೋಟದ ನಿಖರ ಕಾರಣ…

14 hours ago