Featured

BJP Ticket : ನಾನು ಬೆಂಗಳೂರಿನಲ್ಲಿ ಕೂತು ರಾಜಕಾರಣ ಮಾಡಿಲ್ಲ .. ನನಗೆ ಪಕ್ಷ ಮತ್ತು ನಾಯಕರ ಮೇಲೆ ವಿಶ್ವಾಸ ಇದೆ : ರಘುಪತಿ ಭಟ್ – Vishwanews24

ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್‌ ಫೈಟ್‌

ನಾನು ಬೆಂಗಳೂರಿನಲ್ಲಿ ಕೂತು ರಾಜಕಾರಣ ಮಾಡಿಲ್ಲ ..

ನನಗೆ ಪಕ್ಷ ಮತ್ತು ನಾಯಕರ ಮೇಲೆ ವಿಶ್ವಾಸ ಇದೆ

ಯಾವತ್ತೂ ಚುನಾವಣೆಯಲ್ಲಿ ನಿಂತು ಸೋತ ಅಭ್ಯರ್ಥಿ ಅಲ್ಲ..

ಮೂರು ಬಾರಿ ಉಡುಪಿಯಲ್ಲಿ ಶಾಸಕನಾಗಿ ಆಯ್ಕೆ..

ಪಕ್ಷ ಅವಕಾಶ ಕೊಟ್ಟರೆ  ಉಡುಪಿ ವಿಧಾನಸಭಾ ಕ್ಷೇತ್ರದಿಂದಲೇ ಚುನಾವಣೆ

ಉಡುಪಿ ಶಾಸಕ ರಘುಪತಿ ಭಟ್

ಉಡುಪಿ: ನಾನು ಬೆಂಗಳೂರಿನಲ್ಲಿ ಕೂತು ರಾಜಕಾರಣ ಮಾಡಿಲ್ಲ ನನ್ನ ನಾಯಕತ್ವದಲ್ಲೇ ಸ್ಥಳೀಯ ಚುನಾವಣೆ ಗೆದ್ದಿದ್ದೇವೆ 19ರ ಪೈಕಿ 15 ಪಂಚಾಯತಿಗಳಲ್ಲಿ ಬಿಜೆಪಿ ಆಡಳಿತ ಬಂದಿದೆ ಚುನಾವಣೆ ಷಣೆಯಾಗುತ್ತಿದ್ದಂತೆ ಯಾರಿಗೆ ಈ ಬಾರಿ ಹೈಕಮಾಂಡ್ ಟಿಕೇಟ್ ನೀಡುತ್ತದೆ ಎನ್ನುವುದು ಸ್ಪಷ್ಟವಾಗುತ್ತೆ. ನನಗೆ ಪಕ್ಷ ಮತ್ತು ನಾಯಕರ ಮೇಲೆ ವಿಶ್ವಾಸ ಇದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಅವರು ಶುಕ್ರವಾರ ಮಾಧ್ಯಮಗಳಲ್ಲಿ ಉಡುಪಿಯಲ್ಲಿ ಬಿಜೆಪಿಯಿಂದ ಹೊಸ ಅಭ್ಯರ್ಥಿಯನ್ನು ಕಣಕ್ಕೀಳಿಸಲಾಗುತ್ತದೆ ಎನ್ನುವು ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿ ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ 226 ಬೂತ್ ಇದೆ ಮತ್ತು ನಗರ ಗ್ರಾಮಾಂತರ ಸಮಿತಿಯ ಪದಾಧಿಕಾರಿಗಳು ಇದ್ದಾರೆ. ನಮ್ಮ ಪಕ್ಷದಲ್ಲಿ ಇನ್ ಫ್ಲುಯೆನ್ಸ್ ನಿಂದ ಸೀಟ್ ಆಗೋದಿಲ್ಲ ಬದಲಾಗಿ ಎಲ್ಲಾ ಬೂತ್ ಗಳ ಅಭಿಪ್ರಾಯ ಪಡೆದು ಸಮಿತಿಯ ಅಭಿಪ್ರಾಯ ಪಡೆದು ಸೀಟ್ ಘೋಷಿಸುತ್ತಾರೆ ಎಂದರು

ನಾನು ಮೂರು ಬಾರಿ ಉಡುಪಿಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದು ಯಾವತ್ತೂ ಚುನಾವಣೆಯಲ್ಲಿ ನಿಂತು ಸೋತ ಅಭ್ಯರ್ಥಿ ಅಲ್ಲ. ಕೇವಲ 2013ರಲ್ಲಿ ನನ್ನ ವಿರುದ್ಧ ಷಡ್ಯಂತರ ಮಾಡಿದ್ದರು ಆದರೂ ಪಕ್ಷ ನನಗೆ ಚುನಾವಣೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು ನಾನೇ ಪಕ್ಷಕ್ಕೆ ನನ್ನಿಂದ ಮುಜುಗರ ಆಗಬಾರದು ಎನ್ನುವ ಕಾರಣಕ್ಕಾಗಿ ಕೊಟ್ಟ ಟಿಕೆಟ್ನಿಂದ ಹಿಂದಕ್ಕೆ ಸರಿದು ಪಕ್ಷದ ಅಭ್ಯರ್ಥಿಗಾಗಿ ರಾತ್ರಿ ಹಗಲು ಕೆಲಸ ಮಾಡಿದ್ದೆ. ನಾನು ಶಾಸಕನಾದ ಮೇಲೆ ಉಡುಪಿ ನಗರಸಭೆಯಲ್ಲಿ 35 ರಲ್ಲಿ 31 ಸ್ಥಾನ ಗೆದ್ದಿದ್ದೇವೆ. ನಾನು 94 ರಿಂದ ಸ್ಥಾನಿಯ ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ನಾನು ಆಕಸ್ಮಿಕವಾಗಿ ರಾಜಕೀಯ ಬಂದವನಲ್ಲ ಪಕ್ಷದ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಬಂದಿದ್ದೇನೆ. ನನಗೆ ಟಿಕೆಟ್ ಆಗುತ್ತೆ ಎಂದು ಹೇಳಿಕೊಂಡು ತಿರುಗುವಷ್ಟು ಮೂರ್ಖನು ನಾನಲ್ಲ. ಟಿಕೇಟ್ ಹಂಚಿಕೆ ಕುರಿತು ಪಕ್ಷದ ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ತೀರ್ಮಾನ ಆಗುತ್ತದೆ ಎಂದರು.

ಲೋಕಸಭೆಗೆ ನಾನು ಹೋಗೋದೇ ಇಲ್ಲ, ಅಷ್ಟು ಶಕ್ತಿಯೂ ನನ್ನಲಿಲ್ಲ ಆದರೆ ವಿಧಾನಸಭೆಗೆ ಕಷ್ಟದಲ್ಲಿ ಹೋಗಿ ನಾನು ಗೆಲ್ತಾ ಇದ್ದೇನೆ. ಪಕ್ಷ ಅವಕಾಶ ಕೊಟ್ಟರೆ ನಾನು ಉಡುಪಿ ವಿಧಾನಸಭಾ ಕ್ಷೇತ್ರದಿಂದಲೇ ನಿಲ್ಲುತ್ತೇನೆ ಎಂದರು.

ಪಕ್ಷದಲ್ಲಿ ಹೊಸ ಆಕಾಂಕ್ಷಿಗಳ ಹುಟ್ಟಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಪಕ್ಷ ಬೆಳೆದಾಗ ಆಕಾಂಕ್ಷಿಗಳು ಹೆಚ್ಚಾಗುವುದು ಸ್ವಾಭಾವಿಕ. 2004ರಲ್ಲಿ ಯಾರು ಟಿಕೆಟ್ ಬೇಡ ಹೇಳುತ್ತಿದ್ದರು ಆದರೆ ಈಗ ನಾವು ಪರಿಶ್ರಮ ಪಟ್ಟು ಕಾರ್ಯಕರ್ತರ ಶ್ರಮದಿಂದ ಪಕ್ಷ ಬೆಳೆದಿದೆ. ಒಂದು ಕಾಲದಲ್ಲಿ ತಂತಿ ಕಂಬ ನಿಂತರು ಕಾಂಗ್ರೆಸ್ ನಲ್ಲಿ ಗೆಲ್ಲುತ್ತದೆ ಎಂಬ ಮಾತಿತ್ತು ಅದೇ ರೀತಿ ನಮ್ಮ ಪಕ್ಷ ಕೂಡ ಬೆಳೆದಿದೆ ಹಾಗಾಗಿ ಈಗ ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವುದು ತಪ್ಪಲ್ಲ. ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ ..ಕೆಲಸ ಮಾಡುವವರಿಗೆ ಯಾವತ್ತೂ ತೊಂದರೆ ಮಾಡಲ್ಲ. ಯಾವುದೇ ಕೆಲಸ ಮಾಡದೆ ಬೆಂಗಳೂರಿನಲ್ಲಿ ಕೂತು ರಾಜಕಾರಣ ಮಾಡಿದವರಿಗೆ ಸಮಸ್ಯೆ ಆಗಬಹುದು. ಅಪೇಕ್ಷಿತರಲ್ಲಿ ಕೆಲವರು ಅರ್ಹರು ಇದ್ದಾರೆ, ಏನು ಮಾಡದವರು ಆಕಾಂಕ್ಷೆ ವ್ಯಕ್ತಪಡಿಸುತ್ತಾರೆ. ನಮ್ಮ ಪಕ್ಷದಲ್ಲಿ ವ್ಯವಸ್ಥೆ ಸರಿಯಾಗಿದೆ, ಆದರೆ ಕೆಲವರ ಬೇಡಿಕೆ ನೋಡಿ ನನಗೂ ಆಶ್ಚರ್ಯ ಆಗುತ್ತದೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಚಕ್ರತೀರ್ಥರ ಹೆಸರು ಕೇಳಿ ಬರುತ್ತಿದೆ ಆದರೆ ಅವರಿಗೆ ಈ ವಿಚಾರ ಗೊತ್ತಿದೆಯೋ ಇಲ್ಲವೋ ಒಟ್ಟಾರೆ ಕೆಲವೊಮ್ಮೆ ಜನರು ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ ಎಂದರು.

ತನ್ನ ಶಾಸಕತ್ವದ ಅವಧಿಯಲ್ಲಿ ಹಿಜಾಬ್ ವಿಚಾರ ಪ್ರಸ್ತಾಪ ಆಗಿದ್ದು ಈ ವಿಚಾರವನ್ನು ನಿಯಂತ್ರಿಸಿದ ವಿಚಾರದಲ್ಲಿ ನನಗೆ ಸಮಾಧಾನ ಇದೆ. ನನ್ನ ಕ್ಷೇತ್ರದ ಶಾಲೆಯ ಪ್ರಾಂಶುಪಾಲರ ನಿಲುವು ಇಂದು ವಿಶ್ವದ ಕಣ್ಣು ತೆರೆಸಿದೆ. ಈಗ ಹಿಜಾಬ್ ತೆಗೆಯಬೇಕೆಂದು ಮುಸ್ಲಿಂ ರಾಷ್ಟ್ರಗಳಲ್ಲೂ ಹೋರಾಟ ಆರಂಭವಾಗಿದೆ ಇದು ನನಗೆ ತುಂಬಾ ಸಂತೋಷದ ವಿಷಯ. ಇದೇ ವಿಚಾರದಲ್ಲಿ ಇಂದು ವಿಶ್ವಾದ್ಯಂತ ಪ್ರತಿಭಟನೆ ಗೋಲಿಬಾರ್ ಗಳು ನಡೆಯುತ್ತಿವೆ. ಮುಸ್ಲಿಂ ಮಹಿಳೆಯರು ಇಂದು ಜಾಗೃತರಾಗಿದ್ದಾರೆ ಹೈಕೋರ್ಟ್ ನಲ್ಲಿ ನಾವು ಗೆದ್ದಿದ್ದೇವೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇದೆ. ಹಿಜಾಬ್ ವಿಚಾರ ಒಂದು ನ್ಯಾಯಯುತವಾದ ಬೇಡಿಕೆ. ಹಿಜಾಬ್ ಬ್ಯಾನ್ ಮಾಡಿ ಎಂದು ನಾವು ಎಲ್ಲೂ ಹೇಳಿಲ್ಲ ತರಗತಿಯೊಳಗೆ ಹಿಜಾಬ್ ಗೆ ಅವಕಾಶವಿಲ್ಲ ಎಂದಷ್ಟೇ ಹೇಳಿದ್ದೆವು. ಮುಸ್ಲಿಂ ಸಮುದಾಯ ಕೂಡ ಈ ವಿಚಾರವನ್ನು ಒಪ್ಪಿದ್ದಾರೆ. ಇರಾನ್ ನಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ನಾನು ಹಿಜಾಬ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ನನ್ನ ಕ್ಷೇತ್ರದ ಮುಸ್ಲಿಮರು ಬೆಂಬಲಿಸಿದ್ದರು ನಿಮ್ಮ ಅಭಿಪ್ರಾಯ ಸರಿಯಾಗಿದೆ, ನೀವು ಧರ್ಮದ ಬಗ್ಗೆ ಮಾತನಾಡಿಲ್ಲ ಎಂದಿದ್ದರು. ತರಗತಿಯೊಳಗೆ ಹೀಜಾಬ್ ತೆಗೆಯುವುದು ಸರಿಯಾಗಿದೆ ಎಂದು ಸಹಮತ ವ್ಯಕ್ತಪಡಿಸಿದ್ದರು ಎಂದರು.

ಹಿಜಾಬ್ ನಾವು ಸೃಷ್ಟಿ ಮಾಡಿದ ಸಮಸ್ಯೆ ಅಲ್ಲ ಆದರೆ ಈ ಹಿಜಾಬ್ ವಿವಾದದಿಂದ ಸಮಾಜ ಜಾಗೃತವಾಗಿದೆ. ಇಂದು ಹಿಂದೂ ಸಮಾಜ ಮುಸ್ಲಿಂ ಸಮಾಜ ಜಾಗೃತವಾಗಿದೆ. ಮುಸ್ಲಿಂ ಮಹಿಳೆಯರಿಗೂ ಜಾಗೃತಿಯಾಗಿದೆ. ಹಿಜಾಬ್ ಹಾಕುತ್ತಿದ್ದ ಕಾಲೇಜುಗಳಲ್ಲೂ ಈಗ ತೆಗೆದು ಶಿಕ್ಷಣ ನಡೆಯುತ್ತಿದೆ. ಇದು ಕೇವಲ ಕೆಲ ಮೂಲಭೂತವಾದಿಗಳ ಸಮಸ್ಯೆ ಅಷ್ಟೇ ಎಂದರು.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

19 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

19 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

20 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

20 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

21 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

21 hours ago