Featured

BREAKING _ ಮಂಗಳೂರು : ಪ್ರವೀಣ್ ಕುಮಾರ್‌ ನೆಟ್ಟಾರು ಹತ್ಯೆ : ಇಬ್ಬರು ಆರೋಪಿಗಳ ಬಂಧನ – Vishwanews24

BREAKING _ ಮಂಗಳೂರು : ಪ್ರವೀಣ್ ಕುಮಾರ್‌ ನೆಟ್ಟಾರು ಹತ್ಯೆ : ಇಬ್ಬರು ಆರೋಪಿಗಳ ಬಂಧನ

ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೇರಳದಲ್ಲಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಫೀಕ್ ಬೆಳ್ಳಾರೆ ಹಾಗೂ ಝಾಕಿರ್ ಸವಣೂರು ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿಯೂ ಪೋಲಿಸ್ ವಶದಲ್ಲಿದ್ದು ಆತನ ಬಂಧನ ಖಚಿತವಾಗಿಲ್ಲ.

ಸಿಸಿಟಿವಿ ಹೇಳಿದ ಸಾಕ್ಷ್ಯ

ಪ್ರವೀಣ್​ ಹತ್ಯೆಯ ಬಳಿಕ ಮಾಹಿತಿ ಕಲೆ ಹಾಕಿದ ಪೋಲಿಸರಿಗೆ 40 ನಿಮಿಷ ಕಾದು ರಕ್ತದೋಕುಳಿ ಹರಿಸಿರುವ ಕಿಲ್ಲರ್ಸ್ ಗಳ ಸಿಸಿಟಿವಿ ದೃಶ್ಯ ಸಿಕ್ಕಿತ್ತು. ಕೊಲೆಗೂ ಮೊದಲು ಅದೊಂದು ಜಾಗದಲ್ಲೇ ಹಂತಕರು ಟೆಂಟ್ ಹಾಕಿದ್ದು, ಸಿಸಿಟಿವಿಯಲ್ಲಿ ಹಂತಕರ ಹೆಜ್ಜೆಗುರುತು ಸೆರೆಯಾಗಿತ್ತು.

ಪ್ರವೀಣ್ ಕೊಲೆಗೂ ಮೊದಲು ಹಂತಕರು ಭಯಾನಕ ಸಂಚು ರೂಪಿಸಿದ್ದು, ಪ್ರವೀಣ್ ಚಿಕನ್ ಅಂಗಡಿಯಿಂದ 50 ಮೀ. ದೂರದಲ್ಲಿ 40 ನಿಮಿಷದವರೆಗೂ ಒಂದೇ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು. ರಾತ್ರಿ 8 ಗಂಟೆ 1 ನಿಮಿಷ 51 ಸೆಕೆಂಡ್ಗೆ ಎಂಟ್ರಿ ಕೊಟ್ಟಿದ್ದು, 8 ಗಂಟೆ 1 ನಿಮಿಷ 57 ಸೆಕೆಂಡ್ಗೆ 50 ಮೀ. ದೂರದಲ್ಲಿ ಸ್ಟಾಪ್ ಮಾಡಿದ್ದರು. 8 ಗಂಟೆ 33 ನಿಮಿಷಕ್ಕೆ ಚಿಕನ್ ಅಂಗಡಿ ಮುಂದೆ ಹೋಗಿ ಮತ್ತೆ ಮೊದಲಿದ್ದ ಅದೇ ಜಾಗದಲ್ಲಿ ಸ್ಟಾಪ್ ಆಗಿದ್ದರು.

8 ಗಂಟೆ 38 ನಿಮಿಷಕ್ಕೆ ಮತ್ತೆ ಅಂಗಡಿ ದಿಕ್ಕಿನತ್ತ ಹಂತಕರು ಸಾಗಿದ್ದು, 8.38 ರಿಂದ 8.40 ರ ಸಮಯದಲ್ಲಿ ಹತ್ಯೆ ನಡೆದಿರುವ ಸಾಧ್ಯತೆಯಿದ್ದು, 8 ಗಂಟೆ 40 ನಿಮಿಷಕ್ಕೆ ಅಂಗಡಿಯತ್ತ ಜನ ಓಡೋಡಿ ಬಂದಿದ್ದಾರೆ. ಈ ವೇಳೆ ಹಂತಕರು ಪರಾರಿಯಾಗಿದ್ದರು.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

9 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

9 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

10 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

10 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

10 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

1 day ago