ಮಂಗಳೂರು: ಸುರತ್ಕಲ್ ಟೋಲ್‍ಗೇಟ್ ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಟೋಲ್ ಗೇಟ್ ಕಿತ್ತೆಸೆಯಲು ಯತ್ನಿಸಿದ ಹಿನ್ನೆಲೆಯಲ್ಲಿ ಹೋರಾಟಗಾರರ ಮೇಲೆ ಎಫ್‍ಐಆರ್ ದಾಖಲಾಗಿದೆ.
ಹೀಗಾಗಿ ಟೋಲ್ ಸಂಗ್ರಹ ನಿಲ್ಲುವವರೆಗೂ ರಾತ್ರಿ- ಹಗಲು ಅನಿರ್ದಿಷ್ಟ ಧರಣಿಗೆ ನಿರ್ಧರಿಸಿದ್ದಾರೆ. ಅ.18 ರಂದು ಮಂಗಳೂರಿನ ಸುರತ್ಕಲ್ ಟೋಲ್‍ಗೇಟ್ ಬಳಿ ಭಾರೀ ಹೈಡ್ರಾಮಾವೇ ನಡೆದಿತ್ತು. ಸುರತ್ಕಲ್ ಟೋಲ್‍ಗೇಟ್ ಅಕ್ರಮ ಎಂದು ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಹೋರಾಟ ಉಗ್ರ ಸ್ವರೂಪ ಪಡೆದಿತ್ತು. ಪೊಲೀಸರು ಹಾಕಿದ್ದ ತಡೆಬೇಲಿ ಮುರಿದು ಟೋಲ್‍ಗೇಟ್‍ನತ್ತ ನುಗ್ಗಿದ್ದ ಹೋರಾಟಗಾರರು, ಹೈಡ್ರಾಮಾ ನಡೆಸಿದ್ದು, ಬಳಿಕ ಪೊಲೀಸರು ನೂರಾರು ಹೋರಾಟಗಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ರು. ಆದರೆ ಇದೀಗ ಟೋಲ್‍ಗೇಟ್‍ನ ಗುತ್ತಿಗೆದಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ನೀಡಿದ ದೂರಿನಂತೆ ಹೋರಾಟಗಾರರ ಮೇಲೆ ಎರಡು ಎಫ್‍ಐಆರ್ ದಾಖಲಾಗಿದೆ.
ಟೋಲ್‍ಗೇಟನ್ನು ನ.7ರೊಳಗಾಗಿ ಸ್ಥಗಿತಗೊಳಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಆದರೆ ಇಂತಹ ದಿನಾಂಕಗಳು ಕಳೆದ ಆರು ವರ್ಷದಿಂದ ಆಗಿರೋದ್ರಿಂದ ಇದರ ಬಗ್ಗೆ ನಂಬಿಕೆ ಇಲ್ಲ. ಹೀಗಾಗಿ ಹೋರಾಟ ಸಮಿತಿ ಸಭೆ ಸೇರಿ ಮುಂದಿನ ಹೋರಾಟದ ಭಾಗವಾಗಿ ಅಕ್ಟೋಬರ್ 28 ರಿಂದ ಟೋಲ್‍ಗೇಟ್ ಮುಂಭಾಗದಲ್ಲಿ ರಾತ್ರಿ ಹಗಲು ಅನಿರ್ದಿಷ್ಟ ಧರಣಿ ನಡೆಸಲು ನಿರ್ಧರಿಸಲಾಗಿದೆ.
ಮಲ್ಪೆ: ತನ್ನ ಸಾವಿಗೆ ನಾನೇ ಕಾರಣ ಎಂದು ಸೂಸೈಡ್ ನೋಟ್ ಬರೆದಿಟ್ಟು ವ್ಯಕ್ತಿ ನಾಪತ್ತೆ – Vishwanews24
ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…
ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…
ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…