ನವದೆಹಲಿ: ಚೀನಾ ಆ್ಯಪ್ ಗಳನ್ನು ನಿಷೇಧಿಸುವ ಪ್ರವೃತ್ತಿ ದೇಶದಲ್ಲಿ ಮತ್ತೆ ಮುಂದುವರೆದಿದ್ದು, ಈ ಬಾರಿ 54 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲು ಹೊಸ ಆದೇಶ ಹೊರಡಿಸಿದೆ.
ಈ ಹಿಂದೆ 2 ಬಾರಿ ಚೀನಾ ಆ್ಯಪ್ ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮೂರನೇ ಬಾರಿಗೆ 54 ಚೀನಾ ಮೂಲದ ಆ್ಯಪ್ ಗಳನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ.
ಭಾರತದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಚೀನಾದ 54 ಮೊಬೈಲ್ ಆ್ಯಪ್ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020ರಲ್ಲಿ ಚೀನಾದ 118 ಮೊಬೈಲ್ ಆ್ಯಪ್ಗಳ ಬಳಕೆಯನ್ನು ಭಾರತದಲ್ಲಿ ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 54 ಆ್ಯಪ್ಗಳನ್ನು ನಿಷೇಧಿಸಲಿದೆ. ಇದೀಗ ನಿಷೇಧಿಸಲ್ಪಟ್ಟ ಆ್ಯಪ್ಗಳಲ್ಲಿ, ಬ್ಯೂಟಿ ಕ್ಯಾಮರಾ, ಸ್ವೀಟ್ ಸೆಲ್ಫೀ ಎಚ್ಡಿ, ಬ್ಯೂಟಿ ಕ್ಯಾಮರಾ-ಸೆಲ್ಫಿ ಕ್ಯಾಮರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್ (Equalizer & Bass Booster), ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಆ್ಯಪ್ಲಾಕ್, ಡ್ಯುಯೆಲ್ ಸ್ಪೇಸ್ ಲೈಟ್, Tencent Xriver, Onmyoji Chess, Onmyoji Arena ಗಳು ಕೂಡ ಸೇರಿವೆ.
ಇದನ್ನೂ ಓದಿ :
ಈ ಮೇಲಿನ ಪ್ರಮುಖ ಆ್ಯಪ್ಗಳು ಸೇರಿ 54 ಚೀನಾದ ಮೊಬೈಲ್ ಅಪ್ಲಿಕೇಶನ್ಗಳನ್ನು ಭಾರತದಲ್ಲಿ ನಿರ್ಬಂಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ಗಳಿಗೆ ಸೂಚನೆ ನೀಡಿದೆ. ಇವು ಭಾರತೀಯರ ಮಾಹಿತಿ ರಕ್ಷಣೆ ಸರಿಯಾಗಿ ಮಾಡುತ್ತಿಲ್ಲ. ಈ ಮೂಲಕ ಭಾರತೀಯರ ಭದ್ರತೆಗೆ ಧಕ್ಕೆ ತರುತ್ತಿವೆ. ಹಾಗಾಗಿ ಕೂಡಲ ಈ ಎಲ್ಲ ಆ್ಯಪ್ಗಳನ್ನೂ ಭಾರತದಲ್ಲಿ ನಿಷೇಧಿಸಲಾಗುವುದು ಎಂದು ಕೇಂದ್ರ ಇಲಾಖೆ ಹೇಳಿದೆ.
2020ರಲ್ಲಿ ಪಬ್ ಜೀ, ಟಿಕ್ಟಾಕ್, ಶೇರ್ಇಟ್, ಹೀರೋಸ್ ವಾರ್, ಮೇಪೈ, ಏರ್ಬ್ರಷ್, ವಿ ಚಾಟ್, ಹೆಲೋ, ಲೈಕೀ, ಯುಸಿ ನ್ಯೂಸ್, ಸ್ನ್ಯಾಕ್ ವಿಡಿಯೋ, ಅಲಿ ಎಕ್ಸ್ಪ್ರೆಸ್, ಅಲಿ ಪೇ ಕ್ಯಾಷಿಯರ್ ಸೇರಿ ಒಟ್ಟು 118 ಆ್ಯಪ್ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿತ್ತು. 2020ರ ಜುಲೈನಿಂದ ಸೆಪ್ಟೆಂಬರ್ವರೆಗೆ ಹಂತಹಂತವಾಗಿ ಚೀನಾದ ಹಲವು ಮೊಬೈಲ್ ಅಪ್ಲಿಕೇಶನ್ಗಳನ್ನು ತೆಗೆದುಹಾಕಲಾಗಿದೆ. ಅದರಲ್ಲಿ ಪಬ್ ಜಿ ಮತ್ತು ಟಿಕ್ಟಾಕ್ ಆ್ಯಪ್ಗಳನ್ನು ನಿಷೇಧಿಸಿದಾಗ ಭಾರತದ ಬಳಕೆದಾರರಿಗೆ ಸ್ವಲ್ಪ ನಿರಾಸೆಯಾಯಿತಾದರೂ ಚಿನಾದ ಮೇಲಿನ ದ್ವೇಷದಿಂದಾಗಿ ಯಾರೂ ವಿರೋಧ ವ್ಯಕ್ತಪಡಿಸಿಲಿಲ್ಲ. ಆದರೆ ಭಾರತದಲ್ಲಿ ತಮ್ಮ ದೇಶದ ಆ್ಯಪ್ಗಳನ್ನು ಬ್ಯಾನ್ ಮಾಡಿದ್ದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ನಿಷೇಧದ ಮೂಲಕ ಭಾರತ ಹೂಡಿಕೆದಾರರ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿತ್ತು.
ಇದನ್ನೂ ಓದಿ :
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…