ಗೃಹ ಲಕ್ಷ್ಮೀ : ಇದನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಬ್ಯಾಂಕ್ ಅಕೌಂಟ್ಸ್, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಯಾರು ಮನೆಯ ಯಜಮಾನಿ ಎಂಬುದು ತೀರ್ಮಾನಿಸಬೇಕಾಗಿದೆ. ನಾವು ಹೇಳಿರುವಂತದ್ದು ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ ಎಂದಿದ್ದೆವು. ಆದ್ದರಿಂದ ಅಕೌಂಟ್ ಮಾಹಿತಿ, ಆಧಾರ್ ಕಾರ್ಡ್, ಅರ್ಜಿ ಸಲ್ಲಿಸಬೇಕು. ಜೂನ್ 15 ರಿಂದ ಜುಲೈ 15ರ ಒಳಗಾಗಿ ಮನೆ ಒಡತಿಯ ಮಾಹಿತಿ ನೀಡಬೇಕು. ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಇದು ಆದಮೇಲೆ ಜುಲೈ 15ರಿಂದ ಆಗಸ್ಟ್ 15ರ ಒಳಗಡೆ ಪ್ರೋಸಸ್ ಮಾಡಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಮನೆಯ ಯಜಮಾನಿ ಖಾತೆಗೆ 2000 ರೂ ಜಮಾ ಮಾಡುತ್ತೇವೆ ಎಂದರು.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ದಾರರ ಮನೆಯ ಒಡತಿಯ ಖಾತೆಗೆ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗುತ್ತದೆ. ಮನೆಯ ಯಜಮಾನಿ ಯಾರು ಎನ್ನುವ ಬಗ್ಗೆ ಕುಟುಂಬಸ್ಥರೇ ಮಾಹಿತಿಯನ್ನು ನೀಡಬೇಕು. ಆ ಮಾಹಿತಿ ಆಧಾರದ ಮೇಲೆ ಪ್ರತಿ ತಿಂಗಳು 2000 ರೂ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ಜೂನ್ ತಿಂಗಳಿನಿಂದಲೇ ಗೃಹ ಲಕ್ಷ್ಮೀ ಯೋಜನೆ ಹಣ ನೀಡಬೇಕು ಎಂಬುದಾಗಿ ತೀರ್ಮಾನಿಸಲಾಗಿತ್ತು. ಆದ್ರೇ ಕೆಲ ತಾಂತ್ರಿಕ ಮಾಹಿತಿಯ ಕಾರಣದಿಂದಾಗಿ ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಆಗಸ್ಟ್ 15ರಿಂದ ಅರ್ಜಿ ಸಲ್ಲಿಸಿದಂತ ಮಾಹಿತಿಯ ಆಧಾರದ ಮೇಲೆ ಹಣ ನೀಡಲಾಗುತ್ತದೆ. ಫೆನ್ಷನ್ ತೆಗೆದುಕೊಳ್ಳುತ್ತಿವವರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…