Featured

RSS ಗೆ ನಿರ್ಬಂಧ ವಿವಾದ : ಹೈಕೋರ್ಟ್ ಆದೇಶ ಹಿನ್ನೆಲೆ ಸರ್ಕಾರದಿಂದ ಮೇಲ್ಮನವಿ: ಪ್ರಿಯಾಂಕ್ ಖರ್ಗೆ – vishwanews24

ಆರ್‌ಎಸ್‌ಸ್‌ಗೆ ನಿರ್ಬಂಧ ವಿವಾದ : ಹೈಕೋರ್ಟ್ ಆದೇಶ ಹಿನ್ನೆಲೆ ಸರ್ಕಾರದಿಂದ ಮೇಲ್ಮನವಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸರ್ಕಾರಿ ಶಾಲಾ, ಕಾಲೇಜು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ ಹಾಕಿರುವ ಸರ್ಕಾರದ ನಡೆಗೆ ಹೈಕೋರ್ಟ್ ಅಂಕುಶ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾವು ಮೇಲ್ಮನವಿ ಹೋಗುತ್ತೇವೆ. ನಾವು ಖಾಸಗಿ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಮತಿ ಕೊಡುವುದಿಲ್ಲ ಎಂದು ಹೇಳಿಲ್ಲ. ಬದಲಾಗಿ, ಅನುಮತಿ ಪಡೆಯಿರಿ ಅಂತಿದ್ದೀವಿ ಎಂದು ಸ್ಪಷ್ಟಪಡಿಸಿದರು.

ಈವರೆಗೆ ಆರ್ ಎಸ್ ಎಸ್ ಏನೇನು ಬೈದಿದ್ದಾರೆ‌‌ ಗೊತ್ತಿದೆ. ಬಿಜೆಪಿ ಲೀಡರ್ ಗಳು ಏನೇನು ಬೈತಿದ್ದಾರೆ, ವೈಯಕ್ತಿಕ ವಿಚಾರಕ್ಕೆ ಏನೆಲ್ಲಾ ಹೇಳಿಕೆ ನೀಡಿದ್ದಾರೆ ಎಂಬುವುದನ್ನು ನೀವೇ ನೋಡಿದ್ದೀರಿ. ಇಷ್ಟೆಲ್ಲ ಆದಮೇಲೂ ಆರ್ ಎಸ್ ಎಸ್ ನವರು ಖಂಡಿಸಿದ್ದಾರಾ? ಎಂದು ಪ್ರಶ್ನಿಸಿದರು.

ಯಾವುದೇ ಖಾಸಗಿ ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಅನುಮತಿ ಕೇಳಲಿ, ಸೂಕ್ತ ಅನಿಸಿದರೆ ಸರ್ಕಾರ ಅನುಮತಿ ನೀಡುತ್ತದೆ. ಧಾರವಾಡ ಕೋರ್ಟ್ ನಲ್ಲಿ ಇರುವ ಬಗ್ಗೆ ಎ.ಜಿ ಯವರಿಗೆ ಮಾಹಿತಿ ಇರಲಿಲ್ಲ. ಸ್ಥಳೀಯ ಅಧಿಕಾರಿಗಳ ಲೋಪ ಇದೆ. ಎ.ಜಿಯವರಿಗೆ ಮಾಹಿತಿ ಇರಲಿಲ್ಲ ಅಂತ ಸಿಎಂಗೂ ನಮಗೂ ತಿಳಿಸಿದ್ದಾರೆ. ಇದು ಮಧ್ಯಂತರ ತಡೆಯಾಜ್ಞೆ ಅಷ್ಟೇ . ಆದರೆ ಬಿಜೆಪಿಯವರು ಈಗಾಗಲೇ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಅವರ ಸಂಭ್ರಮಾಚರಣೆ ಪ್ರಕಾರ ಹತ್ತು ಬಾರಿ ಪಥ ಸಂಚಲನ ಮಾಡಬೇಕಾಗಿತ್ತಲ್ವಾ? ನಾಲ್ಕೈದು ಬಾರಿ ಪಥ ಸಂಚಲನೆ ಮಾಡಬೇಕಾಗಿತ್ತಲ್ವಾ? ಇನ್ನೂ ಯಾಕೆ ಚಿತ್ತಾಪುರದಲ್ಲಿ ಪಥ ಸಂಚಲನ ಆಗಿಲ್ಲ? ನಿನ್ನೆ ನಡೆದ ಶಾಂತಿ ಸಭೆಯ ಎಲ್ಲ ಮಾಹಿತಿ ಆಡಿಯೋ ವೀಡಿಯೋ ರೆಕಾರ್ಡ್ ಆಗಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ನ್ಯಾಯಾಲಯ ನಿರ್ಧಾರ ಮಾಡಲಿ ಎಂದರು.

ಮೊದಲು ಬಿಜೆಪಿಯವರು ಕ್ಷಮೆ ಕೇಳಲಿ ನನಗೆ ವೈಯಕ್ತಿಕ ಟೀಕೆ ಬೆದರಿಕೆ ಹಾಕಿದ್ದಕ್ಕೆ. ಬಿಜೆಪಿಯವರು ಒಬ್ಬರಾದರೂ ಕ್ಷಮೆ ಕೇಳಿದ್ದಾರಾ? ಬಿಜೆಪಿ ವಿಪಕ್ಷ ನಾಯಕರು ನನಗೆ ನಾಯಿ ಅಂದುಬಿಟ್ಟು. ನಮ್ಮ ಕ್ಷೇತ್ರಕ್ಕೇ ಬರ್ತಾರೆ ನಾವು ಸನ್ಮಾನ ಮಾಡಬೇಕಾ? ಬೆಳೆ ಹಾನಿ ಆದಾಗ ಇವರು ಒಮ್ಮೆಯೂ ಬರಲಿಲ್ಲ? ಯಾಕೆ ಬಂದಿಲ್ಲ ಆರ್ ಎಸ್ ಎಸ್ ಪಥ ಸಂಚಲನಕ್ಕೆ? ಕಾನೂನನ್ನು ಅವರಿಗೆ ಬೇಕಾದಂತೆ ಅರ್ಥೈಸುವುದು ದಿನ ನಿತ್ಯದ ರೂಢಿ ಆಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಕಾನೂನು ಅನುಮತಿ ಪಡೆಯಬೇಕಾಗಿರುವುದು ಯಾರ ಕೆಲಸ? ಕಾನೂನು ಕಾಪಾಡಬೇಕಾಗಿರುವುದು ಸರ್ಕಾರದ ಕೆಲಸ? ನಾನು ಯಾವತ್ತೂ ಆರ್ ಎಸ್ ಎಸ್‌ ಬ್ಯಾನ್ ಮಾಡಿ ಅಂತ ಹೇಳಿಲ್ಲ. ಬೆಂಗಳೂರು ಆದೇಶವೇ ಇಡೀ ರಾಜ್ಯ ವ್ಯಾಪ್ತಿಯಲ್ಲಿ ಬಂದಿದೆ ಎಂದರು.

Vishwa News 24

Recent Posts

ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ – vishwanews24

ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ವಿದೇಶಿ ಕರೆನ್ಸಿ ಸಹಿತ 23.56 ಲಕ್ಷ ರೂ.ಮೌಲ್ಯದ ಸೊತ್ತು ವಶ ಉಡುಪಿ:…

5 hours ago

ನಿಮ್ಮ ಜೊತೆ ಸರಕಾರವಿದೆ ;ನಿಮ್ಮ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ , ಧೈರ್ಯವಾಗಿರಿ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಅಭಯ – vishwanews24

ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅಭಯ ಹೊಸದಿಲ್ಲಿ: "ಧೈರ್ಯವಾಗಿರಿ. ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ…

5 hours ago

ಕರ್ನಾಟಕದಲ್ಲಿ ಹೆಚ್ಚುತ್ತಿರುವ  H1N1 ಪ್ರಕರಣ : ಆತಂಕ ಬೇಡ ಎಂದ ಆರೋಗ್ಯ ಇಲಾಖೆ – vishwanews24

ಕರ್ನಾಟಕದಲ್ಲಿ ಹೆಚ್ಚುತ್ತಿರುವ  H1N1 ಪ್ರಕರಣ : ಆತಂಕ ಬೇಡ ಎಂದ ಆರೋಗ್ಯ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ H1N1 ಹಾಗೂ ಇನ್ಫ್ಲುಯೆನ್ಸ…

5 hours ago

ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ : ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ – vishwanews24

ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ : ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ಮೈಸೂರು: ಸಾತಗಳ್ಳಿ ಪ್ರದೇಶದಲ್ಲಿ…

5 hours ago

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ – vishwanews24

ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…

9 hours ago

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ – vishwanews24

ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್‌ ಕುಂಪಲ ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ…

9 hours ago