ಬೆಂಗಳೂರು: ಆರ್‌ಎಸ್‌ಎಸ್ ಸಂಘಟನೆ ಇಲ್ಲದೆ ಹೋಗಿದ್ದರೆ ಭಾರತ, ಪಾಕಿಸ್ತಾನ ಆಗುತಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇದನ್ನು ಸಹಿಸಲು ಆಗದೇ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಎಂದರೆ ದೇಶಭಕ್ತಿ ಸಂಸ್ಥೆ. ದೇಶದ ಪರ ಕೆಲಸ ಮಾಡುತ್ತಿದೆ. ಆರ್‌ಎಸ್‌ಎಸ್ ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತಿತ್ತು ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ತಾಲಿಬಾನ್ ಪದ ಬಳಕೆ ಮಾಡಿದ್ದ ಸಿದ್ದರಾಮಯ್ಯ ವಿರುದ್ಧವೂ ಚವ್ಹಾಣ್ ಆಕ್ರೋಶ ಹೊರ ಹಾಕಿದ್ದು, ಪಾಕಿಸ್ತಾನ, ತಾಲಿಬಾನ್ ಎಲ್ಲವೂ ಕಾಂಗ್ರೆಸ್ ಅವರೇ. ನಾವು ದೇಶಭಕ್ತರು. ಪ್ರಧಾನಿ ಮೋದಿ ನಾವೆಲ್ಲ ಒಂದು ಎನ್ನುತ್ತಿದ್ದಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲಿ. ಮಾಜಿ ಮುಖ್ಯಮಂತ್ರಿ ಆದವರು ಹೇಗೆ ಮಾತಾಡಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಆರ್‌ಎಸ್‌ಎಸ್ ಏನು ಎಂದು ಜನತೆಗೆ ಗೊತ್ತಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತೇನೆ. ಆರ್‍ಎಸ್‍ಎಸ್ ಇರೋದಕ್ಕೆ ದೇಶ ಇದೆ. ನಾವು ದೇಶ ಸೇವೆ ಮಾಡುತ್ತಿದ್ದೇವೆ ಎಂದು ಚಾಟಿ ಬೀಸಿದರು.
ಬೆಂಗಳೂರಿಗರೇ ಗಮನಿಸಿ: ನೂತನ ಸಿಎಂ ಆಗಿ ಡಿ.ಕೆ.ಶಿ ಪದಗ್ರಹಣದ ಹಿನ್ನೆಲೆ ನಾಳೆ ನಗರದ ಈ ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು ಬೆಂಗಳೂರು:…
BREAKING : ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ `ಕೆ.ಅಣ್ಣಾಮಲೈ’ ರಾಜೀನಾಮೆ ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು…
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರಕ್ಕೂ ಮುನ್ನ ಗಮನಿಸಿ: ಜೂನ್ 15 ರಿಂದ ಹೊಸ ವೇಳಾಪಟ್ಟಿ ಜಾರಿಗೆ ಮುಂಬೈ: ಮುಂಬರುವ ಮುಂಗಾರು…
ಯಾವುದೇ ಹುದ್ದೆಯ ಆಕಾಂಕ್ಷೆ ಹೊಂದಿಲ್ಲ ; ನನಗೆ ಖಾತೆ ಮುಖ್ಯವಲ್ಲ , ಕೆಲಸ ಮುಖ್ಯ : ಯುಟಿ ಖಾದರ್ ಮಂಗಳೂರು:…
ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಅಪರಾಧವೆಸಗುವುದು ಸುಲಭವಾಗಿದೆ .. ಬೆಂಗಳೂರು: ಕೈ-ಕಾಲು ಕತ್ತರಿಸುವಂತಹ ಶಿಕ್ಷೆ ವಿಧಿಸಿದರೆ ಮಾತ್ರ ಜನರು…
ವಿದ್ಯಾರ್ಥಿ ನಾಯಕನಿಂದ, ಸಿಎಂ ಗದ್ದುಗೆವರೆಗೆ ಡಿಕೆಶಿ ರೋಚಕ ಪಯಣ ಬೆಂಗಳೂರು: ರಾಜ್ಯದ ನೂತನ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು…