ಕಾಪು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ (ಕಾಪು ) ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ಸಭೆಯು ಕ್ಷೇತ್ರದ ನಿರ್ಗಮನ ಅಧ್ಯಕ್ಷರಾದ ಹನೀಫ್ ಮೂಳೂರು ರವರ ಅಧ್ಯಕ್ಷತೆಯಲ್ಲಿ ಉಚ್ಚಿಲದ ತವಕ್ಕಲ್ ಸಭಾಭವನದಲ್ಲಿ ನಡೆಯಿತು.
ಪ್ರತೀ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಆಂತರಿಕ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಎಸ್‌ಡಿಪಿಐ ಕಾಪು ಕ್ಷೇತ್ರದ ನೂತನ ಅಧ್ಯಕ್ಷರಾಗಿ ಸಾದಿಕ್ ಕೆ ಪಿ ಮಲ್ಲಾರ್ , ಉಪಾಧ್ಯಕ್ಷರಾಗಿ ಹನೀಫ್ ಮೂಳೂರು , ಕಾರ್ಯದರ್ಶಿಯಾಗಿ ನೂರ್ ನವಾಝ್ ಉಚ್ಚಿಲ , ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮಲ್ಲಾರ್ ಮತ್ತು ಕೋಶಾಧಿಕಾರಿಯಾಗಿ ಫಾರೂಕ್ ಉದ್ಯಾವರ ರವರು ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಹಮೀದ್ ಉಚ್ಚಿಲ, ಇಬ್ರಾಹಿಂ ಕಂಚಿನಡ್ಕ್, ಮಹಮ್ಮದ್ ಕಟಪಾಡಿ ಹಾಗೂ ತೌಫೀಕ್ ಬಗ್ಗತೋಟ ಆಯ್ಕೆಯಾದರು.
ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಎಸ್ಡಿಪಿಐ ಕಾಪು ಕ್ಷೇತ್ರದ ನಿರ್ಗಮನ ಅಧ್ಯಕ್ಷರಾದ ಹನೀಫ್ ಮೂಳೂರು ಧ್ವಜಾರೋಹಣದ ಮೂಲಕ ಸಭೆಗೆ ಚಾಲನೆ ನೀಡಿದರು. ನಂತರ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ರವರು ನಾಯಕತ್ವದ ಕುರಿತು ತರಬೇತಿ ನೀಡಿದರು .
ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವ ಮತ್ತು ಶಫೀಕ್ ಉಡುಪಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್ ತುಂಬೆ, ಜಿಲ್ಲಾ ಕಾರ್ಯದರ್ಶಿ ಮಜೀದ್ ಪೊಲ್ಯ, ಜಿಲ್ಲಾ ಸಮಿತಿ ಸದಸ್ಯರಾದ ರಝಕ್ ವೈ ಎಸ್ ಉಚ್ಚಿಲ, ಹಾಗೂ ಇಬ್ರಾಹಿಂ ಹರ್ಷ್, ಉಡುಪಿ ವಿಮ್ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ, ವಿಮ್ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷೆ ಫರ್ಝಾನ ಹಮೀದ್, ಸೇರಿದಂತೆ ಕ್ಷೇತ್ರ,
ಗ್ರಾಮ ಸಮಿತಿ, ಹಾಗೂ ಪುರಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…