Featured

ಕಾಪು ಕ್ಷೇತ್ರದಲ್ಲಿ ಬಿಜೆಪಿ ಯೂತ್ ಮಾಸ್ ಲೀಡರ್ ಯಶ್ಪಾಲ್ ಸುವರ್ಣ..!! Special report

ಕಾಪು ಕ್ಷೇತ್ರದಲ್ಲಿ ಯೂತ್ ಮಾಸ್ ಲೀಡರ್ ಯಶ್ಪಾಲ್ ಸುವರ್ಣ..!!

ಹೌದು ಕಳೆದ ಕೆಲವು ವರ್ಷಗಳ ಹಿಂದೆ ಹಿಂದೂ ಸಂಘಟನೆಯೊಂದರಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ಯುವಕ ಉಡುಪಿ ಬೆತ್ತಲೆ ‌ಪ್ರಕರಣದ ನಂತರ ಇಡೀ ರಾಜ್ಯದಲ್ಲಿಯೇ ಸುದ್ದಿಯಾಗಿದ್ದ ಯುವಕ ತದನಂತರ ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡು ಭಾಜಪದ ಸಾಮಾನ್ಯ ಕಾರ್ಯಕರ್ತನಾಗಿದ್ದು ಕೊಂಡು ನಂತರದ ದಿನದಲ್ಲಿ ಸಂಘಟನಾ ಪೃವೃತನಾಗಿ ದ.ಕ ಉಡುಪಿ ಸಹಕಾರಿ ಮೀನು ಮಾರಾಟ ಫೇಡರೇಶನ್ ಅಧ್ಯಕ್ಷನಾಗಿ ಹೊರಹೊಮ್ಮಿದ ಯುವಕ ಯಶ್ಪಾಲ್ ಸುವರ್ಣ.

ಉಡುಪಿ ಜಿಲ್ಲೆಯ ಭಾಜಪದ ವಿವಿಧ ಹುದ್ದೆ ಅಲಂಕರಿಸಿದ್ದು ಮಾತ್ರವಲ್ಲದೆ ನಗರಸಭಾ ಸದಸ್ಯನಾಗಿಯೂ ಜನಸಾಮಾನ್ಯರ ಜತೆ ಬೆರೆತು ಯುವಸಮುದಾಯವನ್ನು ಕಟ್ಟಿಬೆಳೆಸಿಕೊಂಡು ಸಾಗುತ್ತಿದ್ದಂತೆ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಭಾರಿಯಾಗಿ ನೇಮಕಗೊಂಡತೆ ಇಡೀ ಕ್ಷೇತ್ರದ ಯುವಕರಿಗೆ ಬೆನ್ನೆಲುಬು ಗಟ್ಟಿಯಾದಂತಾಗಿದೆ.
ಪಕ್ಷ ಸಂಘಟನೆ ಮತ್ತು ಯುವಕರ ಐಕಾನ್ ಆಗಿರುವ ಯಶ್ಪಾಲ್ ಸುವರ್ಣರ ಕಾರ್ಯವೈಖರಿಗೆ ಯೂತ್ ಫಿದಾ ಆಗಿದ್ದಾರೆ.


ಪ್ರಬಲ ಮೊಗವೀರ ಸಮಾಜದಲ್ಲಿ‌ ಬೆಳೆದ ಯಶ್ಪಾಲ್ ಸಮಾನ ರೂಪದ ಸ್ಫಟಿಕದಂತೆ ಯುವಕರ ಜತೆ ಬೆರೆಯುತ್ತಿರುವುದು ಕೂಡ ಪ್ಲಸ್ ಪಾಯಿಂಟ್‌.
ಯಶ್ಪಾಲ್ ಸುವರ್ಣರ ಹೆಸರು ಕಾಪು‌ ಪ್ರಭಾರಿಯಾಗಿ‌ ನೇಮಕಗೊಂಡಂತೆ ನಿಟ್ಟುಸಿರು ಬಿಟ್ಟ ಯೂತ್ ಇದೀಗ ಯಶ್ಪಾಲ್ ಗೆ ಜೈ ಅನ್ನಲು ಶುರು ಮಾಡಿದ್ದಾರೆ.

ಸಂಘಟನೆ ಮತ್ತು ಪಕ್ಷದ ತತ್ವ ಸಿದ್ದಾಂತದ ಜತೆಜತೆಗೆ ಯುವ ಸಮುದಾಯದ ಸಮಸ್ಯೆಗಳಲ್ಲಿ ಬೆರೆತು ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ಮೂಲಕ ಕಾಪು ಕ್ಚೇತ್ರದ ಬಿಜೆಪಿ ಪಕ್ಷ ಮತ್ತಷ್ಟು ಗಟ್ಟಿಗೊಳಿಸುವ ಕೆಲಸದಲ್ಲಿ‌ ಮತ್ತು ಯುವಕರನ್ನು ಮತ್ತಷ್ಟು ಬಿಜೆಪಿ‌ಜತೆ ಸೇರಿಸುವಲ್ಲಿ ಯಶಸ್ವಿ ದಾಪುಗಾಲು ಹಾಕುತ್ತಿರುವುದು ಕೂಡ ಧನಾತ್ಮಕ ಸ್ಪಂದನೆಯಾಗಿದೆ.

ಒಂದು‌ ಕಾಲದಲ್ಲಿ ಕಾಪು ಕ್ಷೇತ್ರದ ವ್ಯಾಪ್ತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಯುವ ತಂಡದ ಜತೆ ನಿಕಟ ಸಂಪರ್ಕ ಮತ್ತು ಸಭೆಗಳ ಮುಖಾಂತರ ಪರಿಹರಿಸಿ ಒಂದೆಡೆ ಸೇರುವಂತೆ ಮಾಡಿದ್ದು ಯಶ್ಪಾಲ್ ಎಂದರೆ ತಪ್ಪಾಗಲಾರದು.
‌ಕಾಪು ಬಿಜೆಪಿಯಲ್ಲಿ ಬೂದಿ ಮುಚ್ವಿದ ಕೆಂಡದಂತ್ತಿದ್ದ ಭಿನ್ನಮತ ಸುವರ್ಣ ರ ಎಂಟ್ರಿಯ ನಂತರ ಸೂಕ್ತ ನಾಯಕನ ಭರವಸೆ ಸಿಕ್ಕಂತಾಗಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಗ್ರಾಮ ಪಂಚಾಯತ್ ಚುನಾವಣೆ ಮುಂಬರುವಂತೆ ಕಾಪು ಕ್ಷೇತ್ರದಲ್ಲಿ ಯಶ್ಪಾಲ್ ಆಗಮನ‌ ಕೂಡ ಪಕ್ಷಕ್ಕೆ ಬಹುಮತ ಸೀಟ್ ಗೆಲ್ಲುವ ಅವಕಾಶ ಇದೆ ಅನ್ನುವ ಮಾತು ಕಾರ್ಯಕರ್ತರ ವಲಯದಲ್ಲಿ ಗುಣುಗುತ್ತಿರುವುದು ಕಂಡು ಬರುತ್ತಿದ್ದೆ.


ಹೀಗಾಗಿ ಯಶ್ಪಾಲ್ ಈಗ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಯೂತ್ ಐಕಾನ್.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮತ್ತು ಗುರ್ಮೆ ಸುರೇಶ್ ಶೆಟ್ಟಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಒಂದಿಷ್ಟು ನಾಯಕರು ಕೂಡ ಯಶ್ಪಾಲ್ ಸುವರ್ಣ ಕಾರ್ಯವೈಖರಿಯಲ್ಲಿ ಕೈ ಜೋಡಿಸಿ ಜೈ ಅನ್ನಿಸಿಕೊಳ್ಳುವುರ ಮುಖಾಂತರ ಪಕ್ಷಕ್ಕೆ ಮತ್ತಷ್ಟು ಪುಷ್ಟಿ ಸಿಗುವುದರಲ್ಲಿ ಅನುಮಾನವಿಲ್ಲ.

ಹಿರಿಯ ನಾಯಕರ ಜತೆಗೂ‌ ನಿಕಟ ಸಂಪರ್ಕ ಹೊಂದಿರುವ ಮತ್ತು ಸಹಕಾರಿ ರಂಗದಲ್ಲೂ‌ ಸಾಧನೆಯ ಮೆಟ್ಟಿಲು ಏರುತ್ತಿರುವ ಸುವರ್ಣ ಕಾಪು ಕ್ಷೇತ್ರದಲ್ಲಿ  ಹೊಸ‌ಸಂಚಲನ ಮೂಡಿಸಿದ್ದಾರೆ.

ಮುಂದೆ ಬರುವ ಕಠಿಣ ಚುನಾವಣಾ ಸವಾಲುಗಳನ್ನು ಎದುರಿಸುವ ಜವಾಬ್ದಾರಿ ಮತ್ತು ಬಿಜೆಪಿ  ಗದ್ದುಗೆ ಗಟ್ಟಿಗೊಳಿಸುವ ಕಾರ್ಯ ಯಾವ ರೀತಿ ನಡೆಯುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.

ಖಡಕ್ ನಿರ್ಧಾರ ತೆಗೆದುಕೊಳ್ಳಲು ಸಾದ್ಯವಾಗದ ಕಾಪು ಬಿಜೆಪಿ ಕ್ಷೇತ್ರ ಕಮಿಟಿಯ ಬಗ್ಗೆ ಅಸಮಾಧಾನ ಹೊರಬೀಳುತ್ತಿದ್ದಂತೆ ಯಶ್ಪಾಲ್ ಎಂಟ್ರಿ ಕಾಪು ವಿಧಾನ ಸಭಾ ಕ್ಷೇತ್ರದ ರಾಜಕೀಯ ಬೆಳವಣಿಗೆಯಲ್ಲಿ‌ ಸಂಚಲನ‌ ಸೃಷ್ಟಿ ಮಾಡಿದೆ.

ಯಶ್ಪಾಲ್ ಸುವರ್ಣ ಅಂದ ತಕ್ಷಣ ಯೂತ್ ಸಾಲುಗಟ್ಟಿ ನಿಂತು ಪಕ್ಷ ಚಟುವಟಿಕೆಗಳಲ್ಲಿ‌ ತೊಡಗಿಸಿಕೊಂಡು ಮುಂದೊಂದು ದಿನ‌ ಕಾಪು ಹೊಸ ನಾಯಕನಿಗೆ ಇದೇ ಯುವಕರ ತಂಡ ಫೌಂಡೇಶನ್ ಹಾಕಿದರೂ ಅನುಮಾನವಿಲ್ಲ.

‌ಆಂತರೀಕ‌ ಒತ್ತಡದ ನಡುವೆಯೂ ಕೂಡ ಯುವಕರನ್ನ ಪಕ್ಷದತ್ತ ಸೆಳೆದು ನವತರುಣ-ತರುಣಿಯರ ಸಂಘಟನೆ ಹಾಗೂ ತಳಮಟ್ಟದ ಕಾರ್ಯಕರ್ತನಿಗೂ ಮನಮುಟ್ಟುವಂತೆ ಬಿಗಿದಪ್ಪಿ ಮಾತಾಡಿಸಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಲು ನಿಪುಣತನ ಹೊಂದಿರುವುದರಿಂದಲೇ ಯಶ್ಪಾಲ್ ಸುವರ್ಣ ಯೂತ್ ಮಾಸ್ ಲೀಡರ್ ಅನ್ನಿಸಿಕೊಂಡರು ಎಂದರು ತಪ್ಪಾಗಲಾರದು.

ಸ್ಪೆಷಲ್ ರಿಪೋರ್ಟ್

ಪುರುಷೋತ್ತಮ ಸಾಲಿಯಾನ್

ವಿಶ್ವನ್ಯೂಸ್24

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago