ಅಂಚೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 500 ರೂ. ಇರುವುದು ಕಡ್ಡಾಯ -Vishwanews24
ಅಂಚೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 500 ರೂ. ಇರುವುದು ಕಡ್ಡಾಯ -Vishwanews24
ಹೊಸದಿಲ್ಲಿ: ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿಯೂ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ನಿಯಮ ಜಾರಿಗೆ ಬರಲಿದೆ. ಹೀಗೆಂದು ಸ್ವತಃ ಭಾರತೀಯ ಅಂಚೆ ಇಲಾಖೆಯೇ ಟ್ವೀಟ್ ಮಾಡಿದೆ.
ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ ಈ ಅಧಿಕೃತ ನಿಯಮ ಡಿ.11 ರಿಂದ ಜಾರಿಯಾಗಲಿದ್ದು ಅದರೊಳಗಾಗಿ 500 ರೂ ಮೆಂಟೇನ್ ಮಾಡಿ.
ಇಲ್ಲದಿದ್ದರೆ, ಖಾತೆಯಿಂದ ನಿರ್ವಹಣ ವೆಚ್ಚ ಕಡಿತ ಗೊಳ್ಳುತ್ತದೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.ವಿತ್ತೀಯ ವರ್ಷದ ಅಂತ್ಯದಲ್ಲಿ ಖಾತೆಯಲ್ಲಿ ಕನಿಷ್ಠ ಮೊತ್ತ 500 ರೂ.ಗಳು ಇಲ್ಲವೆಂದಾದಲ್ಲಿ, ಖಾತೆ ನಿರ್ವಹಣ ವೆಚ್ಚದ ರೂಪದಲ್ಲಿ 100 ರೂ.ಗಳನ್ನು ಕಡಿತ ಮಾಡಲಾಗುತ್ತದೆ.
ಒಂದು ವೇಳೆ, ಉಳಿತಾಯ ಖಾತೆಯಲ್ಲಿ ಶೂನ್ಯ ಮೊತ್ತವಿದ್ದರೆ, ಆಗ ತನ್ನಿಂತಾನೇ ಆ ಖಾತೆ ರದ್ದಾಗಲಿದೆ. ಇದಲ್ಲದೇ, ತಿಂಗಳ 10ನೇ ದಿನಾಂಕ ದಿಂದ ಕೊನೆಯ ದಿನಾಂಕದವರೆಗಿನ ಅವಧಿಯಲ್ಲಿ ಖಾತೆಯಲ್ಲಿ 500 ರೂ.ಗಳಿಗಿಂತ ಕಡಿಮೆ ಮೊತ್ತವಿದ್ದರೆ, ಆ ತಿಂಗಳ ಬಡ್ಡಿಯೂ ಸಿಗುವುದಿಲ್ಲ ಎಂದೂ ಅಂಚೆ ಇಲಾಖೆ ಸ್ಪಷ್ಟಪಡಿಸಿದೆ.
Now maintaining minimum balance in Post Office Savings Account is mandatory.#MyPostIndiaPost pic.twitter.com/JoT1N6bUjo
— India Post (@IndiaPostOffice) November 29, 2020
ಪಿಂಚಣಿದಾರರಿಗೆ ಶೂನ್ಯ ಬಾಕಿಯಿಲ್ಲ!
ಈವರೆಗೆ ಪಿಂಚಣಿದಾರರಿಗೆ ಶೂನ್ಯ ಬಾಕಿಯ ಖಾತೆಗಳನ್ನು ತೆರೆಯಲಾಗುತ್ತಿತ್ತು. ಈ ಮೊದಲು ಅಂಚೆ ಇಲಾಖೆಯಲ್ಲಿ ಎಸ್‌ಬಿ ಖಾತೆದಾರರಿಗೆ ಕನಿಷ್ಠ 50 ರೂ. ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯವಾಗಿತ್ತು. ಈಗ 500 ರೂ. ಕಡ್ಡಾಯವಾಗಿ ಹೊಂದಿರಬೇಕು. ಅಂಚೆ ಕಚೇರಿಯ ಎಸ್.ಬಿ. ಖಾತೆಗಳಲ್ಲಿ ಕನಿಷ್ಠ ಶುಲ್ಕ 500 ರೂಪಾಯಿ ಬ್ಯಾಲೆನ್ಸ್ ಉಳಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ. ಇಲ್ಲದಿದ್ದರೆ ಖಾತೆ ನಿರ್ವಹಣೆ ವೆಚ್ಚವೆಂದು 100 ರೂ. ಶುಲ್ಕ ಕಡಿತ ಮಾಡಲಾಗುವುದು.
ಖಾತೆಯಲ್ಲಿ ಹಣ ಇಲ್ಲದಿದ್ದರೆ ಅಂತಹ ಖಾತೆ ತನ್ನಿಂತಾನೇ ಅಂತ್ಯವಾಗುತ್ತದೆ. ಅಂಚೆ ಕಚೇರಿ ಉಳಿತಾಯ ಖಾತೆಗೆ ಶೇ. 4ರಷ್ಟು ಬಡ್ಡಿ ನೀಡುತ್ತಿದ್ದು, ವಿನಿಮಯ ಬ್ಯಾಲೆನ್ಸ್ ಕಾಯ್ದುಕೊಳ್ಳದವರು ನಿರ್ವಹಣೆ ಶುಲ್ಕ ಭರಿಸಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಜಿಪಿಒ ಚೀಫ್ ಪೋಸ್ಟ್ ಮಾಸ್ಟರ್ ಕೆ. ರಾಧಾಕೃಷ್ಣ, ”ಬ್ಯಾಂಕ್‌ನಲ್ಲಾದರೆ ಒಂದು ಸಾವಿರ ರೂ. ಇದೆ. ಆದರೆ ಅಂಚೆ ಇಲಾಖೆಯಲ್ಲಿ 500 ರೂ. ಮಾತ್ರ ಇದೆ. ಖಾತೆ ಜೀವಿತಾವಧಿಯಲ್ಲಿ ಒಂದು ಬಾರಿ ಪಾವತಿಸಿದರಾಯಿತು,” ಎಂದಿದ್ದಾರೆ.
