ಅಕ್ಟೋಬರ್ 10ರಂದು ಸರ್ಕಾರದ ವಿರುದ್ಧ ಜೆಡಿಎಸ್​ ಬೃಹತ್ ಪ್ರತಿಭಟನೆ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ನೆರೆ ಪ್ರವಾಹ ಪರಿಹಾರ ಕಾರ್ಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿರುವ ವಿಷಯಕ್ಕೆ ಸಂಬಂಧಿದಂತೆ ಅಕ್ಟೋಬರ್ 10ರಂದು ಸರ್ಕಾರದ ವಿರುದ್ಧ ಜೆಡಿಎಸ್​ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.

ನಗರದ ಮೌರ್ಯ ಸರ್ಕಲ್​ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದ್ದು, ಇಂದು ಪ್ರತಿಭಟನಾ ಪೂರ್ವಭಾವಿ ಸಿದ್ದತಾ ಜೆಡಿಎಸ್​ ಕಚೇರಿ ಜೆಪಿ ಭವನದಲ್ಲಿ ಕುರಿತು ಸಭೆ ನಡೆಸಲಾಗುತ್ತಿದೆ. ಇನ್ನು ಈಸ ಸಭೆಯೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

ಅಲ್ಲದೇ ಸಭೆಯಲ್ಲಿ ಪ್ರತಿಭಟನೆ ರೂಪು ರೇಷೆಗಳ ಬಗ್ಗೆ ಚರ್ಚೆ ಆಗಲಿದ್ದು, ನಾಳಿನ ಪ್ರತಿಭಟನೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಚರ್ಚೆ ಹಾಗೂ ಸದನದ ಒಳಗೆ ಹೋರಾಟ ಮಾಡುವ ಕುರಿತು ಸಹ ಚರ್ಚೆ ಆಗಲಿದೆ.

ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಸಾಕಷ್ಟು ಜನರಿಗೆ ಮನೆ, ಜಾನುವಾರುಗಳು, ಮತ್ತಿತರ ಸೌಲಭ್ಯಗಳು ಇಲ್ಲದಂತಾಗಿದೆ. ಈ ವಿಷಯಕ್ಕೆ ಸಂಬಂಧಿದಂತೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ವೈಮಾನಿಕ ಸಮೀಕ್ಷೆ ಕೂಡ ಮಾಡಿತ್ತು ಆದರೆ ಸಮೀಕ್ಷೆ ನಡೆದು ಒಂದೂವರೆ ತಿಂಗಳುಗಳೇ ಕಳೆದಿವೆ.ಆದರೆ ಪರಿಹಾರ ಮಾತ್ರ ಶೂನ್ಯವಾಗಿತ್ತು. ಮೊನ್ನೆಯಷ್ಟೇ ಕೇಂದ್ರದಿಂದ 1200 ಕೋಟಿಯಷ್ಟು ಪರಿಹಾರದ ನೆರವು ನೀಡಿದ್ದಾರೆ. ಆದರೂ ಪರಿಹಾರ ಬಹಳ ಕಡಿಮೆಯಾಗಿದೆ ಎಂಬ ಆರೋಪ ವಿರೋಧ ಪಕ್ಷದ ನಾಯಕರಿಂದ ಕೇಳಿ ಬರುತ್ತಿದೆ.