ಅಕ್ರಮ ಮಸೀದಿ ಸೇರಿದಂತೆ 1,200 ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳ ನೆಲಸಮ ಮಾಡಿದ ಯೋಗಿ ಸರ್ಕಾರ – vishwanews24

Featured, ರಾಷ್ಟ್ರ ನ್ಯೂಸ್

ಅಕ್ರಮ ಮಸೀದಿ ಸೇರಿದಂತೆ 1,200 ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳ ನೆಲಸಮ ಮಾಡಿದ ಯೋಗಿ ಸರ್ಕಾರ

ಅಕ್ಬರ್‌ನಗರ: ಕುಕ್ರೈಲ್ ನದಿಯ ತಳದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರದ (ಎಲ್‌ಡಿಎ) ಅಧಿಕಾರಿಗಳು ಹೇಳಿದ್ದಾರೆ. ಜೂನ್​ 19ರಿಂದ ಪ್ರಾರಂಭವಾಗಿ ಇಂದು (ಜೂ.20) ಈ ಕಾರ್ಯಚರಣೆ ಕೊನೆಗೊಂಡಿದೆ.

ಬುಲ್ಡೋಜರ್‌ಗಳು ಸೇರಿದಂತೆ ಭಾರೀ ಯಂತ್ರೋಪಕರಣಗಳನ್ನು ಬಳಸಿ ಸುಮಾರು 1,169 ಅಕ್ರಮ ವಸತಿ ಆಸ್ತಿಗಳು ಮತ್ತು 100 ಕ್ಕೂ ಹೆಚ್ಚು ವಾಣಿಜ್ಯ ಆಸ್ತಿಗಳನ್ನು ನೆಲಸಮ ಮಾಡಲಾಗಿದೆ. ಇದರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಮಸೀದಿಗಳನ್ನು ಕೂಡ ಕೆಡವಿದ್ದಾರೆ. 24.5 ಎಕರೆ ಜಾಗದಲ್ಲಿ ನಡೆದಿರುವ ಅಕ್ರಮ ಒತ್ತುವರಿ ತೆರವು ಕಾರ್ಯ ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರಂಭವಾಗಿತ್ತು. ಈ ಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳು ಸೇರಿದಂತೆ 1,320 ಕ್ಕೂ ಹೆಚ್ಚು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.

ಹಾಸನ : ಹಾಡಹಗಲೇ ಗುಂಡಿನ ದಾಳಿ ; ಇಬ್ಬರು ಮೃತ್ಯು – vishwanews24

ಜೂನ್ 18 ರಂದು ಸುಮಾರು 100 ಕಟ್ಟಡಗಳನ್ನು ಕೆಡವಲಾಯಿತು. ಇದೀಗ ಅದರ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಇನ್ನು ಈ ತೆರವು ಕಾರ್ಯಚರಣೆಯಿಂದ ಮನೆ ಕಳೆದುಕೊಂಡಿರುವ ಬಡ ಜನರಿಗೆ ನಗರದ ಇತರ ಭಾಗದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಪರ್ಯಾಯ ವಸತಿ ಒದಗಿಸಲಾಗಿದೆ. ಅಕ್ಬರ್‌ನಗರದ 1,800ಕ್ಕೂ ಹೆಚ್ಚು ಕುಟುಂಬಗಳು ವಸತಿ ಸೌಲಭ್ಯ ಪಡೆದಿವೆ. ಈ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಉಡುಪಿ:  ತೈಲ ಬೆಲೆ ಏರಿಕೆ ವಿರೋಧಿಸಿ ಕಾಪು ಮಂಡಲ ಬಿಜೆಪಿಯಿಂದ ಪ್ರತಿಭಟನೆ – vishwanews24

Leave a Reply