ಅಕ್ಷಯಧಾರ ಕ್ರೆಡಿಟ್. ಕೊ. ಸೊಸೈಟಿ ಕಾಪು 13 ನೆ ವರ್ಷಕ್ಕೆ ಪಾದಾರ್ಪಣೆ- ಅಧ್ಯಕ್ಷ ಲವ ಕರ್ಕೇರಾ ಅಭಿನಂದನೆ.- vishwanews24

Featured, ಉಡುಪಿ

ಅಕ್ಷಯಧಾರ ಕ್ರೆಡಿಟ್. ಕೊ. ಸೊಸೈಟಿ ಕಾಪು 13 ನೆ ವರ್ಷಕ್ಕೆ ಪಾದಾರ್ಪಣೆ- ಅಧ್ಯಕ್ಷ ಲವ ಕರ್ಕೇರಾ ಅಭಿನಂದನೆ

ಕಾಪು: ಸಹಕಾರಿ ಕ್ಷೇತ್ರದ ಆರ್ಥಿಕ ಸಂಸ್ಥೆ ಅಕ್ಷಯಧಾರ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಕಾಪು ಯಶಸ್ವಿ 12 ವರ್ಷಗಳನ್ನು ಕಳೆದು 13 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಈ ಸಂಧರ್ಭದಲ್ಲಿ ಬ್ಯಾಂಕಿನ ಎಲ್ಲಾ ಠೇವಣಿ ದಾರರಿಗೆ, ಷೇರು ದಾರರಿಗೆ ಮತ್ತು ವಿವಿಧ ಖಾತೆಗಳನ್ನು ಹೊಂದಿದ ಸರ್ವ ಖಾತೆದಾರ ರಿಗೆ ಹಾಗೂ ಹಿತೈಷಿ ಮಿತ್ರರಿಗೂ,ಗ್ರಾಹಕರಿಗೆ, ಪಿಗ್ಮಿ ಸಂಗ್ರಹಗಾರರಿಗೆ ಬ್ಯಾಂಕಿನ‌ ಅಧ್ಯಕ್ಷ ಲವ ಕರ್ಕೇರಾ ಸಂಸ್ಥೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

                            ಸಾಂಧರ್ಭಿಕ ಚಿತ್ರ

ಕೊರೋನ ಸಂಕಟದ  ಸಮಯದಲ್ಲೂ ನಮ್ಮ ಠೇವಣಿದಾರರಿಗೆ,ಗ್ರಾಹಕರಿಗೆ ನಿರಂತರ ಸೇವೆ ನೀಡಿದೆ ಅಲ್ಲದೆ ದುರ್ಬಲರಿಗೆ ಆರ್ಥಿಕವಾಗಿ ಸಹಾಯ ಮಾಡಿದೆ.ಗ್ರಾಹಕ ಸ್ನೇಹಿಯಾಗಿರುವ ನಮ್ಮ ಸಂಸ್ಥೆ ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ,ತ್ವರಿತವಾಗಿ ಸೇವೆಗೈಯ್ಯುತಿದೆ. ವರದಿವರ್ಷದಲ್ಲಿ ಠೇವಣೆದಾರರ, ಸದಸ್ಯರ, ಸಿಬ್ಬಂದಿವರ್ಗದವರ ಸಹಕಾರದಿಂದ ಉತ್ತಮ ಪ್ರಗತಿ ಸಾಧಿಸಿದೆ. ಮುಂದಕ್ಕೂ ಸಂಸ್ಥೆಯ ಅಭಿವೃದ್ದಿಗಾಗಿ ಎಲ್ಲರ  ಸಹಕಾರವಿರಲಿ ಎಂದು ಅವರು  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

             ಬ್ಯಾಂಕಿನ ಅಧ್ಯಕ್ಷರು-ಲವಾ ಕರ್ಕೇರಾ