ಅಧಿಕಾರದ ಆಸೆ ಇಲ್ಲದ ನಾವುಗಳು ಗಾಂಧಿ ಪರಿವಾರದ ಜೊತೆಗೆ ಇದ್ದು ಪಕ್ಷವನ್ನು ಕಟ್ಟುತ್ತೇವೆ, ಬೆಳೆಸುತ್ತೇವೆ : ಡಿಕೆ ಶಿವಕುಮಾರ್
ಕಾಂಗ್ರೆಸ್ ಪಕ್ಷ ಉಳಿಯಲು, ದೇಶಾದ್ಯಂತ ಎಲ್ಲ ನಾಯಕರು ಒಗ್ಗಟ್ಟಿನಿಂದ ಇರಲು ಗಾಂಧಿ ಪರಿವಾರ ಬೇಕೇ ಬೇಕು..
ಗಾಂಧಿ ಪರಿವಾರ ಕಾಂಗ್ರೆಸ್ ಪಕ್ಷದ ಅತಿ ಪ್ರಮುಖ ಭಾಗ. ಅವರಿಲ್ಲದೆ ನಾವಿಲ್ಲ..
ಗಾಂಧಿ ಪರಿವಾರ ಇಲ್ಲದೆ ಕಾಂಗ್ರೆಸ್ ಪಕ್ಷದ ಉಳಿವು ಅಸಾಧ್ಯ
ನವದೆಹಲಿ: ಕಾಂಗ್ರೆಸ್ ಪಕ್ಷ ಉಳಿಯಲು, ದೇಶಾದ್ಯಂತ ಎಲ್ಲ ನಾಯಕರು ಒಗ್ಗಟ್ಟಿನಿಂದ ಇರಲು ಗಾಂಧಿ ಪರಿವಾರ ಬೇಕೇ ಬೇಕು. ಗಾಂಧಿ ಪರಿವಾರ ಕಾಂಗ್ರೆಸ್ ಪಕ್ಷದ ಅತಿ ಪ್ರಮುಖ ಭಾಗ. ಅವರಿಲ್ಲದೆ ನಾವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್, ಗಾಂಧಿ ಪರಿವಾರ ಇಲ್ಲದೆ ಕಾಂಗ್ರೆಸ್ ಪಕ್ಷದ ಉಳಿವು ಅಸಾಧ್ಯ ಎಂದು ಹೇಳುವ ಮೂಲಕ ಗಾಂಧಿ ಪರಿವಾರದ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದಾರೆ.
ಅಧಿಕಾರದ ಆಸೆ ಇರುವವರು ಪಕ್ಷ ಬಿಟ್ಟು ಹೋಗಬಹುದು ಎಂದು ಸವಾಲೆಸೆದಿರುವ ಡಿ. ಕೆ. ಶಿವಕುಮಾರ್, ಅಧಿಕಾರದ ಆಸೆ ಇಲ್ಲದ ನಾವುಗಳು ಗಾಂಧಿ ಪರಿವಾರದ ಜೊತೆಗೆ ಇದ್ದು ಪಕ್ಷವನ್ನು ಕಟ್ಟುತ್ತೇವೆ, ಬೆಳೆಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪಕ್ಷದಿಂದ ಹೊರಹೋಗುವವರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಮಾತನಾಡಿರು ಅವರು, ‘ವೈಯಕ್ತಿಕ ಲಾಭ ನೋಡುವವರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಾವು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸಿದ್ಧಾಂತಕ್ಕೆ ನಿಷ್ಠರಾಗಿದ್ದೇವೆ. ಗಾಂಧಿ ಕುಟುಂಬದೊಂದಿಗೆ ಯಾವಾಗಲೂ ನಿಲ್ಲುತ್ತೇವೆ‘ ಎಂದು ಅವರು ತಿಳಿಸಿದರು.
ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲಿಸಿದ್ದ ಇನ್ಸ್ಪೆಕ್ಟರ್ ಅಮಾನತು – Vishwanews24
