ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ  – vishwanews24

Featured, ರಾಷ್ಟ್ರ ನ್ಯೂಸ್

ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ   ಸಹಿ ಹಾಕಿದ ಪ್ರಧಾನಿ ಮೋದಿ  

ನವದೆಹಲಿ: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಪ್ರಧಾನಿ ಮೋದಿ  ಸಹಿ ಹಾಕಿದ್ದಾರೆ.

ಮೋದಿ ಅವರು ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ಅಧಿಕಾರ ನೀಡುವ ತಮ್ಮ ಮೊದಲ ಫೈಲ್‌ಗೆ ಸಹಿ ಹಾಕಿದರು.

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಸಯ್ಯದ್ ರೇಹಾ ಖಾದ್ರಿಗೆ ಸನ್ಮಾನ – vishwnews24

ಒಟ್ಟು 9.3 ಕೋಟಿ ರೈತರಿಗೆ ಹಣ ಸಿಗಲಿದೆ. ಮೋದಿ ಅವರು ಒಟ್ಟು 20,000 ಕೋಟಿ ರೂ. ಹಣ ಬಿಡುಗಡೆಗೆ ಮಾಡುವ ಕಡತಕ್ಕೆ ಸಹಿ ಹಾಕಿದ್ದಾರೆ. 4 ತಿಂಗಳಿಗೊಮ್ಮೆ 2 ಸಾವಿರ ರೂ. ವರ್ಷಕ್ಕೆ 6 ಸಾವಿರ ರೂ. ನಿಧಿಯ ಮೂಲಕ ರೈತರ ಖಾತೆಗೆ ಹಣ ಜಮೆಯಾಗುತ್ತಿದೆ.

ಮೂರನೇ ಬಾರಿ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಕೊಣಾಜೆ: ಬೋಳಿಯಾರು ಚೂರಿ ಇರಿತ ಪ್ರಕರಣ – ಮೂವರು ಆರೋಪಿಗಳು ಪೊಲೀಸ್ ವಶಕ್ಕೆ – vishwanews24

Leave a Reply