ಅಧಿಕೃತವಾಗಿ ಕಾಂಗ್ರೆಸ್ ​ ಪಕ್ಷ ಸೇರಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಎಸ್​ ನಾರಾಯಣ್ – Vishwanews24

Featured, ರಾಜ್ಯ ನ್ಯೂಸ್
  • ಪಕ್ಷದ ಆದರ್ಶ ಮೆಚ್ಚಿ ಕಾಂಗ್ರೆಸ್ ಸೇರ್ಪಡೆ..

  • ಬಡವನಿಗೆ, ದಲಿತನಿಗೆ, ಹಿಂದುಳಿದವರ ಧ್ವನಿ ಈ ಕಾಂಗ್ರೆಸ್..

  • ಜನ ಬದಲಾವಣೆ ಬಯಸಿದ್ದಾರೆ..

  • ಪಕ್ಷಕ್ಕಾಗಿ ದುಡಿಯುವೆ..

  • 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಗುರಿ..

ಬೆಂಗಳೂರು : ಬೆಂಗಳೂರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿರುವ ಎಸ್​ ನಾರಾಯಣ್  ಇಂದು  ಅಧಿಕೃತವಾಗಿ ಕಾಂಗ್ರೆಸ್ ​ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಎಸ್​ ನಾರಾಯಣ್​ ಅಧಿಕೃತವಾಗಿ ಕೈ ಹಿಡಿದಿದ್ದಾರೆ.

ಇದೇ ವೇಳೆ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಣ ತಿಮ್ಮಯ್ಯ ಪುರ್ಲೆ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು.

ಎಸ್​ ನಾರಾಯಣ್​ ಅವರು ಕಾಂಗ್ರೆಸ್​ ಸೇರ್ಪಡೆಗೊಂಡ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಹು ಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ನಾರಾಯಣ್ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅವರು ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ವಾಣಿಜ್ಯ ಮಂಡಳಿ ಸೇರಿದಂತೆ ಸಮುದಾಯದ ಸಂಘಟನೆ ಮಾಡಲಿದ್ದಾರೆ. ಇನ್ನು ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಅವರೆಲ್ಲಾ ಈಗಾಗಲೇ ಅರ್ಜಿ ಹಾಕಿದ್ದಾರೆ. ಅದಕ್ಕೆ ಸಮಯ ನಿಗದಿ ಮಾಡಬೇಕಿದೆ ಎಂದರು

 ಹಿಜಾಬ್ ಬೇಡವೆಂದ್ರೇ ಶಿಕ್ಷಣವೇ ಬೇಡ, ಎಕ್ಸಾಂ ಬೇಡ ; ತರಗತಿ, ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು – Vishwanews24

ಇದೇ ವೇಳೆ ಪಂಚ ರಾಜ್ಯ ಚುನಾವಣೆ ಸೋಲಿನ ಕುರಿತು ಬಿಜೆಪಿ ನಾಯಕರ ಟೀಕೆ ಕುರಿತು ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮುಗಿದೇ ಹೋಯ್ತು, ಧೂಳೀಪಟ ಅಂತ ಬರೆದರು. ಪ್ರಿಯಾಂಕ ಗಾಂಧಿ 200 ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಪಂಜಾಬ್ ನಲ್ಲಿ ನಮ್ಮ ಅಂತರಿಕ ಕಲಹದಿಂದ ಕೈ ತಪ್ಪಿದೆ. ಯಡಿಯೂರಪ್ಪ, ಮುಖ್ಯ ಮಂತ್ರಿಗಳು ಏನೇ ಮಾತಾಡಲಿ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ, ನಮ್ಮ ಕಾಲ ಮೇಲೆ ನಾವು ನಿಲ್ಲಲಿದ್ದೇವೆ ಎಂದು ತಿಳಿಸಿದರು.

ರಾಜಕೀಯ ಪ್ರವೇಶ ಎಂದಾಗ ನಾನು ಆಯ್ಕೆ‌ಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕಾಗಿ ಕಾಂಗ್ರೆಸ್ ತ್ಯಾಗ ಬಲಿದಾನ ಎಲ್ಲವನ್ನೂ ಕೊಟ್ಟಿದೆ. ಬಡವನಿಗೆ, ದಲಿತನಿಗೆ, ಹಿಂದುಳಿದವರ ಧ್ವನಿ ಈ ಕಾಂಗ್ರೆಸ್. ಪಕ್ಷದ ಜಾತ್ಯಾತೀತ ಸಿದ್ದಾಂತಗಳು ಇಷ್ಟ ಆಯ್ತು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ನಮ್ಮಲ್ಲರ ಗುರಿ 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆ. ಪಕ್ಷಕ್ಕಾಗಿ ದುಡಿಯುತ್ತೇನೆ. ಕೊಟ್ಟ ಮಾತಿನಂತೆ ಕೆಲಸ ಮಾಡುತ್ತೇನೆ ಎಂದರು

ಇನ್ನು ಕಾಂಗ್ರೆಸ್​ ಪಕ್ಷ ಸೇರ್ಪಡೆ ಕುರಿತು ಕಳೆದ ಕೆಲವು ತಿಂಗಳ ಹಿಂದೆಯೇ ಅವರು ಸ್ಪಷ್ಟಪಡಿಸಿದ್ದರು. ತಮ್ಮ ‘5ಡಿ’ ಚಿತ್ರದ ಫಸ್ಟ್‌ ಲುಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಂದ ಬಿಡುಗಡೆ ಮಾಡಿಸಿದ್ದರು. ಈ ವೇಳೆ ಅವರು ತಮ್ಮ ರಾಜಕೀಯ ಪ್ರವೇಶದ ಕುರಿತು ತಿಳಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಕೂಡ ಎಸ್​ ನಾರಾಯಣ್​ ಅವರು ತಮ್ಮನ್ನು ಭೇಟಿಯಾಗಿ ಪಕ್ಷ ಸೇರ್ಪಡನೆ ಕುರಿತು ಮಾತನಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮುಖೇನ ತಿಳಿಸಿದ್ದರು.

ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ರಾಜೀನಾಮೆ – Vishwanews24

Leave a Reply