ಅಪಘಾತದಲ್ಲಿ ಗಾಯಗೊಂಡ ಮಧುವಿಗೆ ಐಸಿಯುನಲ್ಲೇ ತಾಳಿ ಕಟ್ಟಿದ ವರ – vishwanews24
ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತ : ಐಸಿಯುನಲ್ಲೇ ತಾಳಿ ಕಟ್ಟಿದ ವರ
ತಿರುವನಂತಪುರ: ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತವಾಗಿ ಆಸ್ಪತ್ರೆಯ ಐಸಿಯುನಲ್ಲೇ ವರ ತಾಳಿ ಕಟ್ಟಿದ ಅಪರೂಪದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಕೇರಳದ ಆಲಪ್ಪುಳದ ಥುಂಬೋಳಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಆಳಪ್ಪುಳ ನಿವಾಸಿ ಅವನಿ ಹಾಗೂ ಥುಂಬೋಳಿ ನಿವಾಸಿ ಶರೋನ್ ವಿವಾಹ ಶುಕ್ರವಾರ ನಿಗದಿಯಾಗಿತ್ತು. ಈ ಹಿನ್ನೆಲೆ ವಧು ಅವನಿ ಮೇಕಪ್ ಮಾಡಿಸಿಕೊಳ್ಳಲೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವನಿಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ವಿಪಿಎಸ್ ಲೇಕ್ಶೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನ.28ಕ್ಕೆ ಪ್ರಧಾನಿ ಮೋದಿ ಉಡುಪಿ ಕೃಷ್ಣ ಮಠ ಭೇಟಿ ಖಚಿತ : ಇಲ್ಲಿದೆ ಕಾರ್ಯಕ್ರಮ ವೇಳಾ ಪಟ್ಟಿ – vishwanews24
ಆಸ್ಪತ್ರೆಗೆ ಬಂದ ಶರೋನ್ ಹಾಗೂ ಅವನಿ ಕುಟುಂಬಸ್ಥರು ಪೂರ್ವ ನಿಗದಿಯಾಗಿದ್ದಂತೆ ಶುಕ್ರವಾರ ಮಧ್ಯಾಹ್ನ 12:15 ರಿಂದ 12:30ರ ನಡುವೆ ಮದುವೆ ನೆರವೇರಿಸಲು ಅವಕಾಶ ಕಲ್ಪಿಸುವಂತೆ ಆಸ್ಪತ್ರೆಯವರಲ್ಲಿ ಮನವಿ ಮಾಡಿದ್ದರು. ಅದರಂತೆ ಆಸ್ಪತ್ರೆಯ ಐಸಿಯುನಲ್ಲೇ ಶರೋನ್ ಅವನಿ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ. ಕುಟುಂಬ ಸದಸ್ಯರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ನ.28ಕ್ಕೆ ಪ್ರಧಾನಿ ಮೋದಿ ಉಡುಪಿ ಕೃಷ್ಣ ಮಠ ಭೇಟಿ ಖಚಿತ : ಇಲ್ಲಿದೆ ಕಾರ್ಯಕ್ರಮ ವೇಳಾ ಪಟ್ಟಿ – vishwanews24
