ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮದುವೆ ಎಂದ ವಿವಾಹಿತ ಯೂನಸ್ ಪಾಷ – Vishwanews24

Featured, ರಾಜ್ಯ ನ್ಯೂಸ್

ಅಪ್ರಾಪ್ತ ಬಾಲಕಿಯ ರೇಪ್ – ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮದುವೆ ಎಂದ ಯೂನಸ್ ಪಾಷ

ಮಂಡ್ಯ: ಮುಸ್ಲಿಂ ವಿವಾಹಿತನೋರ್ವ ಹಿಂದೂ ಧರ್ಮದ ಬಾಲಕಿಯ ಅಶ್ಲೀಲ ವೀಡಿಯೋ ಚಿತ್ರಿಸಿ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೇ ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿದ್ದಾನೆ.

ಸಕ್ಕರೆ ನಾಡು ಮಂಡ್ಯದಲ್ಲಿ  ಇತ್ತೀಚಿಗೆ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಮುಸ್ಲಿಂ ವಿವಾಹಿತನೊಬ್ಬ ಹಿಂದೂ ಧರ್ಮದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವುದಾಗಿ ಆಸೆ ತೋರಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ✴️ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್ – Vishwanews24

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು 25 ವರ್ಷದ ಯೂನಸ್ ಫಾಷ ಎಂದು ಗುರುತಿಸಲಾಗಿದೆ. ಎದುರು ಮನೆಯಲ್ಲೇ ವಾಸವಿದ್ದ ಬಾಲಕಿಯ ಸ್ನೇಹ ಸಂಪಾದಿಸಿದ್ದ ಯೂನಸ್ ಪಾಷ, ಹೆತ್ತವರಿಗೆ ತಿಳಿಯದಂತೆ ಮೊಬೈಲ್ ಕೊಡಿಸಿದ್ದ. ಬಳಿಕ ವೀಡಿಯೋ ಕಾಲ್‍ನಲ್ಲಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್‍ಲೋಡ್ ಮಾಡುವ ಬೆದರಿಕೆಯೊಡ್ಡಿದ್ದಲ್ಲದೇ, ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿ ನವೆಂಬರ್ 11ರಂದು ಅತ್ಯಾಚಾರ ಮಾಡಿದ್ದಾನೆ.

ಬಾಲಕಿಯ ತಂದೆ ನವೆಂಬರ್ 8 ರಂದು ಶಿರಡಿಗೆ ಹೋಗಿದ್ದರು. ಈ ವೇಳೆ ತಾಯಿಯೊಂದಿಗೆ ಅಜ್ಜಿ ಮನೆಗೆ ಹೋಗಿದ್ದ ಬಾಲಕಿಗೆ ನಿದ್ರೆ ಮಾತ್ರೆಯನ್ನು ಪುಡಿ ಮಾಡಿ ನೀಡಿದ್ದ ಕಾಮುಕ ಯೂನಸ್, ನವೆಂಬರ್ 11ರ ರಾತ್ರಿ ಸಾಂಬಾರಿಗೆ ಹಾಕಿಸಿದ್ದ. ಬಳಿಕ ಮನೆಯೊಳಗೆ ಬಂದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದಾದ ಬಳಿಕ ಬಾಲಕಿಯ ನಡುವಳಿಕೆಯಲ್ಲಾದ ಬದಲಾವಣೆ ಗಮನಿಸಿದ ಪೋಷಕರು ವಿಚಾರಿಸಿದಾಗ ಅತ್ಯಾಚಾರ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ 19ರಂದು ಬಾಲಕಿಯ ತಂದೆ ದೂರು ನೀಡಿದ್ದು, ಸದ್ಯ ಪೊಲೀಸರು ಯೂನಸ್ ಪಾಷನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

⏹️ ಕುಕ್ಕರ್‌ಬಾಂಬ್ ಸ್ಪೋಟ – ಗಾಯಗೊಂಡ ರಿಕ್ಷಾ ಚಾಲಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ..

Leave a Reply