ಅಭಿವೃದ್ಧಿ ಕಾರ್ಯದಲ್ಲಿ ಕಾಪು ಕ್ಷೇತ್ರ ಯಾವತ್ತು ಹಿಂದೆ ಬಿದ್ದಿಲ್ಲ :ಸೊರಕೆ (ಹಿರಿಯಡ್ಕ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ )
ಹಿರಿಯಡ್ಕ:ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ.
ಉಡುಪಿ: ಅಭಿವೃದ್ಧಿ ಕಾರ್ಯದಲ್ಲಿ ಕಾಪು ಕ್ಷೇತ್ರ ಯಾವತ್ತು ಹಿಂದೆ ಬಿದ್ದಿಲ್ಲ. ಹಿರಿಯಡ್ಕ ಬ್ಲಾಕ್ ವ್ಯಾಪ್ತಿಯಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ಆಗಿದ್ದು ಇದನ್ನೇ ಜನರ ಬಳಿ ತಿಳಿಹೇಳಿ ಮತವಾಗಿ ಪರಿವರ್ತನೆ ಮಾಡುವ ಕೆಲಸ ಪ್ರತೀ ಬೂತ್ ಮಟ್ಟದಲ್ಲಿ ಆಗಬೇಕಿದೆ ಅಂತಾ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಹಿರಿಯಡ್ಕ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ವನ್ನು ಉದ್ದೇಶಿಸಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಹೆಗ್ಡೆ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀಪಾದ ರೈ, ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಪ್ರಭು, ಉತ್ತರವಲಯ ಬ್ಲಾಕ್ ಅಧ್ಯಕ್ಷ ವಿನೋದ್ ಕುಮಾರ್,ಕಾರ್ಯಾಧ್ಯಕ್ಷ ಚರಣ್ ವಿಠಲ್ ಕುದಿ, ಪೆರ್ಡೂರು ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

