ಅಯೋಧ್ಯೆಯಂತೆ ಮಥುರಾ, ವೃಂದಾವನದಲ್ಲೂ ಭವ್ಯ ದೇಗುಲ ನಿರ್ಮಾಣ : ಯೋಗಿ ಆದಿತ್ಯನಾಥ್ – Vishwanews24
ಅಯೋಧ್ಯೆಯಂತೆ ಮಥುರಾ, ವೃಂದಾವನದಲ್ಲೂ ಭವ್ಯ ದೇಗುಲ ನಿರ್ಮಾಣ..
ಮಥುರಾದಲ್ಲಿ ಕೆಲಸ ಪ್ರಗತಿಯಲ್ಲಿದೆ ..
ಯೋಗಿ ಆದಿತ್ಯನಾಥ್ ..
ಲಖನೌ : ಅಯೋಧ್ಯೆ ಮತ್ತು ವಾರಾಣಸಿಯಂತೆ ಪಶ್ಚಿಮ ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನದಲ್ಲೂ ಭವ್ಯ ದೇಗುಲ ನಿರ್ಮಾಣ ಮಾಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಭರವಸೆ ನೀಡಿದರು.
ಅಮ್ರೋಹಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ದೇಗುಲ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಭವ್ಯ ದೇಗುಲ ನಿರ್ಮಾಣ ಮಾಡುವ ಆಶ್ವಾಸನೆ ನೀಡಿದ್ದೆವು. ಪ್ರಧಾನಿ ಮೋದಿ ಅವರು ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ. ಕಾಶಿಯಲ್ಲೂ ಭವ್ಯ ದೇಗುಲ ನಿರ್ಮಾಣವಾಗಿದೆ. ಹಾಗಿದ್ದಾಗ ಮಥುರಾ ಮತ್ತು ವೃಂದಾವನಗಳನ್ನು ಹಾಗೆಯೇ ಬಿಟ್ಟುಬಿಡಲು ಹೇಗೆ ಸಾಧ್ಯ? ಮಥುರಾದಲ್ಲಿ ಕೆಲಸ ಪ್ರಗತಿಯಲ್ಲಿದೆ’ ಎಂದು ಹೇಳಿದರು.
