ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆ ಮಸೀದಿಯೂ ನಿರ್ಮಾಣ ಆಗಲಿ- ಜಮೀರ್ ಅಹ್ಮದ್

Featured, ರಾಜ್ಯ ನ್ಯೂಸ್

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ, ಬಾಬ್ರಿ ಮಸೀದಿಯೂ ಆಗಲಿ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ..

ಡಿಸಿಎಂ ಜಿ.ಪರಮೇಶ್ವರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್, ರಾಮ ಮಂದಿರ ಕಟ್ಟಲು ದೇಶದ ಯಾವ ಮುಸ್ಲಿಮರು ವಿರೋಧ ಮಾಡಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಜೊತೆ ಮಸೀದಿಯೂ ನಿರ್ಮಾಣ ಆಗಲಿ ಎನ್ನುವುದು ಮುಸ್ಲಿಂ ಆಶಯ ಎಂದು ಹೇಳಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರಿಗೆ ರಾಮಮಂದಿರದ ನೆನಪು ಆಗುತ್ತಿದೆ. 2014ರಲ್ಲೇ ಅಧಿಕಾರಕ್ಕೆ ಬಂದರೂ ಅಲ್ಲಿಂದ ಇಲ್ಲಿಯವರೆಗೆ ಈ ವಿಚಾರ ಮಾತನಾಡಿಲ್ಲ. ಚುನಾವಣೆಗಾಗಿ ಮತ್ತೆ ರಾಮ ಮಂದಿರದ ಬಗ್ಗೆ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಮತ್ತೆ ಸುಮ್ಮನಾಗುತ್ತಾರೆ,,ಟಿಪ್ಪು ಜಯಂತಿ ವಿಚಾರವನ್ನ ವೋಟ್ ಬ್ಯಾಂಕ್ ಗಾಗಿ ಬಿಜೆಪಿಯವರು ವಿವಾದ ಮಾಡ್ತಿದ್ದಾರೆ. ಅವರಿಗೆ ಚುನಾವಣೆಗೆ ಯಾವುದೇ ವಿಚಾರ ಇಲ್ಲ. ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದರು. ..ಈಗ್ಯಾಕೆ ಇವರಿಗೆ ಟಿಪ್ಪು ಜಯಂತಿ ಬೇಡ ಎಂದು ಪ್ರಶ್ನಿಸುವಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಕಿಡಿಕಾರಿದರು.