ಅಯೋಧ್ಯೆ ತೀರ್ಪು ಏನೇ ಬಂದರೂ ಅದು ಭಾರತಕ್ಕೆ ಹೊಸ ಅಧ್ಯಾಯ ಆರಂಭವಾಗಿರಬೇಕು : ಅಣ್ಣಾಮಲೈ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತೀರ್ಪು ಏನೇ ಬಂದರೂ ಅದು ಭಾರತಕ್ಕೆ ಹೊಸ ಅಧ್ಯಾಯ ಆರಂಭವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅಣ್ಣಾಮಲೈ ತಮ್ಮ ಟ್ವಿಟ್ಟರಿನಲ್ಲಿ, ಅಯೋಧ್ಯೆ ಬಗ್ಗೆ ಏನೇ ತೀರ್ಪು ಬಂದರೂ ಅದು ಹೊಸ ಭಾರತಕ್ಕೆ ಮುನ್ನುಡಿ. ಈ ದಿನವು ಮಾನವೀಯತೆಗೆ ಶಾಂತಿ, ಸಹನೆ ಹಾಗೂ ಗೌರವವನ್ನು ನೀಡಲಿ. ನಾವು ಸ್ವತಃ ಹೇರಿದ ಗುರುತುಗಳನ್ನು ತೆಗೆದು ಹಾಗೂ ನಮ್ಮ ‘ಭಾರತೀಯ’ ಗುರುತನ್ನು ಮೊದಲು ತರುವ ದಿನ ಆಗಿರಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ನೋಡಿ ಅಣ್ಣಾಮಲೈ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು, “ನೀವು ಹೇಳಿದ್ದು ನಿಜ ಸರ್, ನಾವು ಮೊದಲು ಭಾರತೀಯರಾಗಿರಬೇಕು” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಣ್ಣಾಮಲೈ ಅವರ ಮಾತನ್ನು ಒಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.