ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ – vishwanews24

Featured, ಉಡುಪಿ, ರಾಷ್ಟ್ರ ನ್ಯೂಸ್

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ

ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೇಲ್ವಿಚಾರಣೆಗಾಗಿ ಒಂಬತ್ತು ಮಂದಿ ಸಂತರುಗಳ ಸಮಿತಿ ರಚನೆ ಮಾಡಲಾಗಿದ್ದು, ಇದರಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೂ ಸ್ಥಾನ ಲಭಿಸಿದೆ.

ಶ್ರೀರಾಮ ಮಂದಿರದ ಟ್ರಸ್ಟ್ ಈ ಸಮ್ಮತಿ ನೀಡಿದ್ದು, ಇದರ ಅಧ್ಯಕ್ಷರಾಗಿ ಮಹಂತ ನೃತ್ಯ ಗೋವಿಂದ ದೇವ ಗಿರಿ ಅವರು ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: 

ದ್ವೇಷ ಭಾಷಣ ಮಾಡಿರುವ ಸಿ.ಟಿ.ರವಿಯನ್ನು ಕೂಡಲೇ ಬಂಧಿಸಿ: ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹ – vishwanews24

 

ಸಮಿತಿಯಲ್ಲಿ ಜಗದ್ಗುರು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ, ನಿರ್ಮೋಹಿ ಅಖಾಡದ ದಿನೇಂದ್ರ ದಾಸ್, ಮುನಿರಾಮ್ ಚವಾನಿಯ ಕಮಲನಯನ ದಾಸ್, ರಾಮವಲ್ಲಭ ಕುಂಜದ ರಾಜ್‌ಕುಮಾರ್ ದಾಸ್ ಹಾಗೂ ರಾಮ ಕಥಾ ಕುಂಜದ ರಾಮಾನಂದ ದಾಸ್ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ಮುಖಂಡರು ಸದಸ್ಯರಾಗಿದ್ದಾರೆ.

Leave a Reply