ಅ.12ರಂದು(ನಾಳೆ) ಧ್ವನಿ ಮತ್ತು ಕಂಪನದೊಂದಿಗೆ ಕಂಪಿಸಲಿದೆ ನಿಮ್ಮ ಮೊಬೈಲ್, ಆತಂಕ ಪಡಬೇಕಾದ ಅಗತ್ಯವಿಲ್ಲ- Vishwanews24

Featured, ಉಡುಪಿ, ದಕ್ಷಿಣ ಕನ್ನಡ

ಅ.12ರಂದು(ನಾಳೆ) ಧ್ವನಿ ಮತ್ತು ಕಂಪನದೊಂದಿಗೆ ಕಂಪಿಸಲಿದೆ ನಿಮ್ಮ ಮೊಬೈಲ್, ಆದರೆ ಭಯ ಬೇಡ..!

ಮಂಗಳೂರು : ಭಾರತದ ದೂರಸಂಪರ್ಕ ಇಲಾಖೆ (DOT ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚರಿಕೆಯ ಸೂಚನೆಯ ಬಗ್ಗೆ ಅ.12ರಂದು(ನಾಳೆ) ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ.

ಈ ಸಂದರ್ಭದಲ್ಲಿ ಧ್ವನಿ ಮತ್ತು ಕಂಪನದೊಂದಿಗೆ ನಿಮ್ಮ ಮೊಬೈಲ್ ಫೋನ್‌ಗೆ ಎಚ್ಚರಿಕೆಯ ಸಂದೇಶ ಬರಲಿದೆ.

ಈ ಎಚ್ಚರಿಕೆಗಳು ವಿಪತ್ತು ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ .

ಯಾರೂ ಕೂಡಾ ಈ ಎಚ್ಚರಿಕೆಯ ಹಿನ್ನೆಯಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಭಾರತದ ದೂರಸಂಪರ್ಕ ಇಲಾಖೆ (DOT) ತಿಳಿಸಿದೆ.

ಉಡುಪಿ : ಮಹಿಷಾ ದಸರಾದಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತದೆ : ಶೋಭಾ ಕರಂದ್ಲಾಜೆ – Vishwanews24

Leave a Reply